വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

പേജ് നമ്പർ:close

external-link copy
34 : 14

وَاٰتٰىكُمْ مِّنْ كُلِّ مَا سَاَلْتُمُوْهُ ؕ— وَاِنْ تَعُدُّوْا نِعْمَتَ اللّٰهِ لَا تُحْصُوْهَا ؕ— اِنَّ الْاِنْسَانَ لَظَلُوْمٌ كَفَّارٌ ۟۠

ನೀವು ಅವನಿಂದ ಬೇಡಿದ್ದನ್ನೆಲ್ಲಾ ಅವನು ನಿಮಗೆ ನೀಡಿರುವನು ಇನ್ನು ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಕೆ ಮಾಡಲು ಬಯಸಿದರೆ ಅವುಗಳನ್ನು ನೀವು ಎಣಿಸಲಾರಿರಿ. ನಿಜವಾಗಿಯೂ ಮನುಷÀ್ಯನು ಮಹಾ ಅಕ್ರಮಿಯೂ ಕೃತಘ್ನನೂ ಆಗಿದ್ದಾನೆ. info
التفاسير:

external-link copy
35 : 14

وَاِذْ قَالَ اِبْرٰهِیْمُ رَبِّ اجْعَلْ هٰذَا الْبَلَدَ اٰمِنًا وَّاجْنُبْنِیْ وَبَنِیَّ اَنْ نَّعْبُدَ الْاَصْنَامَ ۟ؕ

ಇಬ್ರಾಹೀಮರು ಪ್ರಾರ್ಥಿಸಿದ ಸಂದರ್ಭವನ್ನು ಸ್ಮರಿಸಿರಿ; ಓ ನನ್ನ ಪ್ರಭುವೇ ನೀನು ಈ ನಾಡನ್ನು (ಮಕ್ಕಾಃ) ಶಾಂತಿಯ ಬೀಡನ್ನಾಗಿ ಮಾಡು ಮತ್ತು ನನ್ನನ್ನು ನನ್ನ ಮಕ್ಕಳನ್ನು ವಿಗ್ರಹಾರಾಧನೆಯಿಂದ ರಕ್ಷಿಸು. info
التفاسير:

external-link copy
36 : 14

رَبِّ اِنَّهُنَّ اَضْلَلْنَ كَثِیْرًا مِّنَ النَّاسِ ۚ— فَمَنْ تَبِعَنِیْ فَاِنَّهٗ مِنِّیْ ۚ— وَمَنْ عَصَانِیْ فَاِنَّكَ غَفُوْرٌ رَّحِیْمٌ ۟

ಓ ನನ್ನ ಪ್ರಭುವೇ ಈ ವಿಗ್ರಹಗಳು ಅನೇಕ ಜನರನ್ನು ದಾರಿಗೆಡಿಸಿಬಿಟ್ಟಿವೆ ಆದ್ದರಿಂದ ಯಾರು ನನ್ನನ್ನು ಅನುಸರಿಸುವವರೋ ಅವರು ನನ್ನವರು ಮತ್ತು ಯಾರು ನನ್ನನ್ನು ಧಿಕ್ಕÀರಿಸುವರೋ ಅವರು, (ಅವರ ವಿಷಯ ನಿನ್ನ ಮೇಲಿದೆ) ನಿಶ್ಚಯವಾಗಿಯೂ ನೀನು ಮಹಾ ಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುವೆ. info
التفاسير:

external-link copy
37 : 14

رَبَّنَاۤ اِنِّیْۤ اَسْكَنْتُ مِنْ ذُرِّیَّتِیْ بِوَادٍ غَیْرِ ذِیْ زَرْعٍ عِنْدَ بَیْتِكَ الْمُحَرَّمِ ۙ— رَبَّنَا لِیُقِیْمُوا الصَّلٰوةَ فَاجْعَلْ اَفْىِٕدَةً مِّنَ النَّاسِ تَهْوِیْۤ اِلَیْهِمْ وَارْزُقْهُمْ مِّنَ الثَّمَرٰتِ لَعَلَّهُمْ یَشْكُرُوْنَ ۟

ನಮ್ಮ ಪ್ರಭುವೇ, ನಾನು ನನ್ನ ಸಂತತಿಗಳಲ್ಲಿ ಕೆಲವರನ್ನು ಒಂದು ನಿರ್ಜಲ ನಿಷ್ಫಲ ಬಂಜರು ಕಣಿವೆಯಲ್ಲಿ ನಿನ್ನ ಪವಿತ್ರ ಭವನದ ಸಮೀಪ ನೆಲೆಸಿರುವೆನು. ನಮ್ಮ ಪ್ರಭುವೇ ಇದು ಅವರು ನಮಾಜ್ ಸಂಸ್ಥಾಪಿಸಲೆAದಾಗಿದೆ. ಆದ್ದರಿಂದ ನೀನು ಕೆಲವು ಜನರ ಹೃದಯಗಳನ್ನು ಅವರೆಡೆಗೆ ಒಲಿಯುವಂತೆ ಮಾಡು, ಮತ್ತು ಅವರಿಗೆ ಫಲಗಳ ಅನ್ನಾಹಾರವನ್ನು ದಯಪಾಲಿಸು. ಅವರು ಕೃತಜ್ಞತೆ ತೋರಬಹುದು. info
التفاسير:

external-link copy
38 : 14

رَبَّنَاۤ اِنَّكَ تَعْلَمُ مَا نُخْفِیْ وَمَا نُعْلِنُ ؕ— وَمَا یَخْفٰی عَلَی اللّٰهِ مِنْ شَیْءٍ فِی الْاَرْضِ وَلَا فِی السَّمَآءِ ۟

ನಮ್ಮ ಪ್ರಭುವೇ ನಾವು ರಹಸ್ಯವಾಗಿಡುವುದನ್ನು ಬಹಿರಂಗಗೊಳಿಸುವುದನ್ನು ನೀನು ಚೆನ್ನಾಗಿ ಬಲ್ಲೆ, ಮತ್ತು ಭೂಮಿ ಆಕಾಶದ ಯಾವೊಂದು ವಸ್ತುವೂ ಅಲ್ಲಾಹನಿಂದ ಅಡಗಿರುವುದಿಲ್ಲ. info
التفاسير:

external-link copy
39 : 14

اَلْحَمْدُ لِلّٰهِ الَّذِیْ وَهَبَ لِیْ عَلَی الْكِبَرِ اِسْمٰعِیْلَ وَاِسْحٰقَ ؕ— اِنَّ رَبِّیْ لَسَمِیْعُ الدُّعَآءِ ۟

ನನಗೆ ವೃದ್ಧಾಪ್ಯದಲ್ಲಿ ಇಸ್ಮಾಯೀಲ್ ಮತ್ತು ಇಸ್‌ಹಾಕರನ್ನು ದಯಪಾಲಿಸಿದ ಅಲ್ಲಾಹನಿಗೇ ಸರ್ವಸ್ತುತಿ. ನಿಶ್ಚಯವಾಗಿಯೂ ನನ್ನ ಪ್ರಭು ಪ್ರಾರ್ಥನೆಯನ್ನು ಚೆನ್ನಾಗಿ ಆಲಿಸುವನಾಗಿರುತ್ತಾನೆ. info
التفاسير:

external-link copy
40 : 14

رَبِّ اجْعَلْنِیْ مُقِیْمَ الصَّلٰوةِ وَمِنْ ذُرِّیَّتِیْ ۖۗ— رَبَّنَا وَتَقَبَّلْ دُعَآءِ ۟

ನನಗೆ ವೃದ್ಧಾಪ್ಯದಲ್ಲಿ ಇಸ್ಮಾಯೀಲ್ ಮತ್ತು ಇಸ್‌ಹಾಕರನ್ನು ದಯಪಾಲಿಸಿದ ಅಲ್ಲಾಹನಿಗೇ ಸರ್ವಸ್ತುತಿ. ನಿಶ್ಚಯವಾಗಿಯೂ ನನ್ನ ಪ್ರಭು ಪ್ರಾರ್ಥನೆಯನ್ನು ಚೆನ್ನಾಗಿ ಆಲಿಸುವನಾಗಿರುತ್ತಾನೆ. info
التفاسير:

external-link copy
41 : 14

رَبَّنَا اغْفِرْ لِیْ وَلِوَالِدَیَّ وَلِلْمُؤْمِنِیْنَ یَوْمَ یَقُوْمُ الْحِسَابُ ۟۠

ಓ ನಮ್ಮ ಪ್ರಭುವೇ ವಿಚಾರಣೆ ನಡೆಯುವ ದಿನ ನನ್ನನ್ನು ನನ್ನ ಮಾತಾ-ಪಿತರನ್ನು ಮತ್ತು ಸತ್ಯವಿಶ್ವಾಸಿಗಳನ್ನು ಕ್ಷಮಿಸಿಬಿಡು. info
التفاسير:

external-link copy
42 : 14

وَلَا تَحْسَبَنَّ اللّٰهَ غَافِلًا عَمَّا یَعْمَلُ الظّٰلِمُوْنَ ؕ۬— اِنَّمَا یُؤَخِّرُهُمْ لِیَوْمٍ تَشْخَصُ فِیْهِ الْاَبْصَارُ ۟ۙ

ಅಕ್ರಮಿಗಳು ಮಾಡುತ್ತಿರುವ ಕೃತ್ಯಗಳ ಕುರಿತು ಅಲ್ಲಾಹನು ಅಲಕ್ಷö್ಯನೆಂದು ತಿಳಿಯಬೇಡಿ ಅವನಂತೂ ಅವರಿಗೆ ಕಣ್ಣುಗಳನ್ನು ದಿಟ್ಟಿಸುತ್ತಲೇ ಇರುವ ದಿನದವರೆಗೆ ಕಾಲಾವಕಾಶ ನೀಡಿರುತ್ತಾನೆ. info
التفاسير: