ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ

ಪುಟ ಸಂಖ್ಯೆ:close

external-link copy
122 : 3

اِذْ هَمَّتْ طَّآىِٕفَتٰنِ مِنْكُمْ اَنْ تَفْشَلَا ۙ— وَاللّٰهُ وَلِیُّهُمَا ؕ— وَعَلَی اللّٰهِ فَلْیَتَوَكَّلِ الْمُؤْمِنُوْنَ ۟

ನಿಮ್ಮ ಎರಡು ಪಂಗಡಗಳು ಹೇಡಿತನ ತೋರಲು ಬಯಸಿದ ಸಂದರ್ಭವನ್ನು ಸ್ಮರಿಸಿರಿ ಆದರೆ ಅಲ್ಲಾಹನು ಅವರ ರಕ್ಷಕ ಹಾಗೂ ಸಹಾಯಕನಾಗಿದ್ದಾನೆ ಮತ್ತು ಸತ್ಯವಿಶ್ವಾಸಿಗಳು ಅವನ ಮೇಲೆ ಭರವಸೆವನ್ನಿಡಲಿ. info
التفاسير:

external-link copy
123 : 3

وَلَقَدْ نَصَرَكُمُ اللّٰهُ بِبَدْرٍ وَّاَنْتُمْ اَذِلَّةٌ ۚ— فَاتَّقُوا اللّٰهَ لَعَلَّكُمْ تَشْكُرُوْنَ ۟

ನೀವು ದುರ್ಬಲರಾಗಿದ್ದಾಗ ಬದ್ರ್ ಯುದ್ಧದಲ್ಲಿ ಅಲ್ಲಾಹನು ನಿಮಗೆ ಸಹಾಯ ಮಾಡಿದ್ದಾನೆ. ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ. ನೀವು ಕೃತಜ್ಞತೆ ಸಲ್ಲಿಸುವವರಾಗಲೂಬಹುದು. info
التفاسير:

external-link copy
124 : 3

اِذْ تَقُوْلُ لِلْمُؤْمِنِیْنَ اَلَنْ یَّكْفِیَكُمْ اَنْ یُّمِدَّكُمْ رَبُّكُمْ بِثَلٰثَةِ اٰلٰفٍ مِّنَ الْمَلٰٓىِٕكَةِ مُنْزَلِیْنَ ۟ؕ

ನಿಮ್ಮ ಪ್ರಭು ಮೂರು ಸಾವಿರ ಮಲಕ್‌ಗಳÀನ್ನು ಇಳಿಸಿ ನಿಮಗೆ ಸಹಾಯವನ್ನು ನೀಡುವನು ಎಂಬುದು ನಿಮಗೆ ಸಾಲದೇ? ಎಂದು ನೀವು ಸತ್ಯವಿಶ್ವಾಸಿಗಳಿಗೆ ಸಾಂತ್ವನ ನೀಡುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ. info
التفاسير:

external-link copy
125 : 3

بَلٰۤی ۙ— اِنْ تَصْبِرُوْا وَتَتَّقُوْا وَیَاْتُوْكُمْ مِّنْ فَوْرِهِمْ هٰذَا یُمْدِدْكُمْ رَبُّكُمْ بِخَمْسَةِ اٰلٰفٍ مِّنَ الْمَلٰٓىِٕكَةِ مُسَوِّمِیْنَ ۟

ಏಕಿಲ್ಲ, ನೀವು ಸಹನೆ ವಹಿಸಿದರೆ, ಭಯಭಕ್ತಿ ಪಾಲಿಸಿದರೆ ಮತ್ತು ಅವರು ನಿಮ್ಮೆಡೆಗೆ ಈ ಕ್ಷಣದಲ್ಲಿ ಬಂದರೂ ನಿಮ್ಮ ಪ್ರಭು (ನಿಮ್ಮ ಸಹಾಯಕ್ಕಾಗಿ) ಗುರುತುಗಳಿರುವ ಐದು ಸಾವಿರ ಮಲಕ್‌ಗಳ ಮೂಲಕ ನಿಮಗೆ ಸಹಾಯವನ್ನು ನೀಡುವನು. info
التفاسير:

external-link copy
126 : 3

وَمَا جَعَلَهُ اللّٰهُ اِلَّا بُشْرٰی لَكُمْ وَلِتَطْمَىِٕنَّ قُلُوْبُكُمْ بِهٖ ؕ— وَمَا النَّصْرُ اِلَّا مِنْ عِنْدِ اللّٰهِ الْعَزِیْزِ الْحَكِیْمِ ۟ۙ

ಅಲ್ಲಾಹನು ಹೀಗೆ ಮಾಡಿದ್ದು ಇದರ ಮೂಲಕ ನಿಮಗೆ ಶುಭವಾರ್ತೆ ಹಾಗೂ ನಿಮ್ಮ ಹೃದಯಕ್ಕೆ ಸಾಂತ್ವನವಾಗಲೆAದಾಗಿದೆ. ಇಲ್ಲವಾದರೆ ಸಹಾಯವು ಪ್ರತಾಪಶಾಲಿಯು, ಯುಕ್ತಿಪೂರ್ಣನೂ ಆದ ಅಲ್ಲಾಹನ ಕಡೆಯಿಂದ ಮಾತ್ರವಿರುತ್ತದೆ. info
التفاسير:

external-link copy
127 : 3

لِیَقْطَعَ طَرَفًا مِّنَ الَّذِیْنَ كَفَرُوْۤا اَوْ یَكْبِتَهُمْ فَیَنْقَلِبُوْا خَآىِٕبِیْنَ ۟

ಏಕೆಂದರೆ (ನಿಮ್ಮ ಸಹಾಯಕ್ಕಾಗಿ) ಸತ್ಯನಿಷೇಧಿಗಳ ಒಂದು ವಿಭಾಗವನ್ನು ಮೂಲೋತ್ಪಾಟನೆಗೈಯ್ಯಲು ಅಥವಾ ಅವರನ್ನು ಅಪಮಾನಿತರನ್ನಾಗಿ ಮತ್ತು ಅವರು ಸೋತು ನಿರಾಶರಾಗಿ ಮರಳಲೆಂದಾಗಿದೆ. info
التفاسير:

external-link copy
128 : 3

لَیْسَ لَكَ مِنَ الْاَمْرِ شَیْءٌ اَوْ یَتُوْبَ عَلَیْهِمْ اَوْ یُعَذِّبَهُمْ فَاِنَّهُمْ ظٰلِمُوْنَ ۟

ಓ ಸಂದೇಶವಾಹಕರೇ, ಈ ಸತ್ಯನಿಷೇಧಿಗಳ ವಿಷಯದಲ್ಲಿ ಶಪಿಸುವ ಅಧಿಕಾರ ನಿಮಗೇನೂ ಇಲ್ಲ. ಅಲ್ಲಾಹನು ಇಚ್ಛಿಸಿದರೆ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಬಹುದು ಅಥವಾ ಅವರನ್ನು ಶಿಕ್ಷಿಸಬಹುದು. ಏಕೆಂದರೆ ಅವರು ಅಕ್ರಮಿಗಳಾಗಿರುವರು. info
التفاسير:

external-link copy
129 : 3

وَلِلّٰهِ مَا فِی السَّمٰوٰتِ وَمَا فِی الْاَرْضِ ؕ— یَغْفِرُ لِمَنْ یَّشَآءُ وَیُعَذِّبُ مَنْ یَّشَآءُ ؕ— وَاللّٰهُ غَفُوْرٌ رَّحِیْمٌ ۟۠

ಭೂಮಿ, ಆಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನದ್ದಾಗಿದೆ. ತಾನಿಚ್ಛಿಸುವವರನ್ನು ಅವನು ಕ್ಷಮಿಸುವನು. ತಾನಿಚ್ಛಿಸುವವರನ್ನು ಅವನು ಶಿಕ್ಷಿಸುವನು. ಅಲ್ಲಾಹನು ಅತ್ಯಧಿಕ ಕ್ಷಮಿಸುವವನು ಕರುಣಾನಿಧಿಯು ಆಗಿದ್ದಾನೆ. info
التفاسير:

external-link copy
130 : 3

یٰۤاَیُّهَا الَّذِیْنَ اٰمَنُوْا لَا تَاْكُلُوا الرِّبٰۤوا اَضْعَافًا مُّضٰعَفَةً ۪— وَّاتَّقُوا اللّٰهَ لَعَلَّكُمْ تُفْلِحُوْنَ ۟ۚ

ಓ ಸತ್ಯವಿಶ್ವಾಸಿಗಳೇ, ನೀವು ದುಪ್ಪಟ್ಟು ದುಪ್ಪಟ್ಟಾಗಿ ಬಡ್ಡಿಯನ್ನು ತಿನ್ನಬೇಡಿರಿ. ಮತ್ತು ಅಲ್ಲಾಹನನ್ನು ಭಯಪಡಿರಿ. ಪ್ರಾಯಶಃ ನೀವು ಯಶಸ್ಸು ಹೊಂದಬಹುದು. info
التفاسير:

external-link copy
131 : 3

وَاتَّقُوا النَّارَ الَّتِیْۤ اُعِدَّتْ لِلْكٰفِرِیْنَ ۟ۚ

ಸತ್ಯನಿಷೇಧಿಗಳಿಗಾಗಿ ಸಿದ್ಧಗೊಳಿಸಲಾದ ಆ ನರಕಾಗ್ನಿಯನ್ನು ಭಯಪಡಿರಿ. info
التفاسير:

external-link copy
132 : 3

وَاَطِیْعُوا اللّٰهَ وَالرَّسُوْلَ لَعَلَّكُمْ تُرْحَمُوْنَ ۟ۚ

ನೀವು ಅಲ್ಲಾಹ್ ಮತ್ತು ಸಂದೇಶವಾಹಕರನ್ನು ಅನುಸರಿಸಿರಿ. ಇದರಿಂದ ನಿಮ್ಮ ಮೇಲೆ ಕರುಣೆ ತೋರಲೂಬಹುದು. info
التفاسير: