ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
7 : 63

هُمُ الَّذِیْنَ یَقُوْلُوْنَ لَا تُنْفِقُوْا عَلٰی مَنْ عِنْدَ رَسُوْلِ اللّٰهِ حَتّٰی یَنْفَضُّوْا ؕ— وَلِلّٰهِ خَزَآىِٕنُ السَّمٰوٰتِ وَالْاَرْضِ وَلٰكِنَّ الْمُنٰفِقِیْنَ لَا یَفْقَهُوْنَ ۟

ಅವರು ಯಾರೆಂದರೆ, “ಅಲ್ಲಾಹನ ಸಂದೇಶವಾಹಕರ ಬಳಿಯಿರುವವರಿಗೆ ಅವರು ಅಲ್ಲಿಂದ ಚದುರಿಹೋಗುವ ತನಕ ಖರ್ಚು ಮಾಡಬೇಡಿ” ಎಂದು ಹೇಳುವವರು.[1] ಭೂಮ್ಯಾಕಾಶಗಳ ಬೊಕ್ಕಸಗಳು ಅಲ್ಲಾಹನಿಗೆ ಸೇರಿದ್ದು. ಆದರೆ ಕಪಟವಿಶ್ವಾಸಿಗಳು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ. info

[1] ಒಮ್ಮೆ ಒಂದು ಯುದ್ಧದಿಂದ ಹಿಂದಿರುಗಿ ಬರುವಾಗ ಒಬ್ಬ ಮುಹಾಜಿರ್ ಮತ್ತು ಅನ್ಸಾರನ ನಡುವೆ ಜಗಳವಾಯಿತು. ಇಬ್ಬರೂ ತಮ್ಮ ತಮ್ಮ ಜನರನ್ನು ಸಹಾಯಕ್ಕೆ ಕರೆದರು. ಆಗ ಕಪಟವಿಶ್ವಾಸಿಗಳ ಮುಖಂಡ ಅಬ್ದುಲ್ಲಾ ಬಿನ್ ಉಬೈ ಅನ್ಸಾರರನ್ನು ಕರೆದು, “ನೋಡಿ, ನೀವು ಅವರಿಗೆ ಸಹಾಯ ಮಾಡಿದ್ದೀರಿ. ಈಗ ಅದರ ಫಲಿತಾಂಶವೇನಾಯಿತೆಂದು ನೋಡಿ. ಅವರು ನಿಮ್ಮ ವಿರುದ್ಧ ಅವರ ಜನರನ್ನು ಕರೆಯುತ್ತಿದ್ದಾರೆ.” ನಂತರ ಆತ ಹೇಳಿದ: “ಇದಕ್ಕಿರುವ ಮದ್ದೇನೆಂದರೆ ಅವರಿಗೆ ಖರ್ಚು ಮಾಡುವುದನ್ನು ನೀವು ನಿಲ್ಲಿಸಬೇಕು. ಆಗ ಅವರ ಸ್ವಯಂ ಸರಿದಾರಿಗೆ ಬರುತ್ತಾರೆ.”

التفاسير: