ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
19 : 55

مَرَجَ الْبَحْرَیْنِ یَلْتَقِیٰنِ ۟ۙ

ಅವನು ಎರಡು ಸಮುದ್ರಗಳನ್ನು ಪರಸ್ಪರ ಬೆರೆಯುವಂತೆ ಹರಿಯಲು ಬಿಟ್ಟನು. info
التفاسير:

external-link copy
20 : 55

بَیْنَهُمَا بَرْزَخٌ لَّا یَبْغِیٰنِ ۟ۚ

ಅವೆರಡರ ನಡುವೆ ಒಂದು ತಡೆಯಿದ್ದು ಅವು ಅದನ್ನು ಮೀರಿ ಹೋಗುವುದಿಲ್ಲ.[1] info

[1] ಎರಡು ಸಮುದ್ರಗಳು ಎಂದರೆ ನೀರಿನ ಎರಡು ಬೇರೆ ಬೇರೆ ಅಸ್ತಿತ್ವಗಳು. ಒಂದು ಸಿಹಿ ನೀರನ್ನು ಹೊಂದಿರುವ ನದಿ ಮತ್ತು ಇನ್ನೊಂದು ಉಪ್ಪು ನೀರನ್ನು ಹೊಂದಿರುವ ಕಡಲು. ಈ ಎರಡು ನೀರುಗಳು ಪರಸ್ಪರ ಸೇರುವಾಗ ಬೆರೆಯದೆ ಬಹುದೂರದ ತನಕ ಹರಿಯುತ್ತವೆ.

التفاسير:

external-link copy
21 : 55

فَبِاَیِّ اٰلَآءِ رَبِّكُمَا تُكَذِّبٰنِ ۟

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? info
التفاسير:

external-link copy
22 : 55

یَخْرُجُ مِنْهُمَا اللُّؤْلُؤُ وَالْمَرْجَانُ ۟ۚ

ಅವೆರಡರಿಂದಲೂ ಮುತ್ತು ಮತ್ತು ಹವಳಗಳು ಹೊರಬರುತ್ತವೆ. info
التفاسير:

external-link copy
23 : 55

فَبِاَیِّ اٰلَآءِ رَبِّكُمَا تُكَذِّبٰنِ ۟

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? info
التفاسير:

external-link copy
24 : 55

وَلَهُ الْجَوَارِ الْمُنْشَاٰتُ فِی الْبَحْرِ كَالْاَعْلَامِ ۟ۚ

ಸಮುದ್ರದಲ್ಲಿ ಬೆಟ್ಟಗಳಂತೆ ಎತ್ತರವಾಗಿದ್ದು ಸಂಚರಿಸುವ ಹಡಗುಗಳು ಅವನ ನಿಯಂತ್ರಣದಲ್ಲಿವೆ. info
التفاسير:

external-link copy
25 : 55

فَبِاَیِّ اٰلَآءِ رَبِّكُمَا تُكَذِّبٰنِ ۟۠

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? info
التفاسير:

external-link copy
26 : 55

كُلُّ مَنْ عَلَیْهَا فَانٍ ۟ۚۖ

ಭೂಮಿಯ ಮೇಲಿರುವ ಎಲ್ಲವೂ ನಾಶವಾಗಲಿವೆ. info
التفاسير:

external-link copy
27 : 55

وَّیَبْقٰی وَجْهُ رَبِّكَ ذُو الْجَلٰلِ وَالْاِكْرَامِ ۟ۚ

ನಿಮ್ಮ ಪರಿಪಾಲಕನ (ಅಲ್ಲಾಹನ) ಮಹತ್ವಪೂರ್ಣ ಮತ್ತು ಗೌರವಾರ್ಹವಾದ ಮುಖವು ಮಾತ್ರ ಅವಶೇಷಿಸುತ್ತದೆ. info
التفاسير:

external-link copy
28 : 55

فَبِاَیِّ اٰلَآءِ رَبِّكُمَا تُكَذِّبٰنِ ۟

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? info
التفاسير:

external-link copy
29 : 55

یَسْـَٔلُهٗ مَنْ فِی السَّمٰوٰتِ وَالْاَرْضِ ؕ— كُلَّ یَوْمٍ هُوَ فِیْ شَاْنٍ ۟ۚ

ಭೂಮ್ಯಾಕಾಶಗಳಲ್ಲಿರುವವರೆಲ್ಲರೂ ಅವನಲ್ಲಿ ಬೇಡುತ್ತಾರೆ. ಪ್ರತಿದಿನವೂ ಅವನು ಒಂದು ಕೆಲಸದಲ್ಲಿದ್ದಾನೆ. info
التفاسير:

external-link copy
30 : 55

فَبِاَیِّ اٰلَآءِ رَبِّكُمَا تُكَذِّبٰنِ ۟

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? info
التفاسير:

external-link copy
31 : 55

سَنَفْرُغُ لَكُمْ اَیُّهَ الثَّقَلٰنِ ۟ۚ

ಓ ಜಿನ್ನ್ ಮತ್ತು ಮನುಷ್ಯರ ಸಮೂಹಗಳೇ! ಸದ್ಯವೇ ನಾವು ನಿಮಗೋಸ್ಕರ ಸಂಪೂರ್ಣ ಬಿಡುವು ಮಾಡಿಕೊಳ್ಳುವೆವು. info
التفاسير:

external-link copy
32 : 55

فَبِاَیِّ اٰلَآءِ رَبِّكُمَا تُكَذِّبٰنِ ۟

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? info
التفاسير:

external-link copy
33 : 55

یٰمَعْشَرَ الْجِنِّ وَالْاِنْسِ اِنِ اسْتَطَعْتُمْ اَنْ تَنْفُذُوْا مِنْ اَقْطَارِ السَّمٰوٰتِ وَالْاَرْضِ فَانْفُذُوْا ؕ— لَا تَنْفُذُوْنَ اِلَّا بِسُلْطٰنٍ ۟ۚ

ಓ ಜಿನ್ನ್ ಮತ್ತು ಮನುಷ್ಯರ ಸಮೂಹಗಳೇ! ಭೂಮ್ಯಾಕಾಶಗಳ ಸೀಮೆಗಳಿಂದ ಹೊರಗೆ ಓಡಿಹೋಗುವ ಸಾಮರ್ಥ್ಯ ನಿಮಗಿದ್ದರೆ ಓಡಿಹೋಗಿರಿ. ಪ್ರಬಲ ಶಕ್ತಿಯಿಲ್ಲದೆ ನಿಮಗೆ ಓಡಿಹೋಗಲು ಸಾಧ್ಯವಿಲ್ಲ. info
التفاسير:

external-link copy
34 : 55

فَبِاَیِّ اٰلَآءِ رَبِّكُمَا تُكَذِّبٰنِ ۟

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? info
التفاسير:

external-link copy
35 : 55

یُرْسَلُ عَلَیْكُمَا شُوَاظٌ مِّنْ نَّارٍ ۙ۬— وَّنُحَاسٌ فَلَا تَنْتَصِرٰنِ ۟ۚ

ನಿಮ್ಮ ಮೇಲೆ ಬೆಂಕಿಯ ಜ್ವಾಲೆಯನ್ನು ಮತ್ತು ಹೊಗೆಯನ್ನು ಬಿಡಲಾಗುವುದು. ಆಗ ನಿಮಗೆ ನಿಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. info
التفاسير:

external-link copy
36 : 55

فَبِاَیِّ اٰلَآءِ رَبِّكُمَا تُكَذِّبٰنِ ۟

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? info
التفاسير:

external-link copy
37 : 55

فَاِذَا انْشَقَّتِ السَّمَآءُ فَكَانَتْ وَرْدَةً كَالدِّهَانِ ۟ۚ

ಆಕಾಶವು ಸಿಡಿದು ಹೋಳಾಗಿ ಕೆಂಪು ಚರ್ಮದಂತೆ ಕೆಂಪಾಗುವಾಗ. info
التفاسير:

external-link copy
38 : 55

فَبِاَیِّ اٰلَآءِ رَبِّكُمَا تُكَذِّبٰنِ ۟

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? info
التفاسير:

external-link copy
39 : 55

فَیَوْمَىِٕذٍ لَّا یُسْـَٔلُ عَنْ ذَنْۢبِهٖۤ اِنْسٌ وَّلَا جَآنٌّ ۟ۚ

ಅಂದು ಯಾವುದೇ ಮನುಷ್ಯನಲ್ಲಿ ಅಥವಾ ಜಿನ್ನ್‌ನಲ್ಲಿ ಅವನು ಮಾಡಿದ ಪಾಪಗಳ ಬಗ್ಗೆ ಕೇಳಲಾಗುವುದಿಲ್ಲ.[1] info

[1] ಅಂದರೆ ಮನುಷ್ಯನು ಮಾಡಿದ ಪಾಪಗಳ ಬಗ್ಗೆ ಅವನೊಡನೆ ಕೇಳಲಾಗುವುದಿಲ್ಲ. ಏಕೆಂದರೆ ಎಲ್ಲವನ್ನೂ ದೇವದೂತರು ದಾಖಲಿಸಿಟ್ಟಿದ್ದಾರೆ ಮತ್ತು ಎಲ್ಲವೂ ಅವನ ಕರ್ಮಪುಸ್ತಕದಲ್ಲಿದೆ. ಬದಲಿಗೆ, ಅವನೊಡನೆ ಆ ಪಾಪಗಳನ್ನು ಏಕೆ ಮಾಡಿದೆ ಎಂದು ಕೇಳಲಾಗುವುದು. ಇನ್ನೊಂದು ಅರ್ಥದ ಪ್ರಕಾರ, ಅವರ ಪಾಪಗಳ ಬಗ್ಗೆ ಅವರೊಡನೆ ಕೇಳಲಾಗುವುದಿಲ್ಲ. ಅವರ ಬಾಯಿಗೆ ಮೊಹರು ಹಾಕಲಾಗುವುದು ಮತ್ತು ಅವರ ಅಂಗಾಂಗಗಳು ಎಲ್ಲವನ್ನೂ ಹೇಳಿಬಿಡುವುವು.

التفاسير:

external-link copy
40 : 55

فَبِاَیِّ اٰلَآءِ رَبِّكُمَا تُكَذِّبٰنِ ۟

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? info
التفاسير:

external-link copy
41 : 55

یُعْرَفُ الْمُجْرِمُوْنَ بِسِیْمٰهُمْ فَیُؤْخَذُ بِالنَّوَاصِیْ وَالْاَقْدَامِ ۟ۚ

ಅಪರಾಧಿಗಳನ್ನು ಅವರ ಲಕ್ಷಣಗಳ ಮೂಲಕ ಗುರುತಿಸಲಾಗುವುದು. ಅವರನ್ನು ಅವರ ಜುಟ್ಟು ಮತ್ತು ಪಾದಗಳನ್ನು ಹಿಡಿದು ಒಯ್ಯಲಾಗುವುದು. info
التفاسير: