ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
26 : 33

وَاَنْزَلَ الَّذِیْنَ ظَاهَرُوْهُمْ مِّنْ اَهْلِ الْكِتٰبِ مِنْ صَیَاصِیْهِمْ وَقَذَفَ فِیْ قُلُوْبِهِمُ الرُّعْبَ فَرِیْقًا تَقْتُلُوْنَ وَتَاْسِرُوْنَ فَرِیْقًا ۟ۚ

ಸತ್ಯನಿಷೇಧಿಗಳಿಗೆ ಸಹಾಯ ಮಾಡಿದ ಗ್ರಂಥದವರನ್ನು (ಯಹೂದಿಗಳನ್ನು) ಅಲ್ಲಾಹು ಅವರ ಕೋಟೆಗಳಿಂದ ಕೆಳಗಿಳಿಸಿದನು ಮತ್ತು ಅವರ ಹೃದಯಗಳಲ್ಲಿ ಭೀತಿಯನ್ನು ಬಿತ್ತಿದನು. ಅವರಲ್ಲಿ ಒಂದು ಗುಂಪನ್ನು ನೀವು ಕೊಂದಿದ್ದೀರಿ ಮತ್ತು ಇನ್ನೊಂದು ಗುಂಪನ್ನು ಸೆರೆಹಿಡಿದಿದ್ದೀರಿ.[1] info

[1] ಯಹೂದಿಗಳ ಒಂದು ಗೋತ್ರವಾದ ಬನೂ ಕುರೈಝದವರು ಮದೀನದ ಉತ್ತರ ಭಾಗದಲ್ಲಿ ವಾಸವಾಗಿದ್ದರು. ಇವರು ಮುಸ್ಲಿಮರೊಡನೆ ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದದ ಪ್ರಕಾರ ಇವರಲ್ಲಿ ಒಬ್ಬರು ದಾಳಿಗೊಳಗಾದರೆ ಇನ್ನೊಬ್ಬರು ಸಹಾಯ ಮಾಡಬೇಕು. ಆದರೆ ಮುಸ್ಲಿಮರ ಮೇಲೆ ಸತ್ಯನಿಷೇಧಿಗಳು ದಾಳಿ ಮಾಡಿದಾಗ ಈ ಯಹೂದಿಗಳು ಒಪ್ಪಂದವನ್ನು ಮುರಿದು ಮುಸ್ಲಿಮರಿಗೆ ವಿರುದ್ಧವಾಗಿ ಸತ್ಯನಿಷೇಧಿಗಳಿಗೆ ಸಹಾಯ ಮಾಡಿದರು. ಅವರು ಒಪ್ಪಂದವನ್ನು ಮುರಿದ ಕಾರಣ ಖಂದಕ್ ಯುದ್ಧದ ನಂತರ ಮುಸ್ಲಿಮರು ಅವರ ವಿರುದ್ಧ ದಂಡೆತ್ತಿ ಹೋದರು. ಅವರು ಕೋಟೆಯಲ್ಲಿ ಅವಿತುಕೊಂಡರು. ಸುಮಾರು 25 ದಿನಗಳ ನಂತರ ಅವರು ಶರಣಾಗಿ ತಮ್ಮ ವಿಷಯದಲ್ಲಿ ತೀರ್ಪು ನೀಡುವ ಹಕ್ಕನ್ನು ಸಅದ್ ಬಿನ್ ಮುಆದ್‌ಗೆ ನೀಡಿದರು. ಸಅದ್ ಬಿನ್ ಮುಆದ್ ನೀಡಿದ ತೀರ್ಪಿನಂತೆ ಅವರಲ್ಲಿನ ಗಂಡಸರನ್ನು ಹತ್ಯೆ ಮಾಡಿ ಮಹಿಳೆಯರನ್ನು ಮತ್ತು ಮಕ್ಕಳನ್ನು ಖೈದಿಗಳಾಗಿ ಮಾಡಿಕೊಳ್ಳಲಾಯಿತು.

التفاسير: