ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
102 : 4

وَاِذَا كُنْتَ فِیْهِمْ فَاَقَمْتَ لَهُمُ الصَّلٰوةَ فَلْتَقُمْ طَآىِٕفَةٌ مِّنْهُمْ مَّعَكَ وَلْیَاْخُذُوْۤا اَسْلِحَتَهُمْ ۫— فَاِذَا سَجَدُوْا فَلْیَكُوْنُوْا مِنْ وَّرَآىِٕكُمْ ۪— وَلْتَاْتِ طَآىِٕفَةٌ اُخْرٰی لَمْ یُصَلُّوْا فَلْیُصَلُّوْا مَعَكَ وَلْیَاْخُذُوْا حِذْرَهُمْ وَاَسْلِحَتَهُمْ ۚ— وَدَّ الَّذِیْنَ كَفَرُوْا لَوْ تَغْفُلُوْنَ عَنْ اَسْلِحَتِكُمْ وَاَمْتِعَتِكُمْ فَیَمِیْلُوْنَ عَلَیْكُمْ مَّیْلَةً وَّاحِدَةً ؕ— وَلَا جُنَاحَ عَلَیْكُمْ اِنْ كَانَ بِكُمْ اَذًی مِّنْ مَّطَرٍ اَوْ كُنْتُمْ مَّرْضٰۤی اَنْ تَضَعُوْۤا اَسْلِحَتَكُمْ ۚ— وَخُذُوْا حِذْرَكُمْ ؕ— اِنَّ اللّٰهَ اَعَدَّ لِلْكٰفِرِیْنَ عَذَابًا مُّهِیْنًا ۟

(ಓ ಪ್ರವಾದಿಯವರೇ!) ನೀವು ಅವರ ಜೊತೆಯಲ್ಲಿರುವಾಗ ಮತ್ತು ಅವರಿಗೆ ಇಮಾಂ ನಿಂತು ನಮಾಝ್ ನಿರ್ವಹಿಸುತ್ತಿರುವಾಗ, ಅವರಲ್ಲೊಂದು ಗುಂಪು ತಮ್ಮ ಜೊತೆಗೆ ನಮಾಝ್ ಮಾಡಲಿ. ಅವರು ತಮ್ಮ ಶಸ್ತ್ರಗಳನ್ನು ಹಿಡಿದುಕೊಂಡಿರಲಿ. ಅವರು ಸುಜೂದ್ ಮಾಡಿದ ನಂತರ ತಮ್ಮ ಹಿಂಭಾಗಕ್ಕೆ ಸರಿದು, ನಮಾಝ್ ನಿರ್ವಹಿಸದ ಇನ್ನೊಂದು ಗುಂಪು ಬಂದು ನಿಮ್ಮೊಂದಿಗೆ ನಮಾಝ್ ನಿರ್ವಹಿಸಲಿ. ಅವರು ಎಚ್ಚರವಾಗಿರಲಿ ಮತ್ತು ತಮ್ಮ ಶಸ್ತ್ರಗಳನ್ನು ಹಿಡಿದುಕೊಂಡಿರಲಿ. ನೀವು ನಿಮ್ಮ ಶಸ್ತ್ರಗಳನ್ನು ಮತ್ತು ನಿಮ್ಮ ಸಾಮಗ್ರಿಗಳನ್ನು ನಿರ್ಲಕ್ಷಿಸಿದರೆ, ನಿಮ್ಮ ಮೇಲೆ ಒಮ್ಮೆಲೇ ದಾಳಿ ಮಾಡಬಹುದೆಂದು ಸತ್ಯನಿಷೇಧಿಗಳು ಬಯಸುತ್ತಾರೆ. ಆದರೆ ನೀವು ಮಳೆಯಿಂದ ತೊಂದರೆ ಅನುಭವಿಸುತ್ತಿದ್ದರೆ, ಅಥವಾ ನೀವು ಅನಾರೋಗ್ಯದಲ್ಲಿದ್ದರೆ, ನಿಮ್ಮ ಶಸ್ತ್ರಗಳನ್ನು ಕೆಳಗಿಡುವುದರಲ್ಲಿ ದೋಷವಿಲ್ಲ. ಆದರೆ ಪೂರ್ಣ ಎಚ್ಚರಿಕೆಯಿಂದಿರಿ. ನಿಶ್ಚಯವಾಗಿಯೂ ಅಲ್ಲಾಹು ಸತ್ಯನಿಷೇಧಿಗಳಿಗೆ ಅವಮಾನಕರ ಶಿಕ್ಷೆಯನ್ನು ಸಿದ್ಧಗೊಳಿಸಿದ್ದಾನೆ.[1] info

[1] ಇದು ಯುದ್ಧ ಮಾಡುವ ಸಂದರ್ಭದಲ್ಲಿ ನಮಾಝ್ ಹೇಗೆ ನಿರ್ವಹಿಸಬೇಕು ಎಂಬುದರ ವಿವರಣೆಯಾಗಿದೆ. ಇದನ್ನು ಸಲಾತುಲ್ ಖೌಫ್ (ಭಯದ ನಮಾಝ್) ಎಂದು ಕರೆಯಲಾಗುತ್ತದೆ.

التفاسير: