ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
12 : 4

وَلَكُمْ نِصْفُ مَا تَرَكَ اَزْوَاجُكُمْ اِنْ لَّمْ یَكُنْ لَّهُنَّ وَلَدٌ ۚ— فَاِنْ كَانَ لَهُنَّ وَلَدٌ فَلَكُمُ الرُّبُعُ مِمَّا تَرَكْنَ مِنْ بَعْدِ وَصِیَّةٍ یُّوْصِیْنَ بِهَاۤ اَوْ دَیْنٍ ؕ— وَلَهُنَّ الرُّبُعُ مِمَّا تَرَكْتُمْ اِنْ لَّمْ یَكُنْ لَّكُمْ وَلَدٌ ۚ— فَاِنْ كَانَ لَكُمْ وَلَدٌ فَلَهُنَّ الثُّمُنُ مِمَّا تَرَكْتُمْ مِّنْ بَعْدِ وَصِیَّةٍ تُوْصُوْنَ بِهَاۤ اَوْ دَیْنٍ ؕ— وَاِنْ كَانَ رَجُلٌ یُّوْرَثُ كَلٰلَةً اَوِ امْرَاَةٌ وَّلَهٗۤ اَخٌ اَوْ اُخْتٌ فَلِكُلِّ وَاحِدٍ مِّنْهُمَا السُّدُسُ ۚ— فَاِنْ كَانُوْۤا اَكْثَرَ مِنْ ذٰلِكَ فَهُمْ شُرَكَآءُ فِی الثُّلُثِ مِنْ بَعْدِ وَصِیَّةٍ یُّوْصٰی بِهَاۤ اَوْ دَیْنٍ ۙ— غَیْرَ مُضَآرٍّ ۚ— وَصِیَّةً مِّنَ اللّٰهِ ؕ— وَاللّٰهُ عَلِیْمٌ حَلِیْمٌ ۟ؕ

ನಿಮ್ಮ ಪತ್ನಿಯರಿಗೆ ಮಕ್ಕಳಿಲ್ಲದಿದ್ದರೆ, ಅವರು ಬಿಟ್ಟುಹೋದ ಆಸ್ತಿಯಲ್ಲಿ ಅರ್ಧ ಭಾಗವು ನಿಮಗೆ ದೊರೆಯುತ್ತದೆ. ಅವರಿಗೆ ಮಕ್ಕಳಿದ್ದರೆ ಅವರು ಬಿಟ್ಟು ಹೋದ ಆಸ್ತಿಯಲ್ಲಿ ನಾಲ್ಕನೇ ಒಂದು ಭಾಗವು ನಿಮಗೆ ದೊರೆಯುತ್ತದೆ. ಇದು ಅವರು ಮಾಡುವ ಉಯಿಲು ಮತ್ತು ಸಾಲವನ್ನು ತೀರಿಸಿದ ನಂತರ. ನಿಮಗೆ ಮಕ್ಕಳಿಲ್ಲದಿದ್ದರೆ, ನೀವು ಬಿಟ್ಟುಹೋದ ಆಸ್ತಿಯಲ್ಲಿ ನಾಲ್ಕನೇ ಒಂದು ಭಾಗವು ಅವರಿಗೆ (ಪತ್ನಿಯರಿಗೆ) ದೊರೆಯುತ್ತದೆ. ನಿಮಗೆ ಮಕ್ಕಳಿದ್ದರೆ, ನೀವು ಬಿಟ್ಟುಹೋದ ಆಸ್ತಿಯಲ್ಲಿ ಎಂಟನೇ ಒಂದು ಭಾಗವು ಅವರಿಗೆ ದೊರೆಯುತ್ತದೆ. ಇದು ನೀವು ಮಾಡುವ ಉಯಿಲು ಮತ್ತು ಸಾಲವನ್ನು ತೀರಿಸಿದ ನಂತರ. ವಾರಸು ಆಸ್ತಿಯನ್ನು ಬಿಟ್ಟು ಹೋಗುವ ಪುರುಷ ಅಥವಾ ಮಹಿಳೆಗೆ ತಂದೆ-ತಾಯಿ ಹಾಗೂ ಮಕ್ಕಳಿಲ್ಲದೆ, ಕೇವಲ ಸಹೋದರ ಅಥವಾ ಸಹೋದರಿಯಿದ್ದರೆ, ಆ ಇಬ್ಬರಲ್ಲಿ ಪ್ರತಿಯೊಬ್ಬರಿಗೂ ಆರನೇ ಒಂದು ಭಾಗವು ದೊರೆಯುತ್ತದೆ. ಅವರು ಇಬ್ಬರಿಗಿಂತ ಹೆಚ್ಚಿದ್ದರೆ, ಅವರು ಮೂರನೇ ಒಂದು ಭಾಗದಲ್ಲಿ ಸಮಾನ ಪಾಲುದಾರರಾಗುತ್ತಾರೆ. ಇದು ಹಾನಿಕರವಲ್ಲದ ಉಯಿಲು[1] ಮತ್ತು ಸಾಲವನ್ನು ತೀರಿಸಿದ ನಂತರ. ಅಲ್ಲಾಹು ಎಲ್ಲವನ್ನೂ ತಿಳಿದವನು ಮತ್ತು ಸಹಿಷ್ಣುತೆಯುಳ್ಳವನಾಗಿದ್ದಾನೆ. info

[1] ಒಟ್ಟು ಆಸ್ತಿಯ ಮೂರನೇ ಒಂದು ಭಾಗವನ್ನು ಮಾತ್ರ ಉಯಿಲು ಮಾಡಬಹುದು. ಅದಕ್ಕಿಂತ ಹೆಚ್ಚು ಉಯಿಲು ಮಾಡುವುದು ವಾರಸುದಾರರಿಗೆ ಮಾಡುವ ಅನ್ಯಾಯವಾಗಿದೆ. ಹಾನಿಕರ ಉಯಿಲು ಎಂದರೆ ವಾರಸುದಾರರಲ್ಲಿರುವ ದ್ವೇಷದಿಂದ ತನ್ನ ಆಸ್ತಿಯಲ್ಲಿ ಅವರಿಗೆ ಹಕ್ಕು ಸಿಗಬಾರದೆಂದು ತನ್ನ ಆಸ್ತಿಯನ್ನು ತನಗೆ ಇಷ್ಟವಾದ ಬೇರೊಬ್ಬ ವ್ಯಕ್ತಿಗೆ ಉಯಿಲು ಮಾಡುವುದು.

التفاسير: