ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

ಅನ್ನಜ್ಮ್

external-link copy
1 : 53

وَالنَّجْمِ اِذَا هَوٰی ۟ۙ

ನಕ್ಷತ್ರದ ಮೇಲಾಣೆ! ಅದು ಮರೆಯಾಗುವಾಗ. info
التفاسير:

external-link copy
2 : 53

مَا ضَلَّ صَاحِبُكُمْ وَمَا غَوٰی ۟ۚ

ನಿಮ್ಮ ಸಂಗಡಿಗನು (ಪ್ರವಾದಿ) ದಾರಿತಪ್ಪಿಲ್ಲ, ಅವರು ವಕ್ರ ದಾರಿಯಲ್ಲೂ ಇಲ್ಲ. info
التفاسير:

external-link copy
3 : 53

وَمَا یَنْطِقُ عَنِ الْهَوٰی ۟ؕۚ

ಅವರು ಮನಬಂದಂತೆ ಮಾತನಾಡುವುದಿಲ್ಲ. info
التفاسير:

external-link copy
4 : 53

اِنْ هُوَ اِلَّا وَحْیٌ یُّوْحٰی ۟ۙ

ಅದು ಅವರಿಗೆ ಅವತೀರ್ಣಗೊಳಿಸಲಾದ ದೇವವಾಣಿಯಾಗಿದೆ. info
التفاسير:

external-link copy
5 : 53

عَلَّمَهٗ شَدِیْدُ الْقُوٰی ۟ۙ

ಅವರಿಗೆ ಮಹಾ ಶಕ್ತಿಶಾಲಿಯಾದ ದೇವದೂತರು (ಜಿಬ್ರೀಲ್) ಕಲಿಸಿದ್ದಾರೆ. info
التفاسير:

external-link copy
6 : 53

ذُوْ مِرَّةٍ ؕ— فَاسْتَوٰی ۟ۙ

ಅವರು ಅತ್ಯಂತ ಬಲಿಷ್ಠರು. ಅವರು (ತಮ್ಮ ನಿಜರೂಪದಲ್ಲಿ) ನೇರವಾಗಿ ನಿಂತರು. info
التفاسير:

external-link copy
7 : 53

وَهُوَ بِالْاُفُقِ الْاَعْلٰی ۟ؕ

ಅವರು ಅತ್ಯುನ್ನತ ದಿಗಂತದಲ್ಲಿದ್ದರು. info
التفاسير:

external-link copy
8 : 53

ثُمَّ دَنَا فَتَدَلّٰی ۟ۙ

ನಂತರ ಅವರು ಹತ್ತಿರವಾದರು ಮತ್ತು ಇಳಿದು ಬಂದರು. info
التفاسير:

external-link copy
9 : 53

فَكَانَ قَابَ قَوْسَیْنِ اَوْ اَدْنٰی ۟ۚ

ಅವರು ಎರಡು ಬಿಲ್ಲುಗಳ ದೂರದಲ್ಲಿ ಅಥವಾ ಅದಕ್ಕಿಂತಲೂ ಹತ್ತಿರವಾದರು. info
التفاسير:

external-link copy
10 : 53

فَاَوْحٰۤی اِلٰی عَبْدِهٖ مَاۤ اَوْحٰی ۟ؕ

ಅವರು ಅಲ್ಲಾಹನ ದಾಸರಿಗೆ (ಪ್ರವಾದಿಗೆ) ದೇವವಾಣಿಯಾಗಿ ತಲುಪಿಸಬೇಕಾದುದನ್ನು ತಲುಪಿಸಿದರು. info
التفاسير:

external-link copy
11 : 53

مَا كَذَبَ الْفُؤَادُ مَا رَاٰی ۟

ಅವರು (ಪ್ರವಾದಿ) ನೋಡಿದ ಆ ನೋಟವನ್ನು ಹೃದಯವು ನಿಷೇಧಿಸಲಿಲ್ಲ. info
التفاسير:

external-link copy
12 : 53

اَفَتُمٰرُوْنَهٗ عَلٰی مَا یَرٰی ۟

ಅವರು (ಪ್ರವಾದಿ) ನೋಡಿರುವುದರ ವಿಷಯದಲ್ಲಿ ನೀವು ಅವರೊಡನೆ ತರ್ಕಿಸುತ್ತೀರಾ? info
التفاسير:

external-link copy
13 : 53

وَلَقَدْ رَاٰهُ نَزْلَةً اُخْرٰی ۟ۙ

ಅವರು ಇನ್ನೊಂದು ಬಾರಿಯೂ ಅವರನ್ನು (ಜಿಬ್ರೀಲರನ್ನು) ನೋಡಿದ್ದರು. info
التفاسير:

external-link copy
14 : 53

عِنْدَ سِدْرَةِ الْمُنْتَهٰی ۟

ಸಿದ್ರತುಲ್ ಮುಂತಹಾದ (ತುತ್ತುತುದಿಯ ಬೋರೆ ಮರದ) ಬಳಿಯಲ್ಲಿ.[1] info

[1] ಮಿಅರಾಜ್ ರಾತ್ರಿಯಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಿದ್ರದುಲ್ ಮುಂತಹಾದ ಬಳಿ ಜಿಬ್ರೀಲರನ್ನು (ಅವರ ಮೇಲೆ ಶಾಂತಿಯಿರಲಿ) ನಿಜರೂಪದಲ್ಲಿ ನೋಡಿದ್ದರು. ಸಿದ್ರತುಲ್ ಮುಂತಹಾ ಎಂದರೆ ಏಳನೇ ಆಕಾಶದಲ್ಲಿರುವ ಬೋರೆ ಮರ. ಇದು ಆಕಾಶದ ಕೊನೆಯ ಗಡಿಯಾಗಿದೆ. ಇದರ ಆಚೆಗೆ ದೇವದೂತರುಗಳಿಗೆ ಪ್ರವೇಶವಿಲ್ಲ.

التفاسير:

external-link copy
15 : 53

عِنْدَهَا جَنَّةُ الْمَاْوٰی ۟ؕ

ಅದರ ಬಳಿಯಲ್ಲೇ ಜನ್ನತುಲ್ ಮಅವಾ ಇದೆ.[1] info

[1] ಜನ್ನತುಲ್ ಮಅವಾ ಎಂದರೆ ವಾಸ್ತವ್ಯದ ಸ್ವರ್ಗ. ಇದನ್ನು ಹೀಗೆ ಕರೆಯಲು ಕಾರಣವೇನೆಂದರೆ ಆದಮ್ (ಅವರ ಮೇಲೆ ಶಾಂತಿಯಿರಲಿ) ಇಲ್ಲಿ ವಾಸವಾಗಿದ್ದರು.

التفاسير:

external-link copy
16 : 53

اِذْ یَغْشَی السِّدْرَةَ مَا یَغْشٰی ۟ۙ

ಆ ಬೋರೆ ಮರವನ್ನು ಆವರಿಸಬೇಕಾದುದೆಲ್ಲವೂ ಆವರಿಸಿದಾಗ. info
التفاسير:

external-link copy
17 : 53

مَا زَاغَ الْبَصَرُ وَمَا طَغٰی ۟

(ಪ್ರವಾದಿಯ) ದೃಷ್ಟಿಯು ತಪ್ಪಿಹೋಗಲಿಲ್ಲ ಮತ್ತು ಎಲ್ಲೆ ಮೀರಲೂ ಇಲ್ಲ.[1] info

[1] ಅಂದರೆ ಪ್ರವಾದಿಯ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೃಷ್ಟಿಯು ಅತ್ತಿತ್ತ ಚಲಿಸುವುದಾಗಲಿ, ಅವರಿಗೆ ನೋಡಲು ಅನುಮತಿಯಿಲ್ಲದ್ದನ್ನು ನೋಡುವುದಾಗಲಿ ಮಾಡಲಿಲ್ಲ ಎಂದರ್ಥ.

التفاسير:

external-link copy
18 : 53

لَقَدْ رَاٰی مِنْ اٰیٰتِ رَبِّهِ الْكُبْرٰی ۟

ಅವರು ಅವರ ಪರಿಪಾಲಕನ (ಅಲ್ಲಾಹನ) ಮಹಾ ದೃಷ್ಟಾಂತಗಳಲ್ಲಿ ಕೆಲವನ್ನು ನೋಡಿದರು. info
التفاسير:

external-link copy
19 : 53

اَفَرَءَیْتُمُ اللّٰتَ وَالْعُزّٰی ۟ۙ

ನೀವು ಲಾತ್ ಮತ್ತು ಉಝ್ಝಾದ ಬಗ್ಗೆ ಆಲೋಚಿಸಿ ನೋಡಿದ್ದೀರಾ? info
التفاسير:

external-link copy
20 : 53

وَمَنٰوةَ الثَّالِثَةَ الْاُخْرٰی ۟

ಇನ್ನೊಂದು ಮೂರನೆಯ (ದೇವರಾದ) ಮನಾತ್ ಬಗ್ಗೆ.[1] info

[1] ಲಾತ್ ಒಬ್ಬ ನೀತಿವಂತನಾಗಿದ್ದ. ಈತ ಹಜ್ಜ್‌ಗೆ ಬರುವ ಜನರಿಗೆ ಪಾಯಸ ಬಡಿಸುತ್ತಿದ್ದ. ಈತ ಸತ್ತಾಗ ಜನರು ಅವನ ಸಮಾಧಿಯನ್ನು ಆರಾಧಿಸತೊಡಗಿದರು. ನಂತರ ಅವರು ಅವನ ವಿಗ್ರಹವನ್ನು ತಯಾರಿಸಿದರು. ಉಝ್ಝ ಎಂದರೆ ಗತ್ಫಾನ್‌ನಲ್ಲಿದ್ದ ಒಂದು ಮರವೆಂದು ಹೇಳಲಾಗುತ್ತದೆ. ಜನರು ಇದನ್ನು ಪೂಜಿಸುತ್ತಿದ್ದರು. ಮನಾತ್ ಎಂದರೆ ಮಕ್ಕಾ ಮತ್ತು ಮದೀನ ನಡುವಿನ ಪ್ರದೇಶದಲ್ಲಿದ್ದ ಒಂದು ವಿಗ್ರಹ. ಜನರು ಈ ವಿಗ್ರಹದ ಕೃಪೆಗೆ ಪಾತ್ರರಾಗಲು ಇದರ ಬಳಿ ಸಹಸ್ರಾರು ಸಂಖ್ಯೆಯಲ್ಲಿ ನೆರೆದು ಜಾನುವಾರುಗಳನ್ನು ಬಲಿ ನೀಡುತ್ತಿದ್ದರು.

التفاسير:

external-link copy
21 : 53

اَلَكُمُ الذَّكَرُ وَلَهُ الْاُ ۟

ನಿಮಗೆ ಗಂಡು ಮಕ್ಕಳು ಮತ್ತು ಅಲ್ಲಾಹನಿಗೆ ಹೆಣ್ಣು ಮಕ್ಕಳೇ? info
التفاسير:

external-link copy
22 : 53

تِلْكَ اِذًا قِسْمَةٌ ضِیْزٰی ۟

ಇದು ಬಹುದೊಡ್ಡ ಅನ್ಯಾಯದ ಹಂಚಿಕೆಯಾಗಿದೆ! info
التفاسير:

external-link copy
23 : 53

اِنْ هِیَ اِلَّاۤ اَسْمَآءٌ سَمَّیْتُمُوْهَاۤ اَنْتُمْ وَاٰبَآؤُكُمْ مَّاۤ اَنْزَلَ اللّٰهُ بِهَا مِنْ سُلْطٰنٍ ؕ— اِنْ یَّتَّبِعُوْنَ اِلَّا الظَّنَّ وَمَا تَهْوَی الْاَنْفُسُ ۚ— وَلَقَدْ جَآءَهُمْ مِّنْ رَّبِّهِمُ الْهُدٰی ۟ؕ

ಇವೆಲ್ಲವೂ ನೀವು ಮತ್ತು ನಿಮ್ಮ ಪೂರ್ವಜರು ನಾಮಕರಣ ಮಾಡಿದ ಕೆಲವು (ವಿಗ್ರಹಗಳ) ಹೆಸರುಗಳಲ್ಲದೆ ಇನ್ನೇನೂ ಅಲ್ಲ. ಅವುಗಳ ಬಗ್ಗೆ ಅಲ್ಲಾಹು ಯಾವುದೇ ಸಾಕ್ಷ್ಯಾಧಾರವನ್ನು ಇಳಿಸಿಕೊಟ್ಟಿಲ್ಲ. ಅವರು ಕೇವಲ ಊಹೆಯನ್ನು ಮತ್ತು ಅವರ ಮನಸ್ಸು ಬಯಸುವುದನ್ನು ಮಾತ್ರ ಹಿಂಬಾಲಿಸುತ್ತಿದ್ದಾರೆ. ಅವರ ಬಳಿಗೆ ಅವರ ಪರಿಪಾಲಕನ (ಅಲ್ಲಾಹನ) ಕಡೆಯಿಂದ ಸನ್ಮಾರ್ಗವು ಬಂದುಬಿಟ್ಟಿದೆ. info
التفاسير:

external-link copy
24 : 53

اَمْ لِلْاِنْسَانِ مَا تَمَنّٰی ۟ؗۖ

ಮನುಷ್ಯನಿಗೆ ಅವನು ಬಯಸುವುದೆಲ್ಲವೂ ಸಿಗುವುದೇ?[1] info

[1] ಅಂದರೆ ಅವರು ಆರಾಧಿಸುತ್ತಿರುವ ಆ ದೇವರುಗಳು ಅವರ ಇಚ್ಛೆಗಳನ್ನು ಪೂರೈಸುತ್ತಾರೆ ಮತ್ತು ಅವರಿಗೆ ಶಿಫಾರಸು ಮಾಡುತ್ತಾರೆಂಬ ಅವರ ಬಯಕೆಗಳು ಈಡೇರುವುದಿಲ್ಲ.

التفاسير:

external-link copy
25 : 53

فَلِلّٰهِ الْاٰخِرَةُ وَالْاُوْلٰی ۟۠

ಪರಲೋಕ ಮತ್ತು ಇಹಲೋಕವು ಅಲ್ಲಾಹನ ವಶದಲ್ಲಿವೆ. info
التفاسير:

external-link copy
26 : 53

وَكَمْ مِّنْ مَّلَكٍ فِی السَّمٰوٰتِ لَا تُغْنِیْ شَفَاعَتُهُمْ شَیْـًٔا اِلَّا مِنْ بَعْدِ اَنْ یَّاْذَنَ اللّٰهُ لِمَنْ یَّشَآءُ وَیَرْضٰی ۟

ಆಕಾಶಗಳಲ್ಲಿ ಎಷ್ಟು ದೇವದೂತರು‍ಗಳಿದ್ದಾರೆ. ಅಲ್ಲಾಹು ಅವನು ಇಚ್ಛಿಸುವವರಿಗೆ ಮತ್ತು ಅವನ ಪ್ರೀತಿಗೆ ಪಾತ್ರರಾದವರಿಗೆ ಶಿಫಾರಸು ಮಾಡಲು ಅನುಮತಿ ನೀಡಿದವರ ಹೊರತು ಇತರರು ಮಾಡುವ ಶಿಫಾರಸಿನಿಂದ ಯಾವುದೇ ಪ್ರಯೋಜನವಿಲ್ಲ. info
التفاسير: