ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ

ಅಲ್ -ಹಶ್ರ್

external-link copy
1 : 59

سَبَّحَ لِلّٰهِ مَا فِی السَّمٰوٰتِ وَمَا فِی الْاَرْضِ ۚ— وَهُوَ الْعَزِیْزُ الْحَكِیْمُ ۟

ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳೂ ಅಲ್ಲಾಹನ ಪಾವಿತ್ರö್ಯವನ್ನು ಸ್ತುತಿಸುತ್ತಿವೆ ಮತ್ತು ಅವನು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿದ್ದಾನೆ. info
التفاسير:

external-link copy
2 : 59

هُوَ الَّذِیْۤ اَخْرَجَ الَّذِیْنَ كَفَرُوْا مِنْ اَهْلِ الْكِتٰبِ مِنْ دِیَارِهِمْ لِاَوَّلِ الْحَشْرِ ؔؕ— مَا ظَنَنْتُمْ اَنْ یَّخْرُجُوْا وَظَنُّوْۤا اَنَّهُمْ مَّا نِعَتُهُمْ حُصُوْنُهُمْ مِّنَ اللّٰهِ فَاَتٰىهُمُ اللّٰهُ مِنْ حَیْثُ لَمْ یَحْتَسِبُوْا وَقَذَفَ فِیْ قُلُوْبِهِمُ الرُّعْبَ یُخْرِبُوْنَ بُیُوْتَهُمْ بِاَیْدِیْهِمْ وَاَیْدِی الْمُؤْمِنِیْنَ ۗ— فَاعْتَبِرُوْا یٰۤاُولِی الْاَبْصَارِ ۟

ಗ್ರಂಥದವರ ಪೈಕಿ ಸತ್ಯನಿಷೇಧಿಗಳನ್ನು ಪ್ರಥಮ ಗಡಿಪಾರಿನ ಸಂದರ್ಭದಲ್ಲಿ ಅವರ ಮನೆಗಳಿಂದ ಹೊರಹಾಕಿದವನು ಅವನೇ ಆಗಿದ್ದಾನೆ. ಅವರು ಹೊರಬರುವರೆಂದು ನೀವು ಊಹಿಸಿಯೇ ಇರಲಿಲ್ಲ ಮತ್ತು ಸ್ವತಃ ಅವರು ತಮ್ಮನ್ನು ತಮ್ಮ ಕೋಟೆಗಳು ಅಲ್ಲಾಹನಿಂದ ರಕ್ಷಿಸಿಕೊಳ್ಳಬಲ್ಲವೆಂದು ಭಾವಿಸಿಕೊಂಡಿದ್ದರು. ಆದರೆ ಅವರು ಊಹಿಸಿರದಂತಹ ಕಡೆಯಿಂದ ಅಲ್ಲಾಹನು ಅವರ ಕಡೆಗೆ ಬಂದನು ಹಾಗೂ ಅವರ ಹೃದಯಗಳಲ್ಲಿ ಭೀತಿಯನ್ನು ಹುಟ್ಟಿಸಿದನು.. ಅವರು ಸ್ವತಃ ತಮ್ಮ ಕೈಗಳಿಂದ ಹಾಗೂ ಸತ್ಯ ವಿಶ್ವಾಸಿಗಳ ಕೈಗಳಿಂದ ತಮ್ಮ ಮನೆಗಳನ್ನು ಕೆಡವಿ ನಾಶ ಮಾಡುತ್ತಿದ್ದರು. ಆದ್ದರಿಂದ ಓ ದೃಷ್ಟಿಯುಳ್ಳವರೇ ನೀವು ಪಾಠ ಕಲಿಯಿರಿ. info
التفاسير:

external-link copy
3 : 59

وَلَوْلَاۤ اَنْ كَتَبَ اللّٰهُ عَلَیْهِمُ الْجَلَآءَ لَعَذَّبَهُمْ فِی الدُّنْیَا ؕ— وَلَهُمْ فِی الْاٰخِرَةِ عَذَابُ النَّارِ ۟

ಅಲ್ಲಾಹನು ಅವರ ಮೇಲೆ ಗಡಿಪಾರನ್ನು ವಿಧಿಸದಿರುತ್ತಿದ್ದರೆ ಖಂಡಿತ ಅವನು ಅವರನ್ನು ಇಹಲೋಕದಲ್ಲೇ ಶಿಕ್ಷಿಸುತ್ತಿದ್ದನು ಮತ್ತು ಅವರಿಗೆ ಪರಲೋಕದಲ್ಲಿ ನರಕಯಾತನೆ ಇದೆ. info
التفاسير: