ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಹಂಝ ಪುತ್ತೂರು

ಪುಟ ಸಂಖ್ಯೆ:close

external-link copy
60 : 4

اَلَمْ تَرَ اِلَی الَّذِیْنَ یَزْعُمُوْنَ اَنَّهُمْ اٰمَنُوْا بِمَاۤ اُنْزِلَ اِلَیْكَ وَمَاۤ اُنْزِلَ مِنْ قَبْلِكَ یُرِیْدُوْنَ اَنْ یَّتَحَاكَمُوْۤا اِلَی الطَّاغُوْتِ وَقَدْ اُمِرُوْۤا اَنْ یَّكْفُرُوْا بِهٖ ؕ— وَیُرِیْدُ الشَّیْطٰنُ اَنْ یُّضِلَّهُمْ ضَلٰلًا بَعِیْدًا ۟

ನಿಮಗೆ ಅವತೀರ್ಣವಾದ ಗ್ರಂಥದಲ್ಲಿ ಮತ್ತು ನಿಮಗಿಂತ ಮುಂಚೆ ಅವತೀರ್ಣವಾದ ಗ್ರಂಥಗಳಲ್ಲಿ ನಾವು ವಿಶ್ವಾಸವಿಟ್ಟಿದ್ದೇವೆ ಎಂದು ವಾದಿಸುವವರನ್ನು ನೀವು ನೋಡಿಲ್ಲವೇ? ಅವರು ತೀರ್ಪಿಗಾಗಿ ಮಿಥ್ಯ ದೇವರುಗಳ ಬಳಿಗೆ ಹೋಗಲು ಬಯಸುತ್ತಾರೆ. ವಾಸ್ತವವಾಗಿ, ಮಿಥ್ಯ ದೇವರುಗಳನ್ನು ನಿಷೇಧಿಸಬೇಕೆಂದು ಅವರಿಗೆ ಆಜ್ಞಾಪಿಸಲಾಗಿತ್ತು. ಶೈತಾನನು ಅವರನ್ನು ವಿದೂರ ದುರ್ಮಾರ್ಗದಲ್ಲಿ ಬಿಟ್ಟುಬಿಡಲು ಬಯಸುತ್ತಾನೆ. info
التفاسير:

external-link copy
61 : 4

وَاِذَا قِیْلَ لَهُمْ تَعَالَوْا اِلٰی مَاۤ اَنْزَلَ اللّٰهُ وَاِلَی الرَّسُوْلِ رَاَیْتَ الْمُنٰفِقِیْنَ یَصُدُّوْنَ عَنْكَ صُدُوْدًا ۟ۚ

“ಅಲ್ಲಾಹು ಅವತೀರ್ಣಗೊಳಿಸಿದ ಗ್ರಂಥಕ್ಕೆ ಮತ್ತು ಅವನ ಸಂದೇಶವಾಹಕರ ಕಡೆಗೆ ಬನ್ನಿರಿ” ಎಂದು ಅವರೊಡನೆ ಹೇಳಲಾದರೆ, ಆ ಕಪಟವಿಶ್ವಾಸಿಗಳು ದ್ವೇಷದಿಂದ ನಿಮ್ಮನ್ನು ಅವಗಣಿಸಿ ನಡೆಯುವುದನ್ನು ನೀವು ಕಾಣುವಿರಿ. info
التفاسير:

external-link copy
62 : 4

فَكَیْفَ اِذَاۤ اَصَابَتْهُمْ مُّصِیْبَةٌ بِمَا قَدَّمَتْ اَیْدِیْهِمْ ثُمَّ جَآءُوْكَ یَحْلِفُوْنَ ۖۗ— بِاللّٰهِ اِنْ اَرَدْنَاۤ اِلَّاۤ اِحْسَانًا وَّتَوْفِیْقًا ۟

ಅವರ ಕೈಗಳು ಈಗಾಗಲೇ ಮಾಡಿಟ್ಟ ದುಷ್ಕರ್ಮಗಳ ಕಾರಣದಿಂದ ಅವರಿಗೇನಾದರೂ ಅನಾಹುತ ಸಂಭವಿಸಿದರೆ, ನಂತರ ಅವರು ತಮ್ಮ ಬಳಿಗೆ ಬಂದು ಅಲ್ಲಾಹನ ಮೇಲೆ ಆಣೆ ಮಾಡುತ್ತಾ, “ನಾವು ಒಳಿತು ಮತ್ತು ಹೊಂದಾಣಿಕೆಯನ್ನು ಮಾತ್ರ ಬಯಸಿದ್ದೆವು” ಎಂದು ಹೇಳುವಾಗ ಅವರ ಸ್ಥಿತಿ ಹೇಗಿರಬಹುದು? info
التفاسير:

external-link copy
63 : 4

اُولٰٓىِٕكَ الَّذِیْنَ یَعْلَمُ اللّٰهُ مَا فِیْ قُلُوْبِهِمْ ۗ— فَاَعْرِضْ عَنْهُمْ وَعِظْهُمْ وَقُلْ لَّهُمْ فِیْۤ اَنْفُسِهِمْ قَوْلًا بَلِیْغًا ۟

ಅವರ ಹೃದಯಗಳಲ್ಲಿ ಏನಿದೆಯೆಂದು ಅಲ್ಲಾಹು ತಿಳಿದಿದ್ದಾನೆ. ಆದ್ದರಿಂದ ಅವರನ್ನು ಬಿಟ್ಟು ದೂರ ಸರಿಯಿರಿ; ಅವರಿಗೆ ಉಪದೇಶ ಮಾಡಿರಿ ಮತ್ತು ಅವರಿಗೆ ಹೃದಯಸ್ಪರ್ಶಿ ಮಾತನ್ನು ಹೇಳಿರಿ. info
التفاسير:

external-link copy
64 : 4

وَمَاۤ اَرْسَلْنَا مِنْ رَّسُوْلٍ اِلَّا لِیُطَاعَ بِاِذْنِ اللّٰهِ ؕ— وَلَوْ اَنَّهُمْ اِذْ ظَّلَمُوْۤا اَنْفُسَهُمْ جَآءُوْكَ فَاسْتَغْفَرُوا اللّٰهَ وَاسْتَغْفَرَ لَهُمُ الرَّسُوْلُ لَوَجَدُوا اللّٰهَ تَوَّابًا رَّحِیْمًا ۟

ಅಲ್ಲಾಹನ ಅಪ್ಪಣೆಯಿಂದ ಅನುಸರಿಸುವುದಕ್ಕಾಗಿಯೇ ಹೊರತು ನಾವು ಯಾವುದೇ ಸಂದೇಶವಾಹಕರನ್ನು ಕಳುಹಿಸಿಲ್ಲ. ಅವರು ಸ್ವಯಂ ಅವರ ಮೇಲೆಯೇ ಅಕ್ರಮವೆಸಗಿ, ನಂತರ ನಿಮ್ಮ ಬಳಿಗೆ ಬಂದು ಅಲ್ಲಾಹನಲ್ಲಿ ಕ್ಷಮೆಯಾಚಿಸಿದರೆ, ಮತ್ತು ಅವರ ಪರವಾಗಿ ಸಂದೇಶವಾಹಕರು ಕೂಡ ಕ್ಷಮೆಯಾಚಿಸಿದರೆ, ಅವರು ಅಲ್ಲಾಹನನ್ನು ಪಶ್ಚಾತ್ತಾಪ ಸ್ವೀಕರಿಸುವವನಾಗಿ ಮತ್ತು ದಯೆ ತೋರುವವನಾಗಿ ಕಾಣುವರು. info
التفاسير:

external-link copy
65 : 4

فَلَا وَرَبِّكَ لَا یُؤْمِنُوْنَ حَتّٰی یُحَكِّمُوْكَ فِیْمَا شَجَرَ بَیْنَهُمْ ثُمَّ لَا یَجِدُوْا فِیْۤ اَنْفُسِهِمْ حَرَجًا مِّمَّا قَضَیْتَ وَیُسَلِّمُوْا تَسْلِیْمًا ۟

ಇಲ್ಲ, ನಿಮ್ಮ ಪರಿಪಾಲಕನ (ಅಲ್ಲಾಹನ) ಮೇಲಾಣೆ! ಅವರು ತಮ್ಮ ನಡುವಿನ ಭಿನ್ನಮತಗಳಿಗೆ ನಿಮ್ಮನ್ನು ತೀರ್ಪುಗಾರನನ್ನಾಗಿ ಮಾಡಿ, ನಂತರ ನೀವು ನೀಡುವ ತೀರ್ಪನ್ನು ಯಾವುದೇ ಜಂಜಾಟವಿಲ್ಲದೆ ಸ್ವೀಕರಿಸಿ ಸಂಪೂರ್ಣ ವಿಧೇಯರಾಗುವ ತನಕ ಅವರು ಸತ್ಯವಿಶ್ವಾಸಿಗಳಾಗುವುದಿಲ್ಲ. info
التفاسير: