ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
195 : 3

فَاسْتَجَابَ لَهُمْ رَبُّهُمْ اَنِّیْ لَاۤ اُضِیْعُ عَمَلَ عَامِلٍ مِّنْكُمْ مِّنْ ذَكَرٍ اَوْ اُ ۚ— بَعْضُكُمْ مِّنْ بَعْضٍ ۚ— فَالَّذِیْنَ هَاجَرُوْا وَاُخْرِجُوْا مِنْ دِیَارِهِمْ وَاُوْذُوْا فِیْ سَبِیْلِیْ وَقٰتَلُوْا وَقُتِلُوْا لَاُكَفِّرَنَّ عَنْهُمْ سَیِّاٰتِهِمْ وَلَاُدْخِلَنَّهُمْ جَنّٰتٍ تَجْرِیْ مِنْ تَحْتِهَا الْاَنْهٰرُ ۚ— ثَوَابًا مِّنْ عِنْدِ اللّٰهِ ؕ— وَاللّٰهُ عِنْدَهٗ حُسْنُ الثَّوَابِ ۟

ಆಗ ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ಉತ್ತರಿಸಿದನು: “ಪುರುಷನಾಗಲಿ ಸ್ತ್ರೀಯಾಗಲಿ ನಿಮ್ಮಲ್ಲಿ ಕರ್ಮವೆಸಗಿದ ಯಾರ ಕರ್ಮವನ್ನೂ ನಾನು ನಿಷ್ಫಲಗೊಳಿಸುವುದಿಲ್ಲ. ನೀವು ಒಬ್ಬರು ಇನ್ನೊಬ್ಬರಿಂದ ಉಂಟಾದವರು. ಆದ್ದರಿಂದ ವಲಸೆ (ಹಿಜ್ರ) ಮಾಡಿದವರು, ತಮ್ಮ ಮನೆಗಳಿಂದ ಹೊರಹಾಕಲಾದವರು, ನನ್ನ ಮಾರ್ಗದಲ್ಲಿ ತೊಂದರೆಯನ್ನು ಅನುಭವಿಸಿದವರು, (ನನ್ನ ಮಾರ್ಗದಲ್ಲಿ) ಯುದ್ಧ ಮಾಡಿದವರು ಮತ್ತು ಕೊಲೆಯಾದವರು (ಹುತಾತ್ಮರು) ಯಾರೋ—ಅವರ ಪಾಪಗಳನ್ನು ನಾನು ಅಳಿಸುವೆನು ಮತ್ತು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಅವರನ್ನು ಪ್ರವೇಶ ಮಾಡಿಸುವೆನು. ಇದು ಅಲ್ಲಾಹನ ಕಡೆಯ ಪ್ರತಿಫಲವಾಗಿದೆ. ಅಲ್ಲಾಹನ ಬಳಿ ಅತ್ಯುತ್ತಮವಾದ ಪ್ರತಿಫಲವಿದೆ. info
التفاسير: