ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
7 : 8

وَاِذْ یَعِدُكُمُ اللّٰهُ اِحْدَی الطَّآىِٕفَتَیْنِ اَنَّهَا لَكُمْ وَتَوَدُّوْنَ اَنَّ غَیْرَ ذَاتِ الشَّوْكَةِ تَكُوْنُ لَكُمْ وَیُرِیْدُ اللّٰهُ اَنْ یُّحِقَّ الْحَقَّ بِكَلِمٰتِهٖ وَیَقْطَعَ دَابِرَ الْكٰفِرِیْنَ ۟ۙ

ಎರಡು ಗುಂಪುಗಳಲ್ಲಿ ಒಂದನ್ನು ನಿಮ್ಮ ವಶಕ್ಕೆ ನೀಡುತ್ತೇನೆಂದು ಅಲ್ಲಾಹು ನಿಮಗೆ ಆಶ್ವಾಸನೆ ನೀಡಿದ ಸಂದರ್ಭ(ವನ್ನು ಸ್ಮರಿಸಿ). ನಿಶ್ಶಸ್ತ್ರ ಗುಂಪು ನಿಮ್ಮ ವಶಕ್ಕೆ ಬರಬೇಕೆಂದು ನೀವು ಬಯಸುತ್ತೀರಿ. ಆದರೆ ಅಲ್ಲಾಹು ತನ್ನ ವಚನಗಳ ಮೂಲಕ ಸತ್ಯವನ್ನು ಸ್ಥಾಪಿಸಲು ಮತ್ತು ಸತ್ಯನಿಷೇಧಿಗಳನ್ನು ಬೇರು ಸಹಿತ ನಿರ್ನಾಮ ಮಾಡಲು ಬಯಸುತ್ತಿದ್ದನು.[1] info

[1] ಕುರೈಷರ ವ್ಯಾಪಾರ ತಂಡವನ್ನು (ನಿಶ್ಶಸ್ತ್ರ ಗುಂಪನ್ನು) ಅಥವಾ ಕುರೈಷ್ ಸೈನ್ಯವನ್ನು ನಿಮ್ಮ ವಶಕ್ಕೆ ನೀಡುತ್ತೇನೆಂದು ಅಲ್ಲಾಹು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾತು ಕೊಟ್ಟಿದ್ದನು. ಕುರೈಷರ ವ್ಯಾಪಾರ ತಂಡದ ಮೇಲೆ ದಾಳಿ ಮಾಡಿ ವಶಪಡಿಸುವುದಕ್ಕೆ ಯುದ್ಧದ ಅಗತ್ಯವಿಲ್ಲದ್ದರಿಂದ ಮುಸಲ್ಮಾನರು ಅದನ್ನೇ ಬಯಸಿದ್ದರು. ಆದರೆ ಅಲ್ಲಾಹನ ಉದ್ದೇಶವು ಸತ್ಯ ಮತ್ತು ಅಸತ್ಯವನ್ನು ನಿರ್ಣಾಯಕವಾಗಿ ಬೇರ್ಪಡಿಸಿ ತೋರಿಸುವ ಬದ್ರ್ ಯುದ್ಧ ನಡೆಯಬೇಕು ಎಂಬುದಾಗಿತ್ತು.

التفاسير: