വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
185 : 2

شَهْرُ رَمَضَانَ الَّذِیْۤ اُنْزِلَ فِیْهِ الْقُرْاٰنُ هُدًی لِّلنَّاسِ وَبَیِّنٰتٍ مِّنَ الْهُدٰی وَالْفُرْقَانِ ۚ— فَمَنْ شَهِدَ مِنْكُمُ الشَّهْرَ فَلْیَصُمْهُ ؕ— وَمَنْ كَانَ مَرِیْضًا اَوْ عَلٰی سَفَرٍ فَعِدَّةٌ مِّنْ اَیَّامٍ اُخَرَ ؕ— یُرِیْدُ اللّٰهُ بِكُمُ الْیُسْرَ وَلَا یُرِیْدُ بِكُمُ الْعُسْرَ ؗ— وَلِتُكْمِلُوا الْعِدَّةَ وَلِتُكَبِّرُوا اللّٰهَ عَلٰی مَا هَدٰىكُمْ وَلَعَلَّكُمْ تَشْكُرُوْنَ ۟

ರಮe಼Áನ್ ತಿಂಗಳಲ್ಲೇ ಕುರ್‌ಆನ್ ಅವತೀರ್ಣಗೊಳಿಸಲಾಗಿದೆ. ಅದು ಸಕಲ ಜನರಿಗೆ ಮಾರ್ಗದರ್ಶನವಾಗಿಯೂ ಸನ್ಮಾರ್ಗ ಹಾಗೂ ಸತ್ಯಾಸತ್ಯತೆಗಳನ್ನು ಬೇರ್ಪಡಿಸುವ ಸುಸ್ಪಷ್ಟ ಆಧಾರ ಪ್ರಮಾಣದ ಮಾನದಂಡವಾಗಿದೆ. ಇನ್ನು ನಿಮ್ಮ ಪೈಕಿ ಯಾರು ಈ ತಿಂಗಳನ್ನು ಪಡೆಯುತ್ತಾನೋ ಅವನು ಉಪವಾಸ ಆಚರಿಸಲಿ. ಇನ್ನು ಯಾರಾದರೂ ರೋಗಿಯಾಗಿದ್ದರೆ ಇಲ್ಲವೇ ಪ್ರಯಾಣದಲ್ಲಿದ್ದರೇ ಅವನು ಬೇರೆ ದಿನಗಳಲ್ಲಿ ಉಪವಾಸದ ಸಂಖ್ಯೆಯನ್ನು ಪೂರ್ತಿಗೊಳಿಸಲಿ. ಅಲ್ಲಾಹನು ನಿಮಗೆ ಅನುಕೂಲತೆಯನ್ನು ಬಯಸುತ್ತಾನೆ ಹೊರತು ಕ್ಲಿಷ್ಟತೆಯನ್ನಲ್ಲ ಮತ್ತು ನೀವು ಸಂಖ್ಯೆಯನ್ನು ಪೂರ್ತಿಗೊಳಿಸಲ್ಲಿಕ್ಕಾಗಿ ಅಲ್ಲಾಹನು ನಿಮಗೆ ಸನ್ಮಾರ್ಗವನ್ನು ತೋರಿಸಿಕೊಟ್ಟ ಸಲುವಾಗಿ ನೀವು ಅವನ ಘನತೆಯನ್ನು ಘೋಷಿಸಲಿಕ್ಕಾಗಿ ಮತ್ತು ಕೃತಜ್ಞತೆ ಸಲ್ಲಿಸಲಿಕ್ಕಾಗಿ (ನಿಮಗೆ ಆದೇಶಿಸಲಾಗಿದೆ.) ಅವನು ಬಯಸುತ್ತಾನೆ. info
التفاسير: