ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
135 : 4

یٰۤاَیُّهَا الَّذِیْنَ اٰمَنُوْا كُوْنُوْا قَوّٰمِیْنَ بِالْقِسْطِ شُهَدَآءَ لِلّٰهِ وَلَوْ عَلٰۤی اَنْفُسِكُمْ اَوِ الْوَالِدَیْنِ وَالْاَقْرَبِیْنَ ۚ— اِنْ یَّكُنْ غَنِیًّا اَوْ فَقِیْرًا فَاللّٰهُ اَوْلٰی بِهِمَا ۫— فَلَا تَتَّبِعُوا الْهَوٰۤی اَنْ تَعْدِلُوْا ۚ— وَاِنْ تَلْوٗۤا اَوْ تُعْرِضُوْا فَاِنَّ اللّٰهَ كَانَ بِمَا تَعْمَلُوْنَ خَبِیْرًا ۟

ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನಿಗೆ ಸಾಕ್ಷಿಯಾಗಿದ್ದು, ನ್ಯಾಯ ನಿಷ್ಠೆಯಲ್ಲಿ ಸದಾ ದೃಢವಾಗಿ ನಿಲ್ಲಿರಿ. ಅದು ನಿಮಗೆ, ನಿಮ್ಮ ತಂದೆ-ತಾಯಿಗಳಿಗೆ, ಅಥವಾ ಹತ್ತಿರದ ಸಂಬಂಧಿಕರಿಗೆ ವಿರುದ್ಧವಾಗಿದ್ದರೂ ಸಹ. ಶ್ರೀಮಂತನಾಗಿರಲಿ ಅಥವಾ ಬಡವನಾಗಿರಲಿ—ಇಬ್ಬರಿಗೂ ಅಲ್ಲಾಹು ಬಹಳ ಹತ್ತಿರದಲ್ಲಿದ್ದಾನೆ. ಆದ್ದರಿಂದ ನೀವು ಸ್ವೇಚ್ಛೆಗಳನ್ನು ಹಿಂಬಾಲಿಸಿ ನ್ಯಾಯ ತಪ್ಪಿ ನಡೆಯಬೇಡಿ. ನೀವು (ಸಾಕ್ಷ್ಯವನ್ನು) ತಿರುಚಿದರೆ, ಅಥವಾ (ಸಾಕ್ಷಿ ನುಡಿಯದೆ) ಹಿಂದೆ ಸರಿದರೆ, ನಿಶ್ಚಯವಾಗಿಯೂ ನೀವು ಮಾಡುವುದನ್ನು ಅಲ್ಲಾಹು ಸೂಕ್ಷ್ಮವಾಗಿ ತಿಳಿಯುತ್ತಾನೆ. info
التفاسير: