ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
118 : 9

وَّعَلَی الثَّلٰثَةِ الَّذِیْنَ خُلِّفُوْا ؕ— حَتّٰۤی اِذَا ضَاقَتْ عَلَیْهِمُ الْاَرْضُ بِمَا رَحُبَتْ وَضَاقَتْ عَلَیْهِمْ اَنْفُسُهُمْ وَظَنُّوْۤا اَنْ لَّا مَلْجَاَ مِنَ اللّٰهِ اِلَّاۤ اِلَیْهِ ؕ— ثُمَّ تَابَ عَلَیْهِمْ لِیَتُوْبُوْا ؕ— اِنَّ اللّٰهَ هُوَ التَّوَّابُ الرَّحِیْمُ ۟۠

ತೀರ್ಪು ಕಾದಿರಿಸಲಾದ ಆ ಮೂವರನ್ನೂ (ಅಲ್ಲಾಹು ಕ್ಷಮಿಸಿದ್ದಾನೆ).[1] ಎಲ್ಲಿಯವರೆಗೆಂದರೆ, ಭೂಮಿಯು ವಿಶಾಲವಾಗಿದ್ದೂ ಸಹ ಅವರಿಗೆ ಅದು ಇಕ್ಕಟ್ಟಾದಂತೆ ತೋರಿತು, ಅವರ ಹೃದಯಗಳು ಅವರಿಗೆ ಇಕ್ಕಟ್ಟಾಗಿ ಪರಿಣಮಿಸಿತು ಮತ್ತು ಅಲ್ಲಾಹನಿಗೆ ವಿರುದ್ಧವಾಗಿ ಅವನ ಬಳಿಯೇ ಹೊರತು ಬೇರೆ ಆಶ್ರಯವಿಲ್ಲವೆಂದು ಅವರಿಗೆ ಖಾತ್ರಿಯಾಯಿತು. ಆದ್ದರಿಂದ ಅವರು ಪಶ್ಚಾತ್ತಾಪಪಟ್ಟು ಮರಳುವುದಕ್ಕಾಗಿ ಅಲ್ಲಾಹು ಅವರನ್ನು ಕ್ಷಮಿಸಿದನು. ನಿಶ್ಚಯವಾಗಿಯೂ ಅಲ್ಲಾಹು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. info

[1] ತೀರ್ಪು ಕಾದಿರಿಸಲಾದವರು ಎಂದು 106ನೇ ವಚನದಲ್ಲಿ ಹೇಳಿದ್ದು ಈ ಮೂವರ ಬಗ್ಗೆ. ಅವರು ಕಅ‌ಬ್ ಬಿನ್ ಮಾಲಿಕ್, ಹಿಲಾಲ್ ಬಿನ್ ಉಮಯ್ಯಃ ಮತ್ತು ಮುರಾರ ಬಿನ್ ರಬೀಅ್. ಇವರು ತಬೂಕ್ ಯುದ್ಧಕ್ಕೆ ಹೋಗದಿರಲು ಸೂಕ್ತ ಕಾರಣಗಳೇನೂ ಇಲ್ಲದಿದ್ದರೂ ಸಹ ಹೋಗಿರಲಿಲ್ಲ.

التفاسير: