ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
176 : 4

یَسْتَفْتُوْنَكَ ؕ— قُلِ اللّٰهُ یُفْتِیْكُمْ فِی الْكَلٰلَةِ ؕ— اِنِ امْرُؤٌا هَلَكَ لَیْسَ لَهٗ وَلَدٌ وَّلَهٗۤ اُخْتٌ فَلَهَا نِصْفُ مَا تَرَكَ ۚ— وَهُوَ یَرِثُهَاۤ اِنْ لَّمْ یَكُنْ لَّهَا وَلَدٌ ؕ— فَاِنْ كَانَتَا اثْنَتَیْنِ فَلَهُمَا الثُّلُثٰنِ مِمَّا تَرَكَ ؕ— وَاِنْ كَانُوْۤا اِخْوَةً رِّجَالًا وَّنِسَآءً فَلِلذَّكَرِ مِثْلُ حَظِّ الْاُنْثَیَیْنِ ؕ— یُبَیِّنُ اللّٰهُ لَكُمْ اَنْ تَضِلُّوْا ؕ— وَاللّٰهُ بِكُلِّ شَیْءٍ عَلِیْمٌ ۟۠

ಅವರು ತಮ್ಮೊಂದಿಗೆ ಧರ್ಮವಿಧಿಯನ್ನು ಕೇಳುತ್ತಾರೆ. ಹೇಳಿರಿ: “ತಂದೆ-ತಾಯಿ ಮತ್ತು ಮಕ್ಕಳಿಲ್ಲದವರ ಬಗ್ಗೆ ಅಲ್ಲಾಹು ನಿಮಗೆ ಧರ್ಮವಿಧಿಯನ್ನು ನೀಡುತ್ತಾನೆ.”[1] ಒಬ್ಬ ವ್ಯಕ್ತಿ ಸಾಯುವಾಗ ಸಂತಾನರಹಿತನಾಗಿದ್ದು ಅವನಿಗೆ ಒಬ್ಬ ಸಹೋದರಿ ಮಾತ್ರವಿದ್ದರೆ ಅವನು ಬಿಟ್ಟು ಹೋದ ಆಸ್ತಿಯಲ್ಲಿ ಅರ್ಧ ಭಾಗ ಅವಳಿಗೆ ದೊರೆಯುತ್ತದೆ. ಅವಳು ಸಂತಾನರಹಿತೆಯಾಗಿದ್ದು ಮರಣಹೊಂದಿದರೆ, ಅವಳ ಪೂರ್ಣ ಆಸ್ತಿಗೆ ಇವನು ವಾರಸುದಾರನಾಗುತ್ತಾನೆ. ಅವನಿಗೆ ಇಬ್ಬರು ಸಹೋದರಿಯರಿದ್ದರೆ ಅವನು ಬಿಟ್ಟು ಹೋದ ಆಸ್ತಿಯ ಮೂರನೇ ಎರಡು ಭಾಗವು ಅವರಿಗೆ ದೊರೆಯುತ್ತದೆ. ಅವನಿಗೆ ಅನೇಕ ಸಹೋದರ-ಸಹೋದರಿಯರಿದ್ದರೆ ಒಬ್ಬ ಪುರುಷನ ಪಾಲು ಇಬ್ಬರು ಮಹಿಳೆಯರ ಪಾಲಿಗೆ ಸಮಾನವಾಗಿದೆ. ನೀವು ದಾರಿತಪ್ಪದಿರಲು ಅಲ್ಲಾಹು ನಿಮಗೆ ವಿಷಯಗಳನ್ನು ಸ್ಪಷ್ಟಗೊಳಿಸುತ್ತಿದ್ದಾನೆ. ಅಲ್ಲಾಹು ಎಲ್ಲಾ ವಿಷಯಗಳನ್ನೂ ತಿಳಿದವನಾಗಿದ್ದಾನೆ. info

[1] ಮೃತ ವ್ಯಕ್ತಿಗೆ ತಂದೆ-ತಾಯಿ ಮತ್ತು ಮಕ್ಕಳಿಲ್ಲದಿದ್ದರೆ ಅವನ ಆಸ್ತಿಯನ್ನು ಹೇಗೆ ಪಾಲು ಮಾಡಬೇಕೆಂದು ಈ ವಚನವು ವಿವರಿಸುತ್ತದೆ.

التفاسير: