ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
44 : 41

وَلَوْ جَعَلْنٰهُ قُرْاٰنًا اَعْجَمِیًّا لَّقَالُوْا لَوْلَا فُصِّلَتْ اٰیٰتُهٗ ؕ— ءَاَؔعْجَمِیٌّ وَّعَرَبِیٌّ ؕ— قُلْ هُوَ لِلَّذِیْنَ اٰمَنُوْا هُدًی وَّشِفَآءٌ ؕ— وَالَّذِیْنَ لَا یُؤْمِنُوْنَ فِیْۤ اٰذَانِهِمْ وَقْرٌ وَّهُوَ عَلَیْهِمْ عَمًی ؕ— اُولٰٓىِٕكَ یُنَادَوْنَ مِنْ مَّكَانٍ بَعِیْدٍ ۟۠

ನಾವು ಇದನ್ನು ಅರಬ್ಬೇತರ ಭಾಷೆಯ ಕುರ್‌ಆನ್ ಆಗಿ ಮಾಡಿರುತ್ತಿದ್ದರೆ ಅವರು ಕೇಳುತ್ತಿದ್ದರು: “ಇದರ ವಚನಗಳನ್ನೇಕೆ ವಿವರಿಸಲಾಗಿಲ್ಲ? ಅರಬೇತರ (ಗ್ರಂಥ) ಮತ್ತು ಅರಬಿ(ಪ್ರವಾದಿ)ಯೇ?” ಹೇಳಿರಿ: “ಇದು (ಕುರ್‌ಆನ್) ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗ ಮತ್ತು ಉಪಶಮನವಾಗಿದೆ. ಅದರಲ್ಲಿ ವಿಶ್ವಾಸವಿಡದವರು ಯಾರೋ ಅವರ ಕಿವಿಗಳಲ್ಲಿ ಕಿವುಡುತನವಿದೆ. ಅದು (ಕುರ್‌ಆನ್) ಅವರಿಗೆ ಕುರುಡುತನವಾಗಿದೆ. ಈ ಜನರು ವಿದೂರ ಸ್ಥಳದಿಂದ ಕೂಗಿ ಕರೆಯಲಾಗುವವರಾಗಿದ್ದಾರೆ.”[1] info

[1] ಅಂದರೆ ದೂರದಲ್ಲಿರುವ ಜನರಿಗೆ ಕರೆಯುವವನನ್ನು ನೋಡಲು ಮತ್ತು ಅವನ ಕರೆಯನ್ನು ಕೇಳಲು ಸಾಧ್ಯವಾಗುವುದಿಲ್ಲ. ಹಾಗೆಯೇ ಇವರಿಗೂ ಕುರ್‌ಆನನ್ನು ಕೇಳಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

التفاسير: