ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
3 : 4

وَاِنْ خِفْتُمْ اَلَّا تُقْسِطُوْا فِی الْیَتٰمٰی فَانْكِحُوْا مَا طَابَ لَكُمْ مِّنَ النِّسَآءِ مَثْنٰی وَثُلٰثَ وَرُبٰعَ ۚ— فَاِنْ خِفْتُمْ اَلَّا تَعْدِلُوْا فَوَاحِدَةً اَوْ مَا مَلَكَتْ اَیْمَانُكُمْ ؕ— ذٰلِكَ اَدْنٰۤی اَلَّا تَعُوْلُوْا ۟ؕ

ಅನಾಥ ಹೆಣ್ಣುಮಕ್ಕಳ ವಿಷಯದಲ್ಲಿ ನ್ಯಾಯದಿಂದ ವರ್ತಿಸಲು ನಿಮಗೆ ಸಾಧ್ಯವಾಗದೆಂದು ನೀವು ಭಯಪಡುವುದಾದರೆ, ಇತರ ಮಹಿಳೆಯರಲ್ಲಿ ನಿಮಗೆ ಇಷ್ಟವಾದ ಇಬ್ಬರು, ಮೂವರು ಅಥವಾ ನಾಲ್ವರನ್ನು ವಿವಾಹವಾಗಿರಿ.[1] ಆದರೆ (ಅವರ ನಡುವೆ) ನ್ಯಾಯದಿಂದ ವರ್ತಿಸಲು ನಿಮಗೆ ಸಾಧ್ಯವಾಗದೆಂಬ ಭಯವಿದ್ದರೆ, ಒಬ್ಬಳನ್ನೇ ವಿವಾಹವಾಗಿರಿ.[2] ಅಥವಾ ನಿಮ್ಮ ಅಧೀನದಲ್ಲಿರುವ ಗುಲಾಮಸ್ತ್ರೀಯನ್ನು ವಿವಾಹವಾಗಿರಿ. ನೀವು (ಅನ್ಯಾಯದ ಕಡೆಗೆ) ವಾಲದಿರಲು ಇದು ಅತ್ಯಂತ ಸೂಕ್ತವಾಗಿದೆ. info

[1] ಇಸ್ಲಾಮೀ ಪೂರ್ವ ಕಾಲದಲ್ಲಿ ಅನಾಥ ಹೆಣ್ಣುಮಕ್ಕಳ ಪೋಷಣೆಯ ಹೊಣೆಯನ್ನು ವಹಿಸಿಕೊಂಡವರು ಅವರ ಆಸ್ತಿ ಮತ್ತು ಸೌಂದರ್ಯದ ಮೇಲೆ ಕಣ್ಣಿಟ್ಟು ಅವರನ್ನು ವಿವಾಹವಾಗುತ್ತಿದ್ದರು. ಆದರೆ ಅವರಿಗೆ ವಧುದಕ್ಷಿಣೆ ನೀಡುತ್ತಿರಲಿಲ್ಲ ಮತ್ತು ಅವರೊಡನೆ ನ್ಯಾಯದಿಂದ ವರ್ತಿಸುತ್ತಿರಲಿಲ್ಲ. ಹೀಗೆ ಅವರೊಡನೆ ನ್ಯಾಯದಿಂದ ವರ್ತಿಸಲು ಸಾಧ್ಯವಾಗದು ಎಂದು ಭಯಪಡುವವರು ಅವರನ್ನು ವಿವಾಹವಾಗಬಾರದು. [2] ಏಕಕಾಲದಲ್ಲಿ ನಾಲ್ಕು ಪತ್ನಿಯರನ್ನು ಹೊಂದುವ ಅನುಮತಿಯಿದೆ. ಆದರೆ ಅವರ ನಡುವೆ ನ್ಯಾಯಯುತವಾಗಿ ವರ್ತಿಸಬೇಕು. ಅದು ಸಾಧ್ಯವಾಗದೆಂಬ ಭಯವಿದ್ದರೆ ಒಬ್ಬಳನ್ನು ಮಾತ್ರ ವಿವಾಹವಾಗಬೇಕು.

التفاسير: