ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಹಂಝ ಪುತ್ತೂರು

external-link copy
44 : 5

اِنَّاۤ اَنْزَلْنَا التَّوْرٰىةَ فِیْهَا هُدًی وَّنُوْرٌ ۚ— یَحْكُمُ بِهَا النَّبِیُّوْنَ الَّذِیْنَ اَسْلَمُوْا لِلَّذِیْنَ هَادُوْا وَالرَّبّٰنِیُّوْنَ وَالْاَحْبَارُ بِمَا اسْتُحْفِظُوْا مِنْ كِتٰبِ اللّٰهِ وَكَانُوْا عَلَیْهِ شُهَدَآءَ ۚ— فَلَا تَخْشَوُا النَّاسَ وَاخْشَوْنِ وَلَا تَشْتَرُوْا بِاٰیٰتِیْ ثَمَنًا قَلِیْلًا ؕ— وَمَنْ لَّمْ یَحْكُمْ بِمَاۤ اَنْزَلَ اللّٰهُ فَاُولٰٓىِٕكَ هُمُ الْكٰفِرُوْنَ ۟

ನಿಶ್ಚಯವಾಗಿಯೂ ನಾವು ತೌರಾತನ್ನು ಅವತೀರ್ಣಗೊಳಿಸಿದ್ದೇವೆ. ಅದರಲ್ಲಿ ಸನ್ಮಾರ್ಗ ಮತ್ತು ಬೆಳಕಿದೆ. (ಅಲ್ಲಾಹನಿಗೆ) ಶರಣಾದ ಪ್ರವಾದಿಗಳು, ದೇವನಿಷ್ಠರು ಮತ್ತು ವಿದ್ವಾಂಸರು ಅದರಲ್ಲಿರುವಂತೆ ಯಹೂದಿಗಳ ನಡುವೆ ತೀರ್ಪು ನೀಡುತ್ತಿದ್ದರು. ಏಕೆಂದರೆ ಅಲ್ಲಾಹನ ಗ್ರಂಥದ ಸಂರಕ್ಷಣೆಯನ್ನು ಅವರಿಗೆ ವಹಿಸಿಕೊಡಲಾಗಿತ್ತು. ಅವರು ಅದಕ್ಕೆ ಸಾಕ್ಷಿಗಳಾಗಿದ್ದರು. ಆದ್ದರಿಂದ ನೀವು ಜನರನ್ನು ಭಯಪಡಬೇಡಿ. ನನ್ನನ್ನು ಭಯಪಡಿರಿ. ನನ್ನ ವಚನಗಳನ್ನು ಕೀಳು ದರಕ್ಕೆ ಮಾರಾಟ ಮಾಡಬೇಡಿ. ಅಲ್ಲಾಹು ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ಯಾರು ತೀರ್ಪು ನೀಡುವುದಿಲ್ಲವೋ ಅವರೇ ಸತ್ಯನಿಷೇಧಿಗಳು. info
التفاسير: