ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
40 : 34

وَیَوْمَ یَحْشُرُهُمْ جَمِیْعًا ثُمَّ یَقُوْلُ لِلْمَلٰٓىِٕكَةِ اَهٰۤؤُلَآءِ اِیَّاكُمْ كَانُوْا یَعْبُدُوْنَ ۟

ಅವನು ಅವರೆಲ್ಲರನ್ನೂ ಒಟ್ಟುಗೂಡಿಸುವ ದಿನ! ನಂತರ ಅವನು ದೇವದೂತರು‍ಗಳೊಡನೆ ಕೇಳುವನು: “ಇವರು ನಿಮ್ಮನ್ನು ಆರಾಧಿಸುತ್ತಿದ್ದರೇ?” info
التفاسير:

external-link copy
41 : 34

قَالُوْا سُبْحٰنَكَ اَنْتَ وَلِیُّنَا مِنْ دُوْنِهِمْ ۚ— بَلْ كَانُوْا یَعْبُدُوْنَ الْجِنَّ ۚ— اَكْثَرُهُمْ بِهِمْ مُّؤْمِنُوْنَ ۟

ಅವರು ಉತ್ತರಿಸುವರು: “ನೀನು ಪರಿಶುದ್ಧನು! ನಮ್ಮ ರಕ್ಷಕನು ನೀನೇ ಹೊರತು ಅವರಲ್ಲ. ವಾಸ್ತವವಾಗಿ, ಅವರು ಜಿನ್ನ್‌ಗಳನ್ನು ಆರಾಧಿಸುತ್ತಿದ್ದರು. ಅವರಲ್ಲಿ ಹೆಚ್ಚಿನವರು ಜಿನ್ನ್‌ಗಳಲ್ಲೇ ವಿಶ್ವಾಸವಿಟ್ಟಿದ್ದರು.” info
التفاسير:

external-link copy
42 : 34

فَالْیَوْمَ لَا یَمْلِكُ بَعْضُكُمْ لِبَعْضٍ نَّفْعًا وَّلَا ضَرًّا ؕ— وَنَقُوْلُ لِلَّذِیْنَ ظَلَمُوْا ذُوْقُوْا عَذَابَ النَّارِ الَّتِیْ كُنْتُمْ بِهَا تُكَذِّبُوْنَ ۟

ಇಂದು ನಿಮ್ಮಲ್ಲಿ ಪರಸ್ಪರ ಯಾರಿಗೂ ಸಹ ಯಾವುದೇ ಉಪಕಾರ ಅಥವಾ ತೊಂದರೆ ಮಾಡುವ ಶಕ್ತಿಯಿಲ್ಲ. ನಾವು ಅಕ್ರಮಿಗಳೊಡನೆ ಹೇಳುವೆವು: “ನೀವು ನಿಷೇಧಿಸುತ್ತಿದ್ದ ನರಕ ಶಿಕ್ಷೆಯ ರುಚಿಯನ್ನು ನೋಡಿರಿ.” info
التفاسير:

external-link copy
43 : 34

وَاِذَا تُتْلٰی عَلَیْهِمْ اٰیٰتُنَا بَیِّنٰتٍ قَالُوْا مَا هٰذَاۤ اِلَّا رَجُلٌ یُّرِیْدُ اَنْ یَّصُدَّكُمْ عَمَّا كَانَ یَعْبُدُ اٰبَآؤُكُمْ ۚ— وَقَالُوْا مَا هٰذَاۤ اِلَّاۤ اِفْكٌ مُّفْتَرًی ؕ— وَقَالَ الَّذِیْنَ كَفَرُوْا لِلْحَقِّ لَمَّا جَآءَهُمْ ۙ— اِنْ هٰذَاۤ اِلَّا سِحْرٌ مُّبِیْنٌ ۟

ಅವರಿಗೆ ನಮ್ಮ ಸ್ಪಷ್ಟ ವಚನಗಳನ್ನು ಓದಿಕೊಡಲಾದರೆ ಅವರು ಹೇಳುವರು: “ನಿಮ್ಮ ಪೂರ್ವಜರು ಏನು ಆರಾಧಿಸುತ್ತಿದ್ದರೋ ಅದರಿಂದ ನಿಮ್ಮನ್ನು ತಡೆಯುವುದೇ ಈತನ ಉದ್ದೇಶವಾಗಿದೆ.” ಅವರು ಹೇಳಿದರು: “ಇದು ಸ್ವಯಂ ರಚಿಸಲಾದ ಒಂದು ಕಟ್ಟುಕಥೆಯಾಗಿದೆ.” ಸತ್ಯನಿಷೇಧಿಗಳ ಬಳಿಗೆ ಸತ್ಯವು ಬಂದಾಗ ಅವರು ಅದರ ಬಗ್ಗೆ, “ಇದು ಸ್ಪಷ್ಟ ಮಾಟಗಾರಿಕೆಯಾಗಿದೆ” ಎಂದು ಹೇಳಿದರು. info
التفاسير:

external-link copy
44 : 34

وَمَاۤ اٰتَیْنٰهُمْ مِّنْ كُتُبٍ یَّدْرُسُوْنَهَا وَمَاۤ اَرْسَلْنَاۤ اِلَیْهِمْ قَبْلَكَ مِنْ نَّذِیْرٍ ۟ؕ

ಅವರು (ಮಕ್ಕಾ ನಿವಾಸಿಗಳು) ಓದಿ ತಿಳಿಯುವಂತಹ ಯಾವುದೇ ಗ್ರಂಥವನ್ನು ನಾವು ಅವರಿಗೆ ನೀಡಿಲ್ಲ. (ಪ್ರವಾದಿಯವರೇ) ನಿಮಗಿಂತ ಮೊದಲು ಅವರ ಬಳಿಗೆ ನಾವು ಯಾವುದೇ ಮುನ್ನೆಚ್ಚರಿಕೆಗಾರನನ್ನು ಕಳುಹಿಸಿಲ್ಲ. info
التفاسير:

external-link copy
45 : 34

وَكَذَّبَ الَّذِیْنَ مِنْ قَبْلِهِمْ ۙ— وَمَا بَلَغُوْا مِعْشَارَ مَاۤ اٰتَیْنٰهُمْ فَكَذَّبُوْا رُسُلِیْ ۫— فَكَیْفَ كَانَ نَكِیْرِ ۟۠

ಇವರಿಗಿಂತ ಮೊದಲಿನವರೂ ನಿಷೇಧಿಸಿದ್ದರು. ಅವರಿಗೆ ನಾವು ನೀಡಿದ ಹತ್ತರಲ್ಲಿ ಒಂದಂಶವನ್ನೂ ಇವರು (ಮಕ್ಕಾ ನಿವಾಸಿಗಳು) ತಲುಪಿಲ್ಲ. ಆದರೂ ಅವರು ನಮ್ಮ ಸಂದೇಶವಾಹಕರನ್ನು ನಿಷೇಧಿಸಿದರು. ಆಗ ನನ್ನ ಶಿಕ್ಷೆಯು ಹೇಗಿತ್ತು (ಎಂದು ನೋಡಿರಿ). info
التفاسير:

external-link copy
46 : 34

قُلْ اِنَّمَاۤ اَعِظُكُمْ بِوَاحِدَةٍ ۚ— اَنْ تَقُوْمُوْا لِلّٰهِ مَثْنٰی وَفُرَادٰی ثُمَّ تَتَفَكَّرُوْا ۫— مَا بِصَاحِبِكُمْ مِّنْ جِنَّةٍ ؕ— اِنْ هُوَ اِلَّا نَذِیْرٌ لَّكُمْ بَیْنَ یَدَیْ عَذَابٍ شَدِیْدٍ ۟

ಹೇಳಿರಿ: “ನಾನು ನಿಮಗೆ ಒಂದು ವಿಷಯವನ್ನು ಮಾತ್ರ ಉಪದೇಶ ಮಾಡುತ್ತೇನೆ. ನೀವು (ನಿಮ್ಮ ಹಟವನ್ನು ತೊರೆದು) ಅಲ್ಲಾಹನಿಗಾಗಿ ಇಬ್ಬಿಬ್ಬರು ಅಥವಾ ಒಬ್ಬೊಬ್ಬರು ನಿಲ್ಲಿರಿ. ನಂತರ ಚೆನ್ನಾಗಿ ಆಲೋಚಿಸಿರಿ. ನಿಮ್ಮ ಈ ಗೆಳೆಯನಿಗೆ (ಪ್ರವಾದಿಗೆ) ಯಾವುದೇ ಬುದ್ಧಿಭ್ರಮಣೆಯಿಲ್ಲ. ಅವರು ನಿಮಗೆ ಒಂದು ಭಯಾನಕ ಶಿಕ್ಷೆಯು ಆಗಮಿಸುವುದಕ್ಕೆ ಮೊದಲೇ ಅದರ ಬಗ್ಗೆ ಮುನ್ನೆಚ್ಚರಿಕೆ ನೀಡುವವರಾಗಿದ್ದಾರೆ.” info
التفاسير:

external-link copy
47 : 34

قُلْ مَا سَاَلْتُكُمْ مِّنْ اَجْرٍ فَهُوَ لَكُمْ ؕ— اِنْ اَجْرِیَ اِلَّا عَلَی اللّٰهِ ۚ— وَهُوَ عَلٰی كُلِّ شَیْءٍ شَهِیْدٌ ۟

ಹೇಳಿರಿ: “ನಾನು ನಿಮ್ಮೊಂದಿಗೆ ಏನಾದರೂ ಪ್ರತಿಫಲವನ್ನು ಬೇಡಿದ್ದರೆ ಅದು ನಿಮಗೋಸ್ಕರವೇ ಆಗಿದೆ. ನನಗೆ ಪ್ರತಿಫಲ ನೀಡಬೇಕಾದವನು ಅಲ್ಲಾಹು ಮಾತ್ರ. ಅವನು ಎಲ್ಲಾ ವಿಷಯಗಳಿಗೂ ಸಾಕ್ಷಿಯಾಗಿದ್ದಾನೆ.” info
التفاسير:

external-link copy
48 : 34

قُلْ اِنَّ رَبِّیْ یَقْذِفُ بِالْحَقِّ ۚ— عَلَّامُ الْغُیُوْبِ ۟

ಹೇಳಿರಿ: “ನಿಶ್ಚಯವಾಗಿಯೂ ನನ್ನ ಪರಿಪಾಲಕನು (ಅಲ್ಲಾಹು) ಸತ್ಯವನ್ನು ಅವತೀರ್ಣಗೊಳಿಸುತ್ತಾನೆ. ಅವನು ಅದೃಶ್ಯ ವಿಷಯಗಳನ್ನು ಸೂಕ್ಷ್ಮವಾಗಿ ತಿಳಿದವನಾಗಿದ್ದಾನೆ.” info
التفاسير: