ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
6 : 59

وَمَاۤ اَفَآءَ اللّٰهُ عَلٰی رَسُوْلِهٖ مِنْهُمْ فَمَاۤ اَوْجَفْتُمْ عَلَیْهِ مِنْ خَیْلٍ وَّلَا رِكَابٍ وَّلٰكِنَّ اللّٰهَ یُسَلِّطُ رُسُلَهٗ عَلٰی مَنْ یَّشَآءُ ؕ— وَاللّٰهُ عَلٰی كُلِّ شَیْءٍ قَدِیْرٌ ۟

ಅವರ ಆಸ್ತಿಗಳಲ್ಲಿ ಏನನ್ನೆಲ್ಲಾ ಅಲ್ಲಾಹು ಅವನ ಸಂದೇಶವಾಹಕರಿಗೆ ವಶಪಡಿಸಿಕೊಟ್ಟನೋ ಅದಕ್ಕಾಗಿ ನೀವು ಕುದುರೆಗಳನ್ನೋ ಒಂಟೆಗಳನ್ನೋ ಓಡಿಸಬೇಕಾಗಿ ಬರಲಿಲ್ಲ.[1] ಅಲ್ಲಾಹು ಅವನು ಇಚ್ಛಿಸುವವರ ಮೇಲೆ ಅವನ ಸಂದೇಶವಾಹಕರಿಗೆ ಅಧಿಕಾರವನ್ನು ನೀಡುತ್ತಾನೆ. ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. info

[1] ಬನೂ ನದೀರ್ ವಾಸವಾಗಿದ್ದ ಸ್ಥಳವು ಮದೀನದಿಂದ ಕೇವಲ ಮೂರು ಅಥವಾ ನಾಲ್ಕು ಮೈಲು ದೂರದಲ್ಲಿತ್ತು. ಆದ್ದರಿಂದ ಅದನ್ನು ವಶಪಡಿಸಲು ಮುಸ್ಲಿಮರಿಗೆ ದೀರ್ಘ ಯಾತ್ರೆ ಮಾಡುವ ಅಗತ್ಯ ಬರಲಿಲ್ಲ. ಅಥವಾ ಅದನ್ನು ವಶಪಡಿಸಲು ಮುಸ್ಲಿಮರಿಗೆ ಒಂಟೆ ಅಥವಾ ಕುದುರೆಗಳನ್ನು ಓಡಿಸಬೇಕಾಗಿ ಬರಲಿಲ್ಲ. ಮಾತ್ರವಲ್ಲದೆ, ಅದನ್ನು ಒಪ್ಪಂದದ ಮೂಲಕ ವಶಪಡಿಸಲಾಯಿತು. ಯುದ್ಧವಿಲ್ಲದೆ ವಶವಾಗುವ ಸಂಪತ್ತನ್ನು ಫೈಅ್ ಎಂದು ಕರೆಯಲಾಗುತ್ತದೆ. ಯುದ್ಧದಿಂದ ವಶವಾಗುವ ಸಂಪತ್ತನ್ನು ಗನೀಮತ್ (ಸಮರಾರ್ಜಿತ ಸೊತ್ತು) ಎಂದು ಕರೆಯಲಾಗುತ್ತದೆ.

التفاسير: