ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
127 : 37

فَكَذَّبُوْهُ فَاِنَّهُمْ لَمُحْضَرُوْنَ ۟ۙ

ಆದರೆ ಅವರು ಅವರನ್ನು ನಿಷೇಧಿಸಿದರು. ನಿಶ್ಚಯವಾಗಿಯೂ ಅವರನ್ನು (ಶಿಕ್ಷೆಗೆ) ಹಾಜರುಪಡಿಸಲಾಗುವುದು. info
التفاسير:

external-link copy
128 : 37

اِلَّا عِبَادَ اللّٰهِ الْمُخْلَصِیْنَ ۟

ಅಲ್ಲಾಹನ ನಿಷ್ಕಳಂಕ ದಾಸರು ಇದಕ್ಕೆ ಹೊರತಾಗಿದ್ದಾರೆ. info
التفاسير:

external-link copy
129 : 37

وَتَرَكْنَا عَلَیْهِ فِی الْاٰخِرِیْنَ ۟ۙ

ನಂತರದ ತಲೆಮಾರುಗಳಲ್ಲಿ ನಾವು ಅವರ ಕೀರ್ತಿಯನ್ನು ಉಳಿಸಿದೆವು. info
التفاسير:

external-link copy
130 : 37

سَلٰمٌ عَلٰۤی اِلْ یَاسِیْنَ ۟

ಇಲ್ಯಾಸರ ಮೇಲೆ ಶಾಂತಿಯಿರಲಿ! info
التفاسير:

external-link copy
131 : 37

اِنَّا كَذٰلِكَ نَجْزِی الْمُحْسِنِیْنَ ۟

ನಿಶ್ಚಯವಾಗಿಯೂ ನಾವು ನೀತಿವಂತರಿಗೆ ಈ ರೀತಿ ಪ್ರತಿಫಲವನ್ನು ನೀಡುತ್ತೇವೆ. info
التفاسير:

external-link copy
132 : 37

اِنَّهٗ مِنْ عِبَادِنَا الْمُؤْمِنِیْنَ ۟

ನಿಶ್ಚಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದವರಾಗಿದ್ದರು. info
التفاسير:

external-link copy
133 : 37

وَاِنَّ لُوْطًا لَّمِنَ الْمُرْسَلِیْنَ ۟ؕ

ನಿಶ್ಚಯವಾಗಿಯೂ ಲೂತ್ ಸಂದೇಶವಾಹಕರಲ್ಲಿ ಸೇರಿದವರಾಗಿದ್ದರು. info
التفاسير:

external-link copy
134 : 37

اِذْ نَجَّیْنٰهُ وَاَهْلَهٗۤ اَجْمَعِیْنَ ۟ۙ

ನಾವು ಅವರನ್ನು ಮತ್ತು ಅವರ ಕುಟುಂಬವನ್ನು ಸಂಪೂರ್ಣವಾಗಿ ರಕ್ಷಿಸಿದ ಸಂದರ್ಭ! info
التفاسير:

external-link copy
135 : 37

اِلَّا عَجُوْزًا فِی الْغٰبِرِیْنَ ۟

ಹಿಂದೆ ಉಳಿದವರಲ್ಲಿ ಸೇರಿದ ಒಬ್ಬ ವೃದ್ಧೆಯ ಹೊರತು. info
التفاسير:

external-link copy
136 : 37

ثُمَّ دَمَّرْنَا الْاٰخَرِیْنَ ۟

ನಂತರ ಇತರರನ್ನು ನಾವು ನಾಶ ಮಾಡಿದೆವು. info
التفاسير:

external-link copy
137 : 37

وَاِنَّكُمْ لَتَمُرُّوْنَ عَلَیْهِمْ مُّصْبِحِیْنَ ۟ۙ

ನೀವು ಬೆಳಗಾಗುವಾಗ ಅವರ ಊರುಗಳ ಬಳಿಯಿಂದ ಸಾಗುತ್ತೀರಿ. info
التفاسير:

external-link copy
138 : 37

وَبِالَّیْلِ ؕ— اَفَلَا تَعْقِلُوْنَ ۟۠

ರಾತ್ರಿ ಕೂಡ. ಆದರೂ ನೀವು ಆಲೋಚಿಸುವುದಿಲ್ಲವೇ? info
التفاسير:

external-link copy
139 : 37

وَاِنَّ یُوْنُسَ لَمِنَ الْمُرْسَلِیْنَ ۟ؕ

ನಿಶ್ಚಯವಾಗಿಯೂ ಯೂನುಸ್ ಸಂದೇಶವಾಹಕರಲ್ಲಿ ಸೇರಿದವರಾಗಿದ್ದರು. info
التفاسير:

external-link copy
140 : 37

اِذْ اَبَقَ اِلَی الْفُلْكِ الْمَشْحُوْنِ ۟ۙ

ಅವರು ತುಂಬಿ ತುಳುಕುವ ನಾವೆಯ ಬಳಿಗೆ ಪಲಾಯನ ಮಾಡಿದ ಸಂದರ್ಭ! info
التفاسير:

external-link copy
141 : 37

فَسَاهَمَ فَكَانَ مِنَ الْمُدْحَضِیْنَ ۟ۚ

ನಂತರ ಅಲ್ಲಿ ಚೀಟಿಯೆತ್ತಲಾದಾಗ ಅವರು ಪರಾಜಿತರಾದರು. info
التفاسير:

external-link copy
142 : 37

فَالْتَقَمَهُ الْحُوْتُ وَهُوَ مُلِیْمٌ ۟

ನಂತರ ಅವರು ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದಾಗ ಮೀನು ಅವರನ್ನು ನುಂಗಿತು. info
التفاسير:

external-link copy
143 : 37

فَلَوْلَاۤ اَنَّهٗ كَانَ مِنَ الْمُسَبِّحِیْنَ ۟ۙ

ಆದರೆ ಅವರು ಅಲ್ಲಾಹನ ಪರಿಶುದ್ಧಿಯನ್ನು ಕೊಂಡಾಡುವವರಲ್ಲಿ ಸೇರದಿರುತ್ತಿದ್ದರೆ info
التفاسير:

external-link copy
144 : 37

لَلَبِثَ فِیْ بَطْنِهٖۤ اِلٰی یَوْمِ یُبْعَثُوْنَ ۟ۚ

ಜನರಿಗೆ ಜೀವ ನೀಡಿ ಎಬ್ಬಿಸಲಾಗುವ ದಿನದವರೆಗೂ ಅವರು ಅದರ ಹೊಟ್ಟೆಯಲ್ಲೇ ಉಳಿಯುತ್ತಿದ್ದರು! info
التفاسير:

external-link copy
145 : 37

فَنَبَذْنٰهُ بِالْعَرَآءِ وَهُوَ سَقِیْمٌ ۟ۚ

ನಂತರ ನಾವು ಅವರನ್ನು ಬಯಲು ಪ್ರದೇಶಕ್ಕೆ ಎಸೆದೆವು. ಆಗ ಅವರು ಅಸ್ವಸ್ಥರಾಗಿದ್ದರು. info
التفاسير:

external-link copy
146 : 37

وَاَنْۢبَتْنَا عَلَیْهِ شَجَرَةً مِّنْ یَّقْطِیْنٍ ۟ۚ

ನಾವು ಅವರಿಗೆ (ನೆರಳು ನೀಡುವ) ಸೋರೆ ಬಳ್ಳಿಯ ಮರವನ್ನು ಬೆಳೆಸಿದೆವು. info
التفاسير:

external-link copy
147 : 37

وَاَرْسَلْنٰهُ اِلٰی مِائَةِ اَلْفٍ اَوْ یَزِیْدُوْنَ ۟ۚ

ನಾವು ಅವರನ್ನು ಒಂದು ಲಕ್ಷ ಅಥವಾ ಅದಕ್ಕಿಂತಲೂ ಹೆಚ್ಚಿನ ಜನರ ಬಳಿಗೆ ಕಳುಹಿಸಿದೆವು. info
التفاسير:

external-link copy
148 : 37

فَاٰمَنُوْا فَمَتَّعْنٰهُمْ اِلٰی حِیْنٍ ۟ؕ

ಅವರು (ಆ ಜನರು) ವಿಶ್ವಾಸವಿಟ್ಟರು. ಆದ್ದರಿಂದ ನಾವು ಅವರಿಗೆ ಒಂದು ಕಾಲದವರೆಗೆ ಸುಖ ಜೀವನವನ್ನು ಒದಗಿಸಿದೆವು. info
التفاسير:

external-link copy
149 : 37

فَاسْتَفْتِهِمْ اَلِرَبِّكَ الْبَنَاتُ وَلَهُمُ الْبَنُوْنَ ۟ۙ

(ಓ ಪ್ರವಾದಿಯವರೇ!) ಅವರೊಂದಿಗೆ ಕೇಳಿರಿ: “ನಿಮ್ಮ ಪರಿಪಾಲಕನಿಗೆ ಹೆಣ್ಣು ಮಕ್ಕಳು ಮತ್ತು ಅವರಿಗೆ ಗಂಡುಮಕ್ಕಳೇ? info
التفاسير:

external-link copy
150 : 37

اَمْ خَلَقْنَا الْمَلٰٓىِٕكَةَ اِنَاثًا وَّهُمْ شٰهِدُوْنَ ۟

ಅಥವಾ ನಾವು ದೇವದೂತರು‍ಗಳನ್ನು ಸ್ತ್ರೀಯರನ್ನಾಗಿ ಸೃಷ್ಟಿಸುವಾಗ ಅವರು ಅಲ್ಲಿ ಉಪಸ್ಥಿತರಿದ್ದರೇ?” info
التفاسير:

external-link copy
151 : 37

اَلَاۤ اِنَّهُمْ مِّنْ اِفْكِهِمْ لَیَقُوْلُوْنَ ۟ۙ

ತಿಳಿಯಿರಿ! ಅವರು ಕೇವಲ ಸುಳ್ಳನ್ನು ಕಲ್ಪಿಸಿ ಹೇಳುತ್ತಿದ್ದಾರೆ. info
التفاسير:

external-link copy
152 : 37

وَلَدَ اللّٰهُ ۙ— وَاِنَّهُمْ لَكٰذِبُوْنَ ۟

ಅಲ್ಲಾಹನಿಗೆ ಮಕ್ಕಳಿದ್ದಾರೆಂದು. ನಿಶ್ಚಯವಾಗಿಯೂ ಅವರು ಸುಳ್ಳು ಹೇಳುವವರಾಗಿದ್ದಾರೆ. info
التفاسير:

external-link copy
153 : 37

اَصْطَفَی الْبَنَاتِ عَلَی الْبَنِیْنَ ۟ؕ

ಅಲ್ಲಾಹು ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಿಗೆ ಪ್ರಾಶಸ್ತ್ಯ ನೀಡಿದನೇ? info
التفاسير: