ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
11 : 71

یُّرْسِلِ السَّمَآءَ عَلَیْكُمْ مِّدْرَارًا ۟ۙ

ಅವನು ಆಕಾಶದಿಂದ ನಿಮಗೆ ಧಾರಾಕಾರ ಮಳೆಯನ್ನು ಸುರಿಸುವನು. info
التفاسير:

external-link copy
12 : 71

وَّیُمْدِدْكُمْ بِاَمْوَالٍ وَّبَنِیْنَ وَیَجْعَلْ لَّكُمْ جَنّٰتٍ وَّیَجْعَلْ لَّكُمْ اَنْهٰرًا ۟ؕ

ಅವನು ನಿಮಗೆ ಹೇರಳ ಆಸ್ತಿಪಾಸ್ತಿ ಮತ್ತು ಗಂಡುಮಕ್ಕಳನ್ನು ನೀಡಿ ನೆರವಾಗುವನು. ಅವನು ನಿಮಗೆ ತೋಟಗಳನ್ನು ಕೊಡುವನು ಮತ್ತು ಹೊಳೆಗಳನ್ನು ಹರಿಸುವನು.” info
التفاسير:

external-link copy
13 : 71

مَا لَكُمْ لَا تَرْجُوْنَ لِلّٰهِ وَقَارًا ۟ۚ

ಅಲ್ಲಾಹನ ಮಹಿಮೆಯಲ್ಲಿ ನಂಬಿಕೆಯಿಡದಿರಲು ನಿಮಗೇನಾಗಿದೆ? info
التفاسير:

external-link copy
14 : 71

وَقَدْ خَلَقَكُمْ اَطْوَارًا ۟

ಅವನು ನಿಮ್ಮನ್ನು ಹಲವು ಘಟ್ಟಗಳ ಮೂಲಕ ಸೃಷ್ಟಿಸಿದ್ದಾನೆ. info
التفاسير:

external-link copy
15 : 71

اَلَمْ تَرَوْا كَیْفَ خَلَقَ اللّٰهُ سَبْعَ سَمٰوٰتٍ طِبَاقًا ۟ۙ

ಅಲ್ಲಾಹು ಏಳು ಆಕಾಶಗಳನ್ನು ಹೇಗೆ ಅಂತಸ್ತುಗಳಾಗಿ ಸೃಷ್ಟಿಸಿದ್ದಾನೆಂದು ನೀವು ನೋಡಿಲ್ಲವೇ? info
التفاسير:

external-link copy
16 : 71

وَّجَعَلَ الْقَمَرَ فِیْهِنَّ نُوْرًا وَّجَعَلَ الشَّمْسَ سِرَاجًا ۟

ಅವನು ಅವುಗಳಲ್ಲಿ ಚಂದ್ರನನ್ನು ಬೆಳಕಾಗಿ ಮತ್ತು ಸೂರ್ಯನನ್ನು (ಉರಿಯುವ) ದೀಪವಾಗಿ ಮಾಡಿದನು. info
التفاسير:

external-link copy
17 : 71

وَاللّٰهُ اَنْۢبَتَكُمْ مِّنَ الْاَرْضِ نَبَاتًا ۟ۙ

ಅಲ್ಲಾಹು ನಿಮ್ಮನ್ನು (ವಿಶೇಷ ಮುತುವರ್ಜಿ ನೀಡಿ) ಭೂಮಿಯಿಂದ ಬೆಳೆಸಿದನು. info
التفاسير:

external-link copy
18 : 71

ثُمَّ یُعِیْدُكُمْ فِیْهَا وَیُخْرِجُكُمْ اِخْرَاجًا ۟

ನಂತರ ಅವನು ನಿಮ್ಮನ್ನು ಅದಕ್ಕೆ ಮರಳಿಸುವನು ಮತ್ತು (ವಿಶೇಷ ರೀತಿಯಲ್ಲಿ) ನಿಮ್ಮನ್ನು ಹೊರತರುವನು. info
التفاسير:

external-link copy
19 : 71

وَاللّٰهُ جَعَلَ لَكُمُ الْاَرْضَ بِسَاطًا ۟ۙ

ಅಲ್ಲಾಹು ನಿಮಗೆ ಭೂಮಿಯನ್ನು ಒಂದು ಹಾಸಿನಂತೆ ಮಾಡಿಕೊಟ್ಟನು. info
التفاسير:

external-link copy
20 : 71

لِّتَسْلُكُوْا مِنْهَا سُبُلًا فِجَاجًا ۟۠

ನೀವು ಅದರ ವಿಶಾಲವಾದ ದಾರಿಗಳಲ್ಲಿ ಸಾಗಲಿಕ್ಕಾಗಿ. info
التفاسير:

external-link copy
21 : 71

قَالَ نُوْحٌ رَّبِّ اِنَّهُمْ عَصَوْنِیْ وَاتَّبَعُوْا مَنْ لَّمْ یَزِدْهُ مَالُهٗ وَوَلَدُهٗۤ اِلَّا خَسَارًا ۟ۚ

ನೂಹ್ ಹೇಳಿದರು: “ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ಅವರು ನನಗೆ ಅವಿಧೇಯತೆ ತೋರಿದ್ದಾರೆ. ಯಾರ ಆಸ್ತಿ ಹಾಗೂ ಮಕ್ಕಳು ಅವನಿಗೆ ನಷ್ಟವನ್ನಲ್ಲದೆ ಇನ್ನೇನನ್ನೂ ಹೆಚ್ಚಿಸುವುದಿಲ್ಲವೋ ಅಂತಹವನನ್ನು ಅವರು ಹಿಂಬಾಲಿಸಿದ್ದಾರೆ. info
التفاسير:

external-link copy
22 : 71

وَمَكَرُوْا مَكْرًا كُبَّارًا ۟ۚ

ಅವರು ಬಹುದೊಡ್ಡ ಸಂಚು ರೂಪಿಸಿದ್ದಾರೆ. info
التفاسير:

external-link copy
23 : 71

وَقَالُوْا لَا تَذَرُنَّ اٰلِهَتَكُمْ وَلَا تَذَرُنَّ وَدًّا وَّلَا سُوَاعًا ۙ۬— وَّلَا یَغُوْثَ وَیَعُوْقَ وَنَسْرًا ۟ۚ

“(ಜನರೇ) ನೀವು ನಿಮ್ಮ ದೇವರುಗಳನ್ನು ಯಾವುದೇ ಕಾರಣಕ್ಕೂ ತೊರೆಯಬೇಡಿ. ವದ್ದ್, ಸುವಾಅ್, ಯಗೂಸ್, ಯಊಕ್ ಮತ್ತು ನಸ್ರ್‌ರನ್ನು ಯಾವುದೇ ಕಾರಣಕ್ಕೂ ತೊರೆಯಬೇಡಿ” ಎಂದು ಅವರು ಹೇಳುತ್ತಾರೆ. info
التفاسير:

external-link copy
24 : 71

وَقَدْ اَضَلُّوْا كَثِیْرًا ۚ۬— وَلَا تَزِدِ الظّٰلِمِیْنَ اِلَّا ضَلٰلًا ۟

ಅವರು ಈಗಾಗಲೇ ಬಹಳಷ್ಟು ಜನರನ್ನು ದಾರಿ ತಪ್ಪಿಸಿದ್ದಾರೆ. ನೀನು ಆ ಅಕ್ರಮಿಗಳಿಗೆ ಅವರ ದುರ್ಮಾರ್ಗವನ್ನು ಇನ್ನಷ್ಟು ಹೆಚ್ಚಿಸಿಕೊಡು.” info
التفاسير:

external-link copy
25 : 71

مِمَّا خَطِیْٓـٰٔتِهِمْ اُغْرِقُوْا فَاُدْخِلُوْا نَارًا ۙ۬— فَلَمْ یَجِدُوْا لَهُمْ مِّنْ دُوْنِ اللّٰهِ اَنْصَارًا ۟

ಅವರ ಪಾಪಗಳ ಕಾರಣದಿಂದ ಅವರನ್ನು ಮುಳುಗಿಸಲಾಯಿತು. ನಂತರ ನರಕಾಗ್ನಿಗೆ ಪ್ರವೇಶ ಮಾಡಿಸಲಾಯಿತು. ಅವರು ಅಲ್ಲಾಹನ ಹೊರತು ಬೇರೆ ಯಾವುದೇ ಸಹಾಯಕರನ್ನು ಕಾಣಲಿಲ್ಲ. info
التفاسير:

external-link copy
26 : 71

وَقَالَ نُوْحٌ رَّبِّ لَا تَذَرْ عَلَی الْاَرْضِ مِنَ الْكٰفِرِیْنَ دَیَّارًا ۟

ನೂಹ್ ಹೇಳಿದರು: “ನನ್ನ ಪರಿಪಾಲಕನೇ! ನೀನು ಭೂಮಿಯ ಮೇಲೆ ಸತ್ಯನಿಷೇಧಿಗಳಲ್ಲಿ ಯಾರನ್ನೂ ವಾಸಿಸಲು ಬಿಡಬೇಡ. info
التفاسير:

external-link copy
27 : 71

اِنَّكَ اِنْ تَذَرْهُمْ یُضِلُّوْا عِبَادَكَ وَلَا یَلِدُوْۤا اِلَّا فَاجِرًا كَفَّارًا ۟

ನೀನೇನಾದರೂ ಅವರನ್ನು ಬಿಟ್ಟುಬಿಟ್ಟರೆ ಅವರು ನಿನ್ನ ದಾಸರನ್ನು ದಾರಿತಪ್ಪಿಸುವರು. ಅವರು ದುಷ್ಕರ್ಮಿಗಳು ಮತ್ತು ಸತ್ಯನಿಷೇಧಿಗಳಿಗೆ ಮಾತ್ರ ಜನ್ಮ ನೀಡುವರು. info
التفاسير:

external-link copy
28 : 71

رَبِّ اغْفِرْ لِیْ وَلِوَالِدَیَّ وَلِمَنْ دَخَلَ بَیْتِیَ مُؤْمِنًا وَّلِلْمُؤْمِنِیْنَ وَالْمُؤْمِنٰتِ ؕ— وَلَا تَزِدِ الظّٰلِمِیْنَ اِلَّا تَبَارًا ۟۠

ನನ್ನ ಪರಿಪಾಲಕನೇ! ನನಗೆ, ನನ್ನ ಮಾತಾಪಿತರಿಗೆ ಮತ್ತು ಸತ್ಯವಿಶ್ವಾಸಿಯಾಗಿ ನನ್ನ ಮನೆಯನ್ನು ಪ್ರವೇಶಿಸಿದವನಿಗೆ ಕ್ಷಮಿಸು. ಸತ್ಯವಿಶ್ವಾಸಿ ಪುರುಷರಿಗೆ ಮತ್ತು ಸ್ತ್ರೀಯರಿಗೆ ಕ್ಷಮಿಸು. ಅಕ್ರಮಿಗಳಿಗೆ ಸರ್ವನಾಶವಲ್ಲದೆ ಇನ್ನೇನೂ ಹೆಚ್ಚಿಸಬೇಡ.” info
التفاسير: