ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಹಂಝ ಪುತ್ತೂರು

ಅಲ್- ಅಅ್ ರಾಫ್

external-link copy
1 : 7

الٓمّٓصٓ ۟ۚ

ಅಲಿಫ್, ಲಾಮ್, ಮೀಮ್, ಸ್ವಾದ್ info
التفاسير:

external-link copy
2 : 7

كِتٰبٌ اُنْزِلَ اِلَیْكَ فَلَا یَكُنْ فِیْ صَدْرِكَ حَرَجٌ مِّنْهُ لِتُنْذِرَ بِهٖ وَذِكْرٰی لِلْمُؤْمِنِیْنَ ۟

ಇದು ನಿಮಗೆ ಅವತೀರ್ಣಗೊಳಿಸಲಾದ ಗ್ರಂಥವಾಗಿದೆ. ಇದರ ಬಗ್ಗೆ ನಿಮ್ಮ ಹೃದಯದಲ್ಲಿ ಯಾವುದೇ ಬೇಸರವುಂಟಾಗದಿರಲಿ. ಇದರ ಮೂಲಕ ನೀವು ಮುನ್ನೆಚ್ಚರಿಕೆ ನೀಡುವುದಕ್ಕಾಗಿ ಮತ್ತು ಸತ್ಯವಿಶ್ವಾಸಿಗಳಿಗೆ ಒಂದು ಉಪದೇಶವಾಗಿ (ಇದನ್ನು ಅವತೀರ್ಣಗೊಳಿಸಲಾಗಿದೆ). info
التفاسير:

external-link copy
3 : 7

اِتَّبِعُوْا مَاۤ اُنْزِلَ اِلَیْكُمْ مِّنْ رَّبِّكُمْ وَلَا تَتَّبِعُوْا مِنْ دُوْنِهٖۤ اَوْلِیَآءَ ؕ— قَلِیْلًا مَّا تَذَكَّرُوْنَ ۟

ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ನಿಮಗೆ ಅವತೀರ್ಣವಾದುದನ್ನು ಅನುಸರಿಸಿರಿ. ಅವನ ಹೊರತು ಬೇರೆ (ಸ್ವಘೋಷಿತ) ರಕ್ಷಕರನ್ನು ಅನುಸರಿಸಬೇಡಿ. ನೀವು ಸ್ವಲ್ಪವೇ ಉಪದೇಶ ಪಡೆಯುತ್ತೀರಿ. info
التفاسير:

external-link copy
4 : 7

وَكَمْ مِّنْ قَرْیَةٍ اَهْلَكْنٰهَا فَجَآءَهَا بَاْسُنَا بَیَاتًا اَوْ هُمْ قَآىِٕلُوْنَ ۟

ನಾವು ಎಷ್ಟು ಊರುಗಳನ್ನು ನಾಶ ಮಾಡಿದ್ದೇವೆ! ಅವರು ರಾತ್ರಿ ಅಥವಾ ಮಧ್ಯಾಹ್ನದ ನಿದ್ದೆಯಲ್ಲಿರುವಾಗ ನಮ್ಮ ಶಿಕ್ಷೆಯು ಅವರ ಬಳಿಗೆ ಬಂದಿದೆ. info
التفاسير:

external-link copy
5 : 7

فَمَا كَانَ دَعْوٰىهُمْ اِذْ جَآءَهُمْ بَاْسُنَاۤ اِلَّاۤ اَنْ قَالُوْۤا اِنَّا كُنَّا ظٰلِمِیْنَ ۟

ನಮ್ಮ ಶಿಕ್ಷೆಯು ಅವರ ಬಳಿಗೆ ಬಂದಾಗ ಅವರ ರೋದನವು, “ನಾವು ಅಕ್ರಮಿಗಳಾಗಿದ್ದೆವು” ಎಂದು ಹೇಳುವುದಲ್ಲದೆ ಬೇರೇನೂ ಆಗಿರಲಿಲ್ಲ. info
التفاسير:

external-link copy
6 : 7

فَلَنَسْـَٔلَنَّ الَّذِیْنَ اُرْسِلَ اِلَیْهِمْ وَلَنَسْـَٔلَنَّ الْمُرْسَلِیْنَ ۟ۙ

ಯಾರ ಬಳಿಗೆ ಸಂದೇಶವಾಹಕರನ್ನು ಕಳುಹಿಸಲಾಯಿತೋ ಅವರನ್ನು ನಾವು ಖಂಡಿತ ಪ್ರಶ್ನಿಸುವೆವು. ಅವರ ಬಳಿಗೆ ಕಳುಹಿಸಲಾದ ಸಂದೇಶವಾಹಕರೊಡನೆಯೂ ನಾವು ಪ್ರಶ್ನಿಸುವೆವು. info
التفاسير:

external-link copy
7 : 7

فَلَنَقُصَّنَّ عَلَیْهِمْ بِعِلْمٍ وَّمَا كُنَّا غَآىِٕبِیْنَ ۟

ನಂತರ (ನಮ್ಮ ಬಳಿಯಿರುವ) ಜ್ಞಾನದ ಮೂಲಕ ನಾವು ಅವರಿಗೆ ವಿವರಿಸಿಕೊಡುವೆವು. ನಾವು ಯಾವುದೇ ಸ್ಥಿತಿಯಲ್ಲೂ ಅವರಿಂದ ದೂರವಾಗಿರಲಿಲ್ಲ. info
التفاسير:

external-link copy
8 : 7

وَالْوَزْنُ یَوْمَىِٕذِ ١لْحَقُّ ۚ— فَمَنْ ثَقُلَتْ مَوَازِیْنُهٗ فَاُولٰٓىِٕكَ هُمُ الْمُفْلِحُوْنَ ۟

ಆ ದಿನದಂದು (ಕರ್ಮಗಳನ್ನು) ತೂಗುವುದು ಸತ್ಯವಾಗಿದೆ. ಆಗ ಯಾರ ತಕ್ಕಡಿ ಭಾರವಾಗುತ್ತದೋ ಅವರೇ ಯಶಸ್ವಿಯಾದವರು. info
التفاسير:

external-link copy
9 : 7

وَمَنْ خَفَّتْ مَوَازِیْنُهٗ فَاُولٰٓىِٕكَ الَّذِیْنَ خَسِرُوْۤا اَنْفُسَهُمْ بِمَا كَانُوْا بِاٰیٰتِنَا یَظْلِمُوْنَ ۟

ಯಾರ ತಕ್ಕಡಿ ಹಗುರವಾಗುತ್ತದೋ ಅವರೇ ಸ್ವಯಂ ನಷ್ಟಹೊಂದಿದವರು. ಏಕೆಂದರೆ ಅವರು ನಮ್ಮ ವಚನಗಳೊಂದಿಗೆ ಅಕ್ರಮವೆಸಗುತ್ತಿದ್ದರು. info
التفاسير:

external-link copy
10 : 7

وَلَقَدْ مَكَّنّٰكُمْ فِی الْاَرْضِ وَجَعَلْنَا لَكُمْ فِیْهَا مَعَایِشَ ؕ— قَلِیْلًا مَّا تَشْكُرُوْنَ ۟۠

ನಿಶ್ಚಯವಾಗಿಯೂ ನಾವು ನಿಮಗೆ ಭೂಮಿಯಲ್ಲಿ ಅಧಿಕಾರವನ್ನು ನೀಡಿದೆವು. ಅಲ್ಲಿ ನಿಮಗೆ ಉಪಜೀವನ ಮಾರ್ಗಗಳನ್ನು ಮಾಡಿಕೊಟ್ಟೆವು. ನೀವು ಅಲ್ಪವೇ ಕೃತಜ್ಞರಾಗುತ್ತೀರಿ. info
التفاسير:

external-link copy
11 : 7

وَلَقَدْ خَلَقْنٰكُمْ ثُمَّ صَوَّرْنٰكُمْ ثُمَّ قُلْنَا لِلْمَلٰٓىِٕكَةِ اسْجُدُوْا لِاٰدَمَ ۖۗ— فَسَجَدُوْۤا اِلَّاۤ اِبْلِیْسَ ؕ— لَمْ یَكُنْ مِّنَ السّٰجِدِیْنَ ۟

ನಿಶ್ಚಯವಾಗಿಯೂ ನಾವು ನಿಮ್ಮನ್ನು ಸೃಷ್ಟಿಸಿದೆವು. ನಂತರ ನಿಮಗೆ ರೂಪವನ್ನು ನೀಡಿದೆವು. ನಂತರ ನಾವು ದೇವದೂತರುಗಳೊಡನೆ ಹೇಳಿದೆವು: “ನೀವು ಆದಮರಿಗೆ ಸಾಷ್ಟಾಂಗ ಮಾಡಿರಿ.” ಅವರು ಸಾಷ್ಟಾಂಗ ಮಾಡಿದರು—ಇಬ್ಲೀಸನ ಹೊರತು. ಅವನು ಸಾಷ್ಟಾಂಗ ಮಾಡುವವರಲ್ಲಿ ಸೇರಲಿಲ್ಲ. info
التفاسير: