ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
166 : 3

وَمَاۤ اَصَابَكُمْ یَوْمَ الْتَقَی الْجَمْعٰنِ فَبِاِذْنِ اللّٰهِ وَلِیَعْلَمَ الْمُؤْمِنِیْنَ ۟ۙ

(ಉಹುದ್ ಯುದ್ಧದಲ್ಲಿ) ಎರಡು ಬಣಗಳು ಮುಖಾಮುಖಿಯಾದ ದಿನದಂದು ನಿಮಗೆ ಸಂಭವಿಸಿದ ಅನಾಹುತವು ಅಲ್ಲಾಹನ ಅಪ್ಪಣೆಯಿಂದಲೇ ಆಗಿದೆ. ಅದು ಸತ್ಯವಿಶ್ವಾಸಿಗಳು ಯಾರೆಂದು ತಿಳಿಯುವುದಕ್ಕಾಗಿದೆ. info
التفاسير:

external-link copy
167 : 3

وَلِیَعْلَمَ الَّذِیْنَ نَافَقُوْا ۖۚ— وَقِیْلَ لَهُمْ تَعَالَوْا قَاتِلُوْا فِیْ سَبِیْلِ اللّٰهِ اَوِ ادْفَعُوْا ؕ— قَالُوْا لَوْ نَعْلَمُ قِتَالًا لَّاتَّبَعْنٰكُمْ ؕ— هُمْ لِلْكُفْرِ یَوْمَىِٕذٍ اَقْرَبُ مِنْهُمْ لِلْاِیْمَانِ ۚ— یَقُوْلُوْنَ بِاَفْوَاهِهِمْ مَّا لَیْسَ فِیْ قُلُوْبِهِمْ ؕ— وَاللّٰهُ اَعْلَمُ بِمَا یَكْتُمُوْنَ ۟ۚ

ಮತ್ತು ಕಪಟವಿಶ್ವಾಸಿಗಳು ಯಾರೆಂದು ತಿಳಿಯುವುದಕ್ಕಾಗಿ. ಆ ಕಪಟವಿಶ್ವಾಸಿಗಳೊಡನೆ “ಬನ್ನಿ! ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿ ಅಥವಾ (ಕನಿಷ್ಠ) ರಕ್ಷಣೆಯನ್ನಾದರೂ ಮಾಡಿ” ಎಂದು ಹೇಳಲಾದಾಗ, ಅವರು ಹೇಳಿದರು: “ಯುದ್ಧ ಸಂಭವಿಸುತ್ತದೆಯೆಂದು ತಿಳಿದಿದ್ದರೆ ನಾವು ನಿಮ್ಮ ಹಿಂದೆ ಬರುತ್ತಿದ್ದೆವು.” ಅಂದು ಅವರು ಸತ್ಯವಿಶ್ವಾಸಕ್ಕಿಂತಲೂ ಸತ್ಯನಿಷೇಧಕ್ಕೆ ಹೆಚ್ಚು ಹತ್ತಿರವಾಗಿದ್ದರು. ಅವರ ಹೃದಯಗಳಲ್ಲಿಲ್ಲದ ವಿಷಯವನ್ನು ಅವರು ಬಾಯಿ ಮೂಲಕ ಹೇಳುತ್ತಾರೆ. ಅವರು ಮುಚ್ಚಿಡುವ ಸಂಗತಿಗಳು ಏನೆಂದು ಅಲ್ಲಾಹನಿಗೆ ಬಹಳ ಚೆನ್ನಾಗಿ ತಿಳಿದಿದೆ. info
التفاسير:

external-link copy
168 : 3

اَلَّذِیْنَ قَالُوْا لِاِخْوَانِهِمْ وَقَعَدُوْا لَوْ اَطَاعُوْنَا مَا قُتِلُوْا ؕ— قُلْ فَادْرَءُوْا عَنْ اَنْفُسِكُمُ الْمَوْتَ اِنْ كُنْتُمْ صٰدِقِیْنَ ۟

ಅವರು ಯಾರೆಂದರೆ, (ಯುದ್ಧಕ್ಕೆ ತೆರಳದೆ) ಮನೆಯಲ್ಲೇ ಕುಳಿತು (ಯುದ್ಧಕ್ಕೆ ಹೊರಟ) ತಮ್ಮ ಸಹೋದರರ ಬಗ್ಗೆ, “ಅವರು ನಮ್ಮ ಮಾತನ್ನು ಕೇಳುತ್ತಿದ್ದರೆ ಖಂಡಿತ ಕೊಲೆಯಾಗುತ್ತಿರಲಿಲ್ಲ” ಎಂದು ಹೇಳಿದವರಾಗಿದ್ದಾರೆ. ಹೇಳಿರಿ: “ನೀವು ಸತ್ಯವನ್ನೇ ಹೇಳುತ್ತಿದ್ದರೆ ನಿಮಗೆ ಸಾವು ಬರುವುದನ್ನು ತಡೆಗಟ್ಟಿರಿ.” info
التفاسير:

external-link copy
169 : 3

وَلَا تَحْسَبَنَّ الَّذِیْنَ قُتِلُوْا فِیْ سَبِیْلِ اللّٰهِ اَمْوَاتًا ؕ— بَلْ اَحْیَآءٌ عِنْدَ رَبِّهِمْ یُرْزَقُوْنَ ۟ۙ

ಅಲ್ಲಾಹನ ಮಾರ್ಗದಲ್ಲಿ ಹುತಾತ್ಮರಾದವರನ್ನು 'ಸತ್ತವರು' ಎಂದು ಭಾವಿಸಬೇಡಿ. ಅವರು ಜೀವಂತವಾಗಿದ್ದಾರೆ. ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಆಹಾರವನ್ನು ನೀಡಲಾಗುತ್ತಿದೆ. info
التفاسير:

external-link copy
170 : 3

فَرِحِیْنَ بِمَاۤ اٰتٰىهُمُ اللّٰهُ مِنْ فَضْلِهٖ ۙ— وَیَسْتَبْشِرُوْنَ بِالَّذِیْنَ لَمْ یَلْحَقُوْا بِهِمْ مِّنْ خَلْفِهِمْ ۙ— اَلَّا خَوْفٌ عَلَیْهِمْ وَلَا هُمْ یَحْزَنُوْنَ ۟ۘ

ಅಲ್ಲಾಹು ಅವನ ಔದಾರ್ಯದಿಂದ ಅವರಿಗೆ ದಯಪಾಲಿಸಿರುವುದರಲ್ಲಿ ಅವರು ಸಂತೋಷವಾಗಿದ್ದಾರೆ. ತಮ್ಮೊಂದಿಗೆ ಇನ್ನೂ ಸೇರದ, ತಮ್ಮ ಹಿಂದೆ (ಇಹಲೋಕದಲ್ಲಿ) ಜೀವಿಸುತ್ತಿರುವ ಸತ್ಯವಿಶ್ವಾಸಿಗಳ ಬಗ್ಗೆ, ಅವರಿಗೆ ಯಾವುದೇ ಭಯವಿಲ್ಲ ಮತ್ತು ಅವರು ದುಃಖಿಸುವುದೂ ಇಲ್ಲವೆಂದು ತಿಳಿದು ಅವರು ಸಂತೋಷಪಡುತ್ತಿದ್ದಾರೆ. info
التفاسير:

external-link copy
171 : 3

یَسْتَبْشِرُوْنَ بِنِعْمَةٍ مِّنَ اللّٰهِ وَفَضْلٍ ۙ— وَّاَنَّ اللّٰهَ لَا یُضِیْعُ اَجْرَ الْمُؤْمِنِیْنَ ۟

ಅಲ್ಲಾಹನ ಅನುಗ್ರಹ ಮತ್ತು ಔದಾರ್ಯದಿಂದ; ಮತ್ತು ಅಲ್ಲಾಹು ಸತ್ಯವಿಶ್ವಾಸಿಗಳ ಪ್ರತಿಫಲವನ್ನು ವ್ಯರ್ಥಗೊಳಿಸುವುದಿಲ್ಲ ಎಂಬುದರಿಂದ ಅವರು ಸಂತೋಷಪಡುತ್ತಿದ್ದಾರೆ. info
التفاسير:

external-link copy
172 : 3

اَلَّذِیْنَ اسْتَجَابُوْا لِلّٰهِ وَالرَّسُوْلِ مِنْ بَعْدِ مَاۤ اَصَابَهُمُ الْقَرْحُ ۛؕ— لِلَّذِیْنَ اَحْسَنُوْا مِنْهُمْ وَاتَّقَوْا اَجْرٌ عَظِیْمٌ ۟ۚ

ಅವರು ಯಾರೆಂದರೆ ಗಾಯಾಳುಗಳಾದ ಬಳಿಕವೂ ಅಲ್ಲಾಹು ಮತ್ತು ಸಂದೇಶವಾಹಕರ ಕರೆಗೆ ಉತ್ತರಿಸಿದವರು. ಅವರಲ್ಲಿ ಒಳಿತು ಮಾಡಿದವರಿಗೆ ಮತ್ತು ದೇವಭಯವುಳ್ಳವರಿಗೆ ಮಹಾ ಪ್ರತಿಫಲವಿದೆ. info
التفاسير:

external-link copy
173 : 3

اَلَّذِیْنَ قَالَ لَهُمُ النَّاسُ اِنَّ النَّاسَ قَدْ جَمَعُوْا لَكُمْ فَاخْشَوْهُمْ فَزَادَهُمْ اِیْمَانًا ۖۗ— وَّقَالُوْا حَسْبُنَا اللّٰهُ وَنِعْمَ الْوَكِیْلُ ۟

“ನಿಶ್ಚಯವಾಗಿಯೂ ಆ ಜನರು (ಶತ್ರುಗಳು) ನಿಮ್ಮ ವಿರುದ್ಧ ಸೈನ್ಯವನ್ನು ಜಮಾವಣೆಗೊಳಿಸಿದ್ದಾರೆ; ಆದ್ದರಿಂದ ಅವರನ್ನು ಭಯಪಡಿರಿ” ಎಂದು ಜನರು ಅವರೊಡನೆ ಹೇಳಿದಾಗ ಅದು ಅವರ ವಿಶ್ವಾಸವನ್ನು ಹೆಚ್ಚಿಸಿತು. ಅವರು ಹೇಳಿದರು: “ನಮಗೆ ಅಲ್ಲಾಹು ಸಾಕು. ಭರವಸೆಯಿಡಲು ಅವನು ಅತ್ಯುತ್ತಮನಾಗಿದ್ದಾನೆ.”[1] info

[1] ಉಹುದ್ ಯುದ್ಧದಿಂದ ಮರಳಿದ ಸತ್ಯನಿಷೇಧಿಗಳ ಮುಖಂಡ ಅಬೂಸುಫ್ಯಾನ್ ಕೆಲವು ಗೋತ್ರದವರಿಗೆ ಆಮಿಷ ನೀಡಿ ಕುರೈಷರು ದೊಡ್ಡ ಸೇನೆಯನ್ನು ಜಮಾವಣೆಗೊಳಿಸಿ ಮದೀನದ ಮೇಲೆ ದಂಡೆತ್ತಿ ಬರಲು ತಯಾರಿ ನಡೆಸುತ್ತಿದ್ದಾರೆ ಎಂಬ ವದಂತಿಯನ್ನು ಹಬ್ಬಿಸಿದರು. ಉಹುದ್ ಯುದ್ಧದ ಆಘಾತದಿಂದ ಹೊರಬರದ ಮುಸಲ್ಮಾನರು ಈ ಸುದ್ದಿಯನ್ನು ಕೇಳಿ ಎದೆಗುಂದುತ್ತಾರೆಂದು ಅವರು ಭಾವಿಸಿದ್ದರು. ಹಮ್ರಾವುಲ್ ಅಸದ್ ಎಂಬ ಸ್ಥಳದಲ್ಲಿದ್ದ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಮುಸಲ್ಮಾನರು ಈ ಸುದ್ದಿಯನ್ನು ಕೇಳಿದಾಗ ಅವರ ವಿಶ್ವಾಸವು ಇಮ್ಮಡಿಯಾಯಿತೇ ವಿನಾ ಅವರು ಎದೆಗುಂದಲಿಲ್ಲ.

التفاسير: