വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
126 : 2

وَاِذْ قَالَ اِبْرٰهٖمُ رَبِّ اجْعَلْ هٰذَا بَلَدًا اٰمِنًا وَّارْزُقْ اَهْلَهٗ مِنَ الثَّمَرٰتِ مَنْ اٰمَنَ مِنْهُمْ بِاللّٰهِ وَالْیَوْمِ الْاَخِرِ ؕ— قَالَ وَمَنْ كَفَرَ فَاُمَتِّعُهٗ قَلِیْلًا ثُمَّ اَضْطَرُّهٗۤ اِلٰی عَذَابِ النَّارِ ؕ— وَبِئْسَ الْمَصِیْرُ ۟

(ಆಗ ಇಬ್ರಾಹೀಮ್(ಅ) ಹೇಳಿದರು) ನನ್ನ ಪ್ರಭುವೇ, ಈ ಪ್ರದೇಶವನ್ನು ಶಾಂತಿಯ ನಾಡನ್ನಾಗಿ ಮಾಡು ಮತ್ತು ಇದರ ವಾಸಿಗಳ ಪೈಕಿ ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿರಿಸುವವರಿಗೆ ಫಲ ವೃಕ್ಷಾದಿಗಳಿಂದ ಆಹಾರವನ್ನು ನೀಡು ಎಂದು ಪ್ರಾರ್ಥಿಸಿದ ಸಂದರ್ಭವನ್ನು ಸ್ಮರಿಸಿರಿ. ಅಲ್ಲಾಹನು ಹೇಳಿದನು. ನಾನು ಸತ್ಯನಿಷೇಧಿಗಳಿಗೂ ತಾತ್ಕಾಲಿಕ ಸುಖಭೋಗವನ್ನು ನೀಡುವೆನು ಅನಂತರ (ಸತ್ಯನಿಷೇಧದ ನಿಮಿತ್ತ) ಅವರನ್ನು ನರಕ ಯಾತನೆಯೆಡೆಗೆ ಬರಲು ಅನಿವಾರ್ಯಗೊಳಿಸುವೆನು. ಅವರು ತಲುಪುವ ಸ್ಥಳವು ಅತೀ ನಿಕೃಷ್ಟವಾಗಿದೆ. info
التفاسير: