ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
7 : 51

وَالسَّمَآءِ ذَاتِ الْحُبُكِ ۟ۙ

ಕಕ್ಷೆಗಳನ್ನು ಹೊಂದಿರುವ ಆಕಾಶದ ಮೇಲಾಣೆ! info
التفاسير:

external-link copy
8 : 51

اِنَّكُمْ لَفِیْ قَوْلٍ مُّخْتَلِفٍ ۟ۙ

ನಿಶ್ಚಯವಾಗಿಯೂ ನೀವು ವಿಭಿನ್ನ ಅಭಿಪ್ರಾಯಗಳಲ್ಲಿದ್ದೀರಿ. info
التفاسير:

external-link copy
9 : 51

یُّؤْفَكُ عَنْهُ مَنْ اُفِكَ ۟ؕ

(ಸತ್ಯದಿಂದ) ತಪ್ಪಿಸಲ್ಪಟ್ಟವನು ಅದರಿಂದ (ಕುರ್‌ಆನ್‍ನಿಂದ) ತಪ್ಪಿಸಲ್ಪಡುತ್ತಾನೆ. info
التفاسير:

external-link copy
10 : 51

قُتِلَ الْخَرّٰصُوْنَ ۟ۙ

ಆಧಾರರಹಿತ ಮಾತುಗಳನ್ನು ಹೇಳುವವರು ನಾಶವಾಗಿದ್ದಾರೆ. info
التفاسير:

external-link copy
11 : 51

الَّذِیْنَ هُمْ فِیْ غَمْرَةٍ سَاهُوْنَ ۟ۙ

ಅವರು ಅಜ್ಞಾನದಲ್ಲಿದ್ದಾರೆ ಮತ್ತು ಮರೆತುಬಿಟ್ಟಿದ್ದಾರೆ. info
التفاسير:

external-link copy
12 : 51

یَسْـَٔلُوْنَ اَیَّانَ یَوْمُ الدِّیْنِ ۟ؕ

“ಪ್ರತಿಫಲದ ದಿನ ಯಾವಾಗ?” ಎಂದು ಅವರು ಕೇಳುತ್ತಾರೆ. info
التفاسير:

external-link copy
13 : 51

یَوْمَ هُمْ عَلَی النَّارِ یُفْتَنُوْنَ ۟

ಅವರನ್ನು ನರಕಾಗ್ನಿಯಲ್ಲಿ ಶಿಕ್ಷಿಸಲಾಗುವ ದಿನ. info
التفاسير:

external-link copy
14 : 51

ذُوْقُوْا فِتْنَتَكُمْ ؕ— هٰذَا الَّذِیْ كُنْتُمْ بِهٖ تَسْتَعْجِلُوْنَ ۟

(ಅವರೊಂದಿಗೆ ಹೇಳಲಾಗುವುದು): “ನಿಮ್ಮ ಶಿಕ್ಷೆಯ ರುಚಿಯನ್ನು ನೋಡಿರಿ. ಇದಕ್ಕೇ ನೀವು ತ್ವರೆ ಮಾಡುತ್ತಿದ್ದಿರಿ.” info
التفاسير:

external-link copy
15 : 51

اِنَّ الْمُتَّقِیْنَ فِیْ جَنّٰتٍ وَّعُیُوْنٍ ۟ۙ

ನಿಶ್ಚಯವಾಗಿಯೂ ದೇವಭಯವುಳ್ಳವರು ಸ್ವರ್ಗೋದ್ಯಾನಗಳಲ್ಲಿ ಮತ್ತು ತೊರೆಗಳಲ್ಲಿರುವರು. info
التفاسير:

external-link copy
16 : 51

اٰخِذِیْنَ مَاۤ اٰتٰىهُمْ رَبُّهُمْ ؕ— اِنَّهُمْ كَانُوْا قَبْلَ ذٰلِكَ مُحْسِنِیْنَ ۟ؕ

ಅವರಿಗೆ ಅವರ ಪರಿಪಾಲಕನು (ಅಲ್ಲಾಹು) ನೀಡಿದ್ದನ್ನು ಅವರು ಪಡೆಯುವರು. ನಿಶ್ಚಯವಾಗಿಯೂ ಇದಕ್ಕಿಂತ ಮೊದಲು ಅವರು ನೀತಿವಂತರಾಗಿದ್ದರು. info
التفاسير:

external-link copy
17 : 51

كَانُوْا قَلِیْلًا مِّنَ الَّیْلِ مَا یَهْجَعُوْنَ ۟

ಅವರು ರಾತ್ರಿಯಲ್ಲಿ ಬಹಳ ಕಡಿಮೆ ನಿದ್ರಿಸುತ್ತಿದ್ದರು. info
التفاسير:

external-link copy
18 : 51

وَبِالْاَسْحَارِ هُمْ یَسْتَغْفِرُوْنَ ۟

ಸಹರಿಯ ಸಮಯದಲ್ಲಿ ಅವರು (ಅಲ್ಲಾಹನಲ್ಲಿ) ಕ್ಷಮೆಯಾಚಿಸುತ್ತಿದ್ದರು. info
التفاسير:

external-link copy
19 : 51

وَفِیْۤ اَمْوَالِهِمْ حَقٌّ لِّلسَّآىِٕلِ وَالْمَحْرُوْمِ ۟

ಅವರ ಧನದಲ್ಲಿ ಬೇಡುವವರಿಗೆ ಮತ್ತು (ಉಪಜೀವನ) ತಡೆಯಲ್ಪಟ್ಟವರಿಗೆ ಹಕ್ಕಿತ್ತು. info
التفاسير:

external-link copy
20 : 51

وَفِی الْاَرْضِ اٰیٰتٌ لِّلْمُوْقِنِیْنَ ۟ۙ

ದೃಢವಿಶ್ವಾಸವುಳ್ಳವರಿಗೆ ಭೂಮಿಯಲ್ಲಿ ಅನೇಕ ದೃಷ್ಟಾಂತಗಳಿವೆ. info
التفاسير:

external-link copy
21 : 51

وَفِیْۤ اَنْفُسِكُمْ ؕ— اَفَلَا تُبْصِرُوْنَ ۟

ನಿಮ್ಮ ದೇಹಗಳಲ್ಲೂ ಕೂಡ. ಆದರೂ ನೀವು ನೋಡುವುದಿಲ್ಲವೇ? info
التفاسير:

external-link copy
22 : 51

وَفِی السَّمَآءِ رِزْقُكُمْ وَمَا تُوْعَدُوْنَ ۟

ಆಕಾಶದಲ್ಲಿ ನಿಮ್ಮ ಉಪಜೀವನ ಮತ್ತು ನಿಮಗೆ ವಾಗ್ದಾನ ಮಾಡಲಾಗುವ ಎಲ್ಲವೂ ಇದೆ. info
التفاسير:

external-link copy
23 : 51

فَوَرَبِّ السَّمَآءِ وَالْاَرْضِ اِنَّهٗ لَحَقٌّ مِّثْلَ مَاۤ اَنَّكُمْ تَنْطِقُوْنَ ۟۠

ಭೂಮ್ಯಾಕಾಶಗಳ ಪರಿಪಾಲಕನ (ಅಲ್ಲಾಹನ) ಮೇಲಾಣೆ! ನೀವು ಹೇಗೆ ಮಾತನಾಡುತ್ತಿರುವಿರೋ ಹಾಗೆಯೇ ಇವೆಲ್ಲವೂ ಸತ್ಯವಾಗಿದೆ.[1] info

[1] ನಿಮಗೆ ಮಾತನಾಡುವ ಶಕ್ತಿಯಿರುವುದನ್ನು ನೀವು ಹೇಗೆ ನಿರಾಕರಿಸುವುದಿಲ್ಲವೋ ಹಾಗೆಯೇ ಮೇಲೆ ಹೇಳಿದ ವಿಷಯಗಳೆಲ್ಲವೂ ನಿರಾಕರಿಸಲಾಗದ ಸತ್ಯವಾಗಿದೆ.

التفاسير:

external-link copy
24 : 51

هَلْ اَتٰىكَ حَدِیْثُ ضَیْفِ اِبْرٰهِیْمَ الْمُكْرَمِیْنَ ۟ۘ

ಇಬ್ರಾಹೀಮರ ಸನ್ಮಾನ್ಯ ಅತಿಥಿಗಳ ಸಮಾಚಾರವು ನಿಮಗೆ ತಲುಪಿದೆಯೇ? info
التفاسير:

external-link copy
25 : 51

اِذْ دَخَلُوْا عَلَیْهِ فَقَالُوْا سَلٰمًا ؕ— قَالَ سَلٰمٌ ۚ— قَوْمٌ مُّنْكَرُوْنَ ۟

ಅವರು ಇಬ್ರಾಹೀಮರ ಬಳಿಗೆ ಬಂದು ಸಲಾಂ ಹೇಳಿದ ಸಂದರ್ಭ. ಇಬ್ರಾಹೀಮ್ ಸಲಾಂಗೆ ಉತ್ತರಿಸಿ ಹೇಳಿದರು: “ನೀವು ಅಪರಿಚಿತ ಜನರಂತೆ ಕಾಣುತ್ತೀರಿ.” info
التفاسير:

external-link copy
26 : 51

فَرَاغَ اِلٰۤی اَهْلِهٖ فَجَآءَ بِعِجْلٍ سَمِیْنٍ ۟ۙ

ನಂತರ ಅವರು ಆತುರದಿಂದ ತಮ್ಮ ಮನೆಯವರ ಕಡೆಗೆ ತೆರಳಿ ಒಂದು ಕೊಬ್ಬಿದ ಕರುವನ್ನು (ಬೇಯಿಸಿ) ತಂದರು. info
التفاسير:

external-link copy
27 : 51

فَقَرَّبَهٗۤ اِلَیْهِمْ قَالَ اَلَا تَاْكُلُوْنَ ۟ؗ

ಅದನ್ನು ಅವರ ಮುಂದೆ ಇಟ್ಟರು. ನಂತರ ಕೇಳಿದರು: “ನೀವೇಕೆ ತಿನ್ನುವುದಿಲ್ಲ?” info
التفاسير:

external-link copy
28 : 51

فَاَوْجَسَ مِنْهُمْ خِیْفَةً ؕ— قَالُوْا لَا تَخَفْ ؕ— وَبَشَّرُوْهُ بِغُلٰمٍ عَلِیْمٍ ۟

ಇಬ್ರಾಹೀಮರಿಗೆ ಅವರ ಬಗ್ಗೆ ಮನಸ್ಸಿನಲ್ಲಿ ಗಾಬರಿ ಉಂಟಾಯಿತು. ಅವರು ಹೇಳಿದರು: “ಗಾಬರಿಯಾಗಬೇಡಿ.” ಅವರು ಇಬ್ರಾಹೀಮರಿಗೆ ಜ್ಞಾನವಂತ ಮಗುವಿನ (ಜನನದ ಬಗ್ಗೆ) ಸುವಾರ್ತೆ ತಿಳಿಸಿದರು. info
التفاسير:

external-link copy
29 : 51

فَاَقْبَلَتِ امْرَاَتُهٗ فِیْ صَرَّةٍ فَصَكَّتْ وَجْهَهَا وَقَالَتْ عَجُوْزٌ عَقِیْمٌ ۟

ಅವರ ಪತ್ನಿ ಸದ್ದು ಮಾಡುತ್ತಾ ಮುಂದಕ್ಕೆ ಬಂದು ತನ್ನ ಮುಖಕ್ಕೆ ಬಡಿದು ಹೇಳಿದರು: “ನಾನೊಬ್ಬ ಮುದುಕಿ ಮತ್ತು ಬಂಜೆಯಾಗಿದ್ದೇನೆ.” info
التفاسير:

external-link copy
30 : 51

قَالُوْا كَذٰلِكِ ۙ— قَالَ رَبُّكِ ؕ— اِنَّهٗ هُوَ الْحَكِیْمُ الْعَلِیْمُ ۟

ದೇವದೂತರು‍ಗಳು ಹೇಳಿದರು: “ಈ ರೀತಿ ನಿಮ್ಮ ಪರಿಪಾಲಕನು (ಅಲ್ಲಾಹು) ಹೇಳಿದ್ದಾನೆ. ನಿಶ್ಚಯವಾಗಿಯೂ ಅವನು ವಿವೇಕಪೂರ್ಣನು ಮತ್ತು ಸರ್ವಜ್ಞನಾಗಿದ್ದಾನೆ.” info
التفاسير: