ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
154 : 3

ثُمَّ اَنْزَلَ عَلَیْكُمْ مِّنْ بَعْدِ الْغَمِّ اَمَنَةً نُّعَاسًا یَّغْشٰی طَآىِٕفَةً مِّنْكُمْ ۙ— وَطَآىِٕفَةٌ قَدْ اَهَمَّتْهُمْ اَنْفُسُهُمْ یَظُنُّوْنَ بِاللّٰهِ غَیْرَ الْحَقِّ ظَنَّ الْجَاهِلِیَّةِ ؕ— یَقُوْلُوْنَ هَلْ لَّنَا مِنَ الْاَمْرِ مِنْ شَیْءٍ ؕ— قُلْ اِنَّ الْاَمْرَ كُلَّهٗ لِلّٰهِ ؕ— یُخْفُوْنَ فِیْۤ اَنْفُسِهِمْ مَّا لَا یُبْدُوْنَ لَكَ ؕ— یَقُوْلُوْنَ لَوْ كَانَ لَنَا مِنَ الْاَمْرِ شَیْءٌ مَّا قُتِلْنَا هٰهُنَا ؕ— قُلْ لَّوْ كُنْتُمْ فِیْ بُیُوْتِكُمْ لَبَرَزَ الَّذِیْنَ كُتِبَ عَلَیْهِمُ الْقَتْلُ اِلٰی مَضَاجِعِهِمْ ۚ— وَلِیَبْتَلِیَ اللّٰهُ مَا فِیْ صُدُوْرِكُمْ وَلِیُمَحِّصَ مَا فِیْ قُلُوْبِكُمْ ؕ— وَاللّٰهُ عَلِیْمٌۢ بِذَاتِ الصُّدُوْرِ ۟

ಅನಂತರ, ಆ ಬಳಲಿಕೆಯ ನಂತರ ಅಲ್ಲಾಹು ನಿಮಗೆ ನಿರ್ಭಯತೆಯ ತೂಕಡಿಕೆಯನ್ನು ನೀಡಿದನು. ಅದು ನಿಮ್ಮಲ್ಲಿ ಒಂದು ಗುಂಪನ್ನು ಆವರಿಸುತ್ತಿತ್ತು. ಇನ್ನೊಂದು ಗುಂಪು ಸ್ವಯಂ ಅವರ ಬಗ್ಗೆಯೇ ಚಿಂತಿತರಾಗಿದ್ದರು. ಅವರು ಅಲ್ಲಾಹನ ಬಗ್ಗೆ ಸತ್ಯಕ್ಕೆ ದೂರವಾದ ಅಜ್ಞಾನಕಾಲದ ಭಾವನೆಗಳನ್ನು ಇಟ್ಟುಕೊಂಡಿದ್ದರು.[1] ಅವರು ಕೇಳುತ್ತಿದ್ದರು: “ಆಜ್ಞೆಯಲ್ಲಿ ನಮಗೆ ಯಾವುದೇ ಪಾಲಿಲ್ಲವೇ?” ಹೇಳಿರಿ: “ನಿಶ್ಚಯವಾಗಿಯೂ ಆಜ್ಞೆಯು ಸಂಪೂರ್ಣವಾಗಿ ಅಲ್ಲಾಹನಿಗೆ ಸೇರಿದೆ.” ನಿಮ್ಮ ಮುಂದೆ ಬಹಿರಂಗಪಡಿಸದ ಬೇರೇನೋ ವಿಚಾರಗಳನ್ನು ಅವರು ತಮ್ಮ ಮನದಲ್ಲಿ ಬಚ್ಚಿಡುತ್ತಿದ್ದರು. ಅವರು ಹೇಳುತ್ತಿದ್ದರು: “ಆಜ್ಞೆಯಲ್ಲಿ ನಮಗೇನಾದರೂ ಪಾಲಿರುತ್ತಿದ್ದರೆ ನಾವಿಲ್ಲಿ ಹತ್ಯೆಯಾಗಿ ಬೀಳುತ್ತಿರಲಿಲ್ಲ.” ಹೇಳಿರಿ: “ನೀವು ನಿಮ್ಮ ಮನೆಗಳಲ್ಲಿದ್ದರೂ ಸಹ ಕೊಲೆಯಾಗಬೇಕೆಂಬ ವಿಧಿಯಿರುವವರು ಅವರು ಕೊಲೆಯಾಗಿ ಬೀಳುವ ಸ್ಥಳಗಳಿಗೆ ಸ್ವಯಂ ಹೊರಟು ಬರುತ್ತಿದ್ದರು.” ಇದು ನಿಮ್ಮ ಎದೆಗಳಲ್ಲಿರುವುದನ್ನು ಅಲ್ಲಾಹು ಪರೀಕ್ಷಿಸುವುದಕ್ಕಾಗಿದೆ ಮತ್ತು ನಿಮ್ಮ ಹೃದಯಗಳಲ್ಲಿರುವುದನ್ನು ಶುದ್ಧೀಕರಿಸುವುದಕ್ಕಾಗಿದೆ. ಅಲ್ಲಾಹು ಎದೆಗಳೊಳಗಿರುವುದನ್ನು ತಿಳಿಯುತ್ತಾನೆ. info

[1] ಉಹುದ್ ಯುದ್ಧದ ನಂತರ ಅಲ್ಲಾಹು ಮುಸಲ್ಮಾನರ ಮೇಲೆ ದಯೆ ತೋರಿ ಅವರಿಗೆ ಸುಖವಾದ ನಿದ್ದೆಯನ್ನು ಕರುಣಿಸಿದನು. ಇನ್ನೊಂದು ಕಡೆ ಕಪಟವಿಶ್ವಾಸಿಗಳು ಅವರ ಬಗ್ಗೆಯೇ ಚಿಂತಿತರಾಗಿದ್ದರು. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ನಿರ್ಣಯಗಳು ಸರಿಯಿಲ್ಲ; ಅವರು ಯಾವ ಧರ್ಮದ ಕಡೆಗೆ ಜನರನ್ನು ಕರೆಯುತ್ತಿದ್ದಾರೋ ಆ ಧರ್ಮಕ್ಕೆ ಭವಿಷ್ಯವಿಲ್ಲ. ಅವರಿಗೆ ಅಲ್ಲಾಹನ ಕಡೆಯ ಸಹಾಯವಿಲ್ಲ ಎಂದು ಅವರು ಹೇಳುತ್ತಿದ್ದರು.

التفاسير: