ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

ಅಲ್- ಅನ್ ಆಮ್

external-link copy
1 : 6

اَلْحَمْدُ لِلّٰهِ الَّذِیْ خَلَقَ السَّمٰوٰتِ وَالْاَرْضَ وَجَعَلَ الظُّلُمٰتِ وَالنُّوْرَ ؕ۬— ثُمَّ الَّذِیْنَ كَفَرُوْا بِرَبِّهِمْ یَعْدِلُوْنَ ۟

ಭೂಮ್ಯಾಕಾಶಗಳನ್ನು ಸೃಷ್ಟಿಸಿದ ಮತ್ತು ಅಂಧಕಾರಗಳನ್ನು ಹಾಗೂ ಬೆಳಕನ್ನು ಉಂಟುಮಾಡಿದ ಅಲ್ಲಾಹನಿಗೆ ಸರ್ವಸ್ತುತಿ. ಆದರೂ ಸತ್ಯನಿಷೇಧಿಗಳು ತಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಸರಿಸಮಾನರನ್ನು ಕಲ್ಪಿಸುತ್ತಿದ್ದಾರೆ. info
التفاسير:

external-link copy
2 : 6

هُوَ الَّذِیْ خَلَقَكُمْ مِّنْ طِیْنٍ ثُمَّ قَضٰۤی اَجَلًا ؕ— وَاَجَلٌ مُّسَمًّی عِنْدَهٗ ثُمَّ اَنْتُمْ تَمْتَرُوْنَ ۟

ನಿಮ್ಮನ್ನು ಜೇಡಿಮಣ್ಣಿನಿಂದ ಸೃಷ್ಟಿಸಿದವನು ಅವನೇ. ನಂತರ ಅವನು ಒಂದು ಅವಧಿಯನ್ನು ನಿಶ್ಚಯಿಸಿದನು. ಅವನ ಬಳಿ ಇನ್ನೊಂದು ನಿಶ್ಚಿತ ಅವಧಿಯಿದೆ. ಹೀಗಿದ್ದೂ ನೀವು ಸಂಶಯಪಡುತ್ತೀರಿ. info
التفاسير:

external-link copy
3 : 6

وَهُوَ اللّٰهُ فِی السَّمٰوٰتِ وَفِی الْاَرْضِ ؕ— یَعْلَمُ سِرَّكُمْ وَجَهْرَكُمْ وَیَعْلَمُ مَا تَكْسِبُوْنَ ۟

ಅವನೇ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಏಕೈಕ ದೇವನಾದ ಅಲ್ಲಾಹು. ನೀವು ಮುಚ್ಚಿಡುವುದನ್ನು ಮತ್ತು ಬಹಿರಂಗಪಡಿಸುವುದನ್ನು ಅವನು ತಿಳಿಯುತ್ತಾನೆ. ನೀವು ಮಾಡುವ ಕರ್ಮಗಳನ್ನೂ ಅವನು ತಿಳಿಯುತ್ತಾನೆ. info
التفاسير:

external-link copy
4 : 6

وَمَا تَاْتِیْهِمْ مِّنْ اٰیَةٍ مِّنْ اٰیٰتِ رَبِّهِمْ اِلَّا كَانُوْا عَنْهَا مُعْرِضِیْنَ ۟

ಅವರ ಪರಿಪಾಲಕನ (ಅಲ್ಲಾಹನ) ದೃಷ್ಟಾಂತಗಳಲ್ಲಿ ಯಾವುದೇ ಒಂದು ದೃಷ್ಟಾಂತವು ಅವರ ಬಳಿಗೆ ಬಂದರೂ, ಅವರು ಅದರಿಂದ ವಿಮುಖರಾಗುತ್ತಿದ್ದರು. info
التفاسير:

external-link copy
5 : 6

فَقَدْ كَذَّبُوْا بِالْحَقِّ لَمَّا جَآءَهُمْ ؕ— فَسَوْفَ یَاْتِیْهِمْ اَنْۢبٰٓؤُا مَا كَانُوْا بِهٖ یَسْتَهْزِءُوْنَ ۟

ಸತ್ಯವು ಅವರ ಬಳಿಗೆ ಬಂದಾಗ ಅವರು ಅದನ್ನು ನಿಷೇಧಿಸಿದರು. ಆದ್ದರಿಂದ ಅವರು ಯಾವುದನ್ನು ತಮಾಷೆ ಮಾಡುತ್ತಿದ್ದರೋ ಅದರ ನಿಜಾಂಶಗಳು ನಂತರ ಅವರ ಬಳಿಗೆ ಬರಲಿವೆ. info
التفاسير:

external-link copy
6 : 6

اَلَمْ یَرَوْا كَمْ اَهْلَكْنَا مِنْ قَبْلِهِمْ مِّنْ قَرْنٍ مَّكَّنّٰهُمْ فِی الْاَرْضِ مَا لَمْ نُمَكِّنْ لَّكُمْ وَاَرْسَلْنَا السَّمَآءَ عَلَیْهِمْ مِّدْرَارًا ۪— وَّجَعَلْنَا الْاَنْهٰرَ تَجْرِیْ مِنْ تَحْتِهِمْ فَاَهْلَكْنٰهُمْ بِذُنُوْبِهِمْ وَاَنْشَاْنَا مِنْ بَعْدِهِمْ قَرْنًا اٰخَرِیْنَ ۟

ಅವರಿಗಿಂತ ಮೊದಲು ನಾವು ಎಷ್ಟು ತಲೆಮಾರುಗಳನ್ನು ನಾಶ ಮಾಡಿದ್ದೇವೆಂದು ಅವರು ನೋಡಿಲ್ಲವೇ? ನಿಮಗೆ ನೀಡದಂತಹ ಶಕ್ತಿ-ಸಾಮರ್ಥ್ಯಗಳನ್ನು ನಾವು ಅವರಿಗೆ ನೀಡಿದ್ದೆವು. ಅವರಿಗೆ ಆಕಾಶದಿಂದ ಧಾರಾಕಾರ ಮಳೆಯನ್ನು ಸುರಿಸಿಕೊಟ್ಟೆವು. ಅವರ ತಳಭಾಗದಿಂದ ನದಿಗಳು ಹರಿಯುವಂತೆ ಮಾಡಿದೆವು. ನಂತರ ಅವರು ಮಾಡಿದ ಪಾಪಗಳ ಕಾರಣದಿಂದ ನಾವು ಅವರನ್ನು ನಾಶ ಮಾಡಿದೆವು. ಅವರ ನಂತರ ನಾವು ಬೇರೊಂದು ತಲೆಮಾರನ್ನು ಸೃಷ್ಟಿಸಿದೆವು. info
التفاسير:

external-link copy
7 : 6

وَلَوْ نَزَّلْنَا عَلَیْكَ كِتٰبًا فِیْ قِرْطَاسٍ فَلَمَسُوْهُ بِاَیْدِیْهِمْ لَقَالَ الَّذِیْنَ كَفَرُوْۤا اِنْ هٰذَاۤ اِلَّا سِحْرٌ مُّبِیْنٌ ۟

ನಾವು ನಿಮಗೆ ಕಾಗದದಲ್ಲಿ ಬರೆದಿರುವ ಒಂದು ಗ್ರಂಥವನ್ನು ಅವತೀರ್ಣಗೊಳಿಸಿ, ನಂತರ ಅವರು ಅದನ್ನು ತಮ್ಮ ಕೈಗಳಿಂದ ಸ್ಪರ್ಶಿಸಿ ನೋಡಿದರೂ, “ಇದು ಸ್ಪಷ್ಟ ಮಾಟಗಾರಿಕೆಯಲ್ಲದೆ ಇನ್ನೇನೂ ಅಲ್ಲ” ಎಂದು ಆ ಸತ್ಯನಿಷೇಧಿಗಳು ಹೇಳುತ್ತಿದ್ದರು. info
التفاسير:

external-link copy
8 : 6

وَقَالُوْا لَوْلَاۤ اُنْزِلَ عَلَیْهِ مَلَكٌ ؕ— وَلَوْ اَنْزَلْنَا مَلَكًا لَّقُضِیَ الْاَمْرُ ثُمَّ لَا یُنْظَرُوْنَ ۟

ಅವರು ಹೇಳಿದರು: “ಅವರ (ಪ್ರವಾದಿಯ) ಜೊತೆಯಲ್ಲಿ ಒಬ್ಬ ದೇವದೂತರನ್ನು ಏಕೆ ಇಳಿಸಲಾಗಿಲ್ಲ?” ಆದರೆ ನಾವು ದೇವದೂತರನ್ನು ಇಳಿಸುತ್ತಿದ್ದರೆ ವಿಷಯವು (ಅಂತಿಮವಾಗಿ) ತೀರ್ಮಾನವಾಗುತ್ತಿತ್ತು. ನಂತರ ಅವರಿಗೆ ಕಾಲಾವಕಾಶ ನೀಡಲಾಗುತ್ತಿರಲಿಲ್ಲ. info
التفاسير: