ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
15 : 47

مَثَلُ الْجَنَّةِ الَّتِیْ وُعِدَ الْمُتَّقُوْنَ ؕ— فِیْهَاۤ اَنْهٰرٌ مِّنْ مَّآءٍ غَیْرِ اٰسِنٍ ۚ— وَاَنْهٰرٌ مِّنْ لَّبَنٍ لَّمْ یَتَغَیَّرْ طَعْمُهٗ ۚ— وَاَنْهٰرٌ مِّنْ خَمْرٍ لَّذَّةٍ لِّلشّٰرِبِیْنَ ۚ۬— وَاَنْهٰرٌ مِّنْ عَسَلٍ مُّصَفًّی ؕ— وَلَهُمْ فِیْهَا مِنْ كُلِّ الثَّمَرٰتِ وَمَغْفِرَةٌ مِّنْ رَّبِّهِمْ ؕ— كَمَنْ هُوَ خَالِدٌ فِی النَّارِ وَسُقُوْا مَآءً حَمِیْمًا فَقَطَّعَ اَمْعَآءَهُمْ ۟

ದೇವಭಯವುಳ್ಳವರಿಗೆ ವಾಗ್ದಾನ ಮಾಡಲಾಗಿರುವ ಸ್ವರ್ಗವು ಹೇಗಿದೆಯೆಂದರೆ ಅದರಲ್ಲಿ ವಾಸನೆ ಬದಲಾಗದ ನೀರಿನ ಹೊಳೆಗಳಿವೆ, ರುಚಿ ಬದಲಾಗದ ಹಾಲಿನ ಹೊಳೆಗಳಿವೆ, ಕುಡಿಯುವವರಿಗೆ ಆಹ್ಲಾದಕರವಾದ ಶರಾಬಿನ ನದಿಗಳಿವೆ ಮತ್ತು ಶುದ್ಧವಾದ ಜೇನಿನ ನದಿಗಳಿವೆ. ಅಲ್ಲಿ ಅವರಿಗೆ ಎಲ್ಲಾ ತರಹದ ಹಣ್ಣು-ಹಂಪಲುಗಳಿವೆ. ಅವರ ಪರಿಪಾಲಕನ (ಅಲ್ಲಾಹನ) ಕಡೆಯ ಕ್ಷಮೆಯೂ ಇದೆ. (ಇವರ ಸ್ಥಿತಿಯು) ನರಕದಲ್ಲಿ ಶಾಶ್ವತವಾಗಿ ವಾಸಿಸುವವನಂತೆಯೇ? ಅವರಿಗೆ ಕುಡಿಯಲು ನೀಡಲಾಗುವ ಕುದಿಯುವ ನೀರು ಅವರ ಕರುಳುಗಳನ್ನು ತುಂಡು ತುಂಡಾಗಿ ಕತ್ತರಿಸುತ್ತದೆ. info
التفاسير: