ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
8 : 39

وَاِذَا مَسَّ الْاِنْسَانَ ضُرٌّ دَعَا رَبَّهٗ مُنِیْبًا اِلَیْهِ ثُمَّ اِذَا خَوَّلَهٗ نِعْمَةً مِّنْهُ نَسِیَ مَا كَانَ یَدْعُوْۤا اِلَیْهِ مِنْ قَبْلُ وَجَعَلَ لِلّٰهِ اَنْدَادًا لِّیُضِلَّ عَنْ سَبِیْلِهٖ ؕ— قُلْ تَمَتَّعْ بِكُفْرِكَ قَلِیْلًا ۖۗ— اِنَّكَ مِنْ اَصْحٰبِ النَّارِ ۟

ಮನುಷ್ಯನಿಗೆ ಏನಾದರೂ ತೊಂದರೆಯುಂಟಾದರೆ ಅವನು ತನ್ನ ಪರಿಪಾಲಕನ (ಅಲ್ಲಾಹನ) ಕಡೆಗೆ ತಿರುಗಿ ಅವನನ್ನು ಕರೆದು ಪ್ರಾರ್ಥಿಸುತ್ತಾನೆ. ನಂತರ ಅಲ್ಲಾಹು ಅವನಿಗೆ ತನ್ನ ಕಡೆಯ ಏನಾದರೂ ಅನುಗ್ರಹವನ್ನು ದಯಪಾಲಿಸಿದರೆ ಅವನು ಮೊದಲು ಯಾವುದಕ್ಕಾಗಿ ಪ್ರಾರ್ಥಿಸಿದ್ದನೋ ಅದನ್ನು ಅವನು ಮರೆತುಬಿಡುತ್ತಾನೆ ಮತ್ತು ಅಲ್ಲಾಹನಿಗೆ ಸರಿಸಮಾನರನ್ನು ನಿಶ್ಚಯಿಸಿ ಜನರನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸುತ್ತಾನೆ. ಹೇಳಿರಿ: “ನೀನು ನಿನ್ನ ಈ ಸತ್ಯನಿಷೇಧದಿಂದ ಸ್ವಲ್ಪ ಕಾಲದವರೆಗೆ ಆನಂದದಿಂದ ಜೀವಿಸು. ನಿಶ್ಚಯವಾಗಿಯೂ ನೀನು ನರಕವಾಸಿಗಳಲ್ಲಿ ಸೇರಿಕೊಳ್ಳುವೆ.” info
التفاسير: