ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
18 : 34

وَجَعَلْنَا بَیْنَهُمْ وَبَیْنَ الْقُرَی الَّتِیْ بٰرَكْنَا فِیْهَا قُرًی ظَاهِرَةً وَّقَدَّرْنَا فِیْهَا السَّیْرَ ؕ— سِیْرُوْا فِیْهَا لَیَالِیَ وَاَیَّامًا اٰمِنِیْنَ ۟

ನಾವು ಅವರ ಮತ್ತು ನಾವು ಸಮೃದ್ದಿ ನೀಡಿದ ಊರುಗಳ (ಪ್ಯಾಲಸ್ತೀನ್-ಸಿರಿಯಾ) ನಡುವೆ ಅನೇಕ ಊರುಗಳನ್ನು ಸ್ಥಾಪಿಸಿದೆವು.[1] ಅಲ್ಲಿ ನಾವು (ನಿಶ್ಚಿತ ಅಂತರದಲ್ಲಿ) ಕೆಲವು ತಂಗುದಾಣಗಳನ್ನು ನಿರ್ಣಯಿಸಿದೆವು. (ನಾವು ಹೇಳಿದೆವು): “ಹಗಲು-ರಾತ್ರಿ ಅವುಗಳ ಮೂಲಕ ನಿರ್ಭಯವಾಗಿ ಪ್ರಯಾಣ ಮಾಡಿರಿ.” info

[1] ಇದು ಸಿರಿಯಾ ಮತ್ತು ಯಮನ್‌ನ ನಡುವಿನಲ್ಲಿದ್ದ ಹೆದ್ದಾರಿಯ ಬಗ್ಗೆಯಾಗಿದೆ. ಈ ಹೆದ್ದಾರಿಯಲ್ಲಿ 4,700 ಊರುಗಳಿದ್ದವು ಎಂದು ಹೇಳಲಾಗುತ್ತದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಊರುಗಳಿದ್ದುದರಿಂದ ಈ ದಾರಿಯಲ್ಲಿ ಪ್ರಯಾಣ ಮಾಡುವವರಿಗೆ ಆಹಾರ-ಪಾನೀಯ ಮತ್ತು ವಸತಿಗಾಗಿ ಪರದಾಡಬೇಕಾಗಿ ಬರುತ್ತಿರಲಿಲ್ಲ. ಹಾಗೆಯೇ ಕಳ್ಳರು ದರೋಡೆಕೋರರ ಭಯವೂ ಇರಲಿಲ್ಲ.

التفاسير: