ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
40 : 9

اِلَّا تَنْصُرُوْهُ فَقَدْ نَصَرَهُ اللّٰهُ اِذْ اَخْرَجَهُ الَّذِیْنَ كَفَرُوْا ثَانِیَ اثْنَیْنِ اِذْ هُمَا فِی الْغَارِ اِذْ یَقُوْلُ لِصَاحِبِهٖ لَا تَحْزَنْ اِنَّ اللّٰهَ مَعَنَا ۚ— فَاَنْزَلَ اللّٰهُ سَكِیْنَتَهٗ عَلَیْهِ وَاَیَّدَهٗ بِجُنُوْدٍ لَّمْ تَرَوْهَا وَجَعَلَ كَلِمَةَ الَّذِیْنَ كَفَرُوا السُّفْلٰی ؕ— وَكَلِمَةُ اللّٰهِ هِیَ الْعُلْیَا ؕ— وَاللّٰهُ عَزِیْزٌ حَكِیْمٌ ۟

ನೀವು ಅವರಿಗೆ (ಪ್ರವಾದಿಗೆ) ಸಹಾಯ ಮಾಡುವುದಿಲ್ಲವೆಂದಾದರೆ, ಅಲ್ಲಾಹು ಅವರಿಗೆ ಖಂಡಿತ ಸಹಾಯ ಮಾಡಿದ್ದಾನೆ. ಅವರು ಇಬ್ಬರಲ್ಲಿ ಒಬ್ಬರಾಗಿದ್ದು, ಸತ್ಯನಿಷೇಧಿಗಳು ಅವರನ್ನು (ಮಕ್ಕಾದಿಂದ) ಹೊರದಬ್ಬಿ, ಅವರಿಬ್ಬರು[1] ಗುಹೆಯಲ್ಲಿ ಆಶ್ರಯ ಪಡೆದಾಗ ಮತ್ತು ಅವರು ತಮ್ಮ ಸಹಚರನೊಡನೆ, “ಸಂಕಟಪಡಬೇಡ, ನಿಶ್ಚಯವಾಗಿಯೂ ಅಲ್ಲಾಹು ನಮ್ಮ ಜೊತೆಗಿದ್ದಾನೆ” ಎಂದು ಹೇಳಿದ ಸಂದರ್ಭ. ಆಗ ಅಲ್ಲಾಹು ಅವರ ಮೇಲೆ ತನ್ನ ಕಡೆಯ ಶಾಂತಿಯನ್ನು ಇಳಿಸಿದನು, ನೀವು ನೋಡದೇ ಇರುವಂತಹ ಸೈನ್ಯಗಳ ಮೂಲಕ ಅವರಿಗೆ ಶಕ್ತಿಯನ್ನು ನೀಡಿದನು ಮತ್ತು ಸತ್ಯನಿಷೇಧಿಗಳ ವಚನವನ್ನು ಕೆಳಮಟ್ಟಕ್ಕಿಳಿಸಿದನು. ಅಲ್ಲಾಹನ ವಚನವು ಅತ್ಯುನ್ನತವಾಗಿದೆ. ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ. info

[1] ಅಂದರೆ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಅವರ ಆಪ್ತ ಸಂಗಡಿಗರಾದ ಅಬೂಬಕರ್ (ಅವರ ಮೇಲೆ ಅಲ್ಲಾಹನ ಸಂತೃಪ್ತಿಯಿರಲಿ). ಈ ಘಟನೆ ನಡೆದದ್ದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಅಬೂಬಕರ್ (ಅವರ ಮೇಲೆ ಅಲ್ಲಾಹನ ಸಂತೃಪ್ತಿಯಿರಲಿ) ಮಕ್ಕಾದಿಂದ ಪಲಾಯನ ಮಾಡಿ ಹತ್ತಿರದ ಸೌರ್ ಗುಹೆಯಲ್ಲಿ ಆಶ್ರಯಪಡೆದಾಗ.

التفاسير: