ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ

external-link copy
29 : 18

وَقُلِ الْحَقُّ مِنْ رَّبِّكُمْ ۫— فَمَنْ شَآءَ فَلْیُؤْمِنْ وَّمَنْ شَآءَ فَلْیَكْفُرْ ۚ— اِنَّاۤ اَعْتَدْنَا لِلظّٰلِمِیْنَ نَارًا اَحَاطَ بِهِمْ سُرَادِقُهَا ؕ— وَاِنْ یَّسْتَغِیْثُوْا یُغَاثُوْا بِمَآءٍ كَالْمُهْلِ یَشْوِی الْوُجُوْهَ ؕ— بِئْسَ الشَّرَابُ ؕ— وَسَآءَتْ مُرْتَفَقًا ۟

ಹೇಳಿರಿ: ಇದು ನಿಮ್ಮ ಪ್ರಭುವಿನ ಕಡೆಯಿಂದಾಗಿರುವ ಸತ್ಯವಾಗಿರುತ್ತದೆ ಇನ್ನು ಬಯಸಿದವರು ವಿಶ್ವಾಸವಿಡಲಿ ಮತ್ತು ಬೇಡದವರು ನಿಷೇಧಿಸಲಿ. ನಿಜವಾಗಿಯು ನಾವು ಅಕ್ರಮಿಗಳಿಗೆ ನರಕಾಗ್ನಿಯನ್ನು ಸಿದ್ಧಪಡಿಸಿದ್ದೇವೆ ಅದರ ಗುಡಾರಗಳು ಅವರನ್ನು ಆವರಿಸುವುದು. ಇನ್ನು ಅವರು ನೀರಿನ ಸಹಾಯ ಬೇಡಿದರೆ ಕರಗಿಸಿದ ಲೋಹದಂತಿರುವ ನೀರನ್ನು ಅವರಿಗೆ ಕುಡಿಸಲಾಗುವುದು. ಅದು ಮುಖವನ್ನು ಸುಟ್ಟು ಬಿಡುವುದು. ಆ ಪಾನೀಯ ಅದೆಷ್ಟು ಕೆಟ್ಟದು! ಮತ್ತು ಆ ವಿಶ್ರಾಂತಿಯ ತಾಣ (ನರಕ) ಎಷ್ಟು ಕೆಟ್ಟದು! info
التفاسير: