ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
45 : 27

وَلَقَدْ اَرْسَلْنَاۤ اِلٰی ثَمُوْدَ اَخَاهُمْ صٰلِحًا اَنِ اعْبُدُوا اللّٰهَ فَاِذَا هُمْ فَرِیْقٰنِ یَخْتَصِمُوْنَ ۟

ನಾವು ಸಮೂದ್ ಗೋತ್ರಕ್ಕೆ ಅವರ ಸಹೋದರ ಸ್ವಾಲಿಹರನ್ನು ಕಳುಹಿಸಿದೆವು. ಅವರು ಜನರೊಡನೆ “ಅಲ್ಲಾಹನನ್ನು ಮಾತ್ರ ಆರಾಧಿಸಿರಿ” ಎಂದು ಹೇಳಿದರು. ಆಗ ಅವರು ಪರಸ್ಪರ ತರ್ಕಿಸುವ ಎರಡು ಗುಂಪುಗಳಾಗಿ ಮಾರ್ಪಟ್ಟರು. info
التفاسير:

external-link copy
46 : 27

قَالَ یٰقَوْمِ لِمَ تَسْتَعْجِلُوْنَ بِالسَّیِّئَةِ قَبْلَ الْحَسَنَةِ ۚ— لَوْلَا تَسْتَغْفِرُوْنَ اللّٰهَ لَعَلَّكُمْ تُرْحَمُوْنَ ۟

ಸ್ವಾಲಿಹ್ ಹೇಳಿದರು: “ನನ್ನ ಜನರೇ! ನೀವು ಒಳಿತು ಮಾಡುವುದಕ್ಕೆ ಮೊದಲು ಕೆಡುಕು ಮಾಡಲು ಏಕೆ ತ್ವರೆ ಮಾಡುತ್ತೀರಿ? ನೀವೇಕೆ ಅಲ್ಲಾಹನಲ್ಲಿ ಕ್ಷಮೆಯಾಚಿಸುವುದಿಲ್ಲ? ಅವನು ನಿಮಗೆ ದಯೆ ತೋರಬಹುದಲ್ಲವೇ.” info
التفاسير:

external-link copy
47 : 27

قَالُوا اطَّیَّرْنَا بِكَ وَبِمَنْ مَّعَكَ ؕ— قَالَ طٰٓىِٕرُكُمْ عِنْدَ اللّٰهِ بَلْ اَنْتُمْ قَوْمٌ تُفْتَنُوْنَ ۟

ಅವರು ಹೇಳಿದರು: “ನೀನು ಮತ್ತು ನಿನ್ನ ಅನುಯಾಯಿಗಳು ನಮಗೆ ಅಪಶಕುನವಾಗಿದ್ದಾರೆ.” ಸ್ವಾಲಿಹ್ ಹೇಳಿದರು: “ನಿಮ್ಮ ಅಪಶಕುನವು ಅಲ್ಲಾಹನ ಬಳಿಯಿದೆ. ಅಲ್ಲ, ವಾಸ್ತವವಾಗಿ ನೀವು ಪರೀಕ್ಷೆಗೆ ತುತ್ತಾದ ಜನರಾಗಿದ್ದೀರಿ.” info
التفاسير:

external-link copy
48 : 27

وَكَانَ فِی الْمَدِیْنَةِ تِسْعَةُ رَهْطٍ یُّفْسِدُوْنَ فِی الْاَرْضِ وَلَا یُصْلِحُوْنَ ۟

ಆ ಊರಿನಲ್ಲಿ ಒಂಬತ್ತು ಮುಖಂಡರಿದ್ದರು. ಅವರು ಊರಿನಲ್ಲಿ ಕಿಡಿಗೇಡಿತನ ಮಾಡುತ್ತಿದ್ದರೇ ವಿನಾ ಒಳಿತು ಮಾಡುತ್ತಿರಲಿಲ್ಲ. info
التفاسير:

external-link copy
49 : 27

قَالُوْا تَقَاسَمُوْا بِاللّٰهِ لَنُبَیِّتَنَّهٗ وَاَهْلَهٗ ثُمَّ لَنَقُوْلَنَّ لِوَلِیِّهٖ مَا شَهِدْنَا مَهْلِكَ اَهْلِهٖ وَاِنَّا لَصٰدِقُوْنَ ۟

ಆ ಮುಖಂಡರು ಪರಸ್ಪರ ಆಣೆ ಮಾಡುತ್ತಾ ಒಂದು ನಿರ್ಧಾರ ತೆಗೆದು ಹೇಳಿದರು: “ನಾವು ರಾತ್ರಿ ಸ್ವಾಲಿಹ್ ಮತ್ತು ಅವರ ಕುಟುಂಬದವರನ್ನು ಕೊಂದು ಬಿಡೋಣ. ನಂತರ ಅವರ ವಾರಸುದಾರರೊಡನೆ, ಇವನ ಕುಟುಂಬವ ಹತ್ಯೆಯಾಗುವಾಗ ನಾವು ಅಲ್ಲಿರಲಿಲ್ಲ. ನಾವು ಖಂಡಿತವಾಗಿಯೂ ಸತ್ಯವನ್ನೇ ಹೇಳುತ್ತಿದ್ದೇವೆ ಎಂದು ಹೇಳಿ ಬಿಡೋಣ.” info
التفاسير:

external-link copy
50 : 27

وَمَكَرُوْا مَكْرًا وَّمَكَرْنَا مَكْرًا وَّهُمْ لَا یَشْعُرُوْنَ ۟

ಅವರು ತಂತ್ರಗಾರಿಕೆ ಮಾಡಿದರು. ನಾವು ಕೂಡ ತಂತ್ರಗಾರಿಕೆ ಮಾಡಿದೆವು. ಅವರು ಅದನ್ನು ತಿಳಿಯಲೇ ಇಲ್ಲ. info
التفاسير:

external-link copy
51 : 27

فَانْظُرْ كَیْفَ كَانَ عَاقِبَةُ مَكْرِهِمْ ۙ— اَنَّا دَمَّرْنٰهُمْ وَقَوْمَهُمْ اَجْمَعِیْنَ ۟

ನಂತರ ಅವರ ತಂತ್ರಗಾರಿಕೆಯ ಫಲಿತಾಂಶವು ಹೇಗಿತ್ತೆಂದು ನೋಡಿರಿ. ಅದೇನೆಂದರೆ, ನಾವು ಅವರನ್ನು ಮತ್ತು ಅವರ ಜನರನ್ನು ಸಂಪೂರ್ಣವಾಗಿ ನಾಶ ಮಾಡಿದೆವು. info
التفاسير:

external-link copy
52 : 27

فَتِلْكَ بُیُوْتُهُمْ خَاوِیَةً بِمَا ظَلَمُوْا ؕ— اِنَّ فِیْ ذٰلِكَ لَاٰیَةً لِّقَوْمٍ یَّعْلَمُوْنَ ۟

ಅವರು ಅಕ್ರಮವೆಸಗಿದ ಕಾರಣ ಅವರ ಮನೆಗಳು ಜನವಾಸವಿಲ್ಲದೆ ಕುಸಿದು ಬಿದ್ದಿವೆ. ನಿಶ್ಚಯವಾಗಿಯೂ ತಿಳುವಳಿಕೆಯಿರುವ ಜನರಿಗೆ ಅದರಲ್ಲಿ ದೃಷ್ಟಾಂತವಿದೆ. info
التفاسير:

external-link copy
53 : 27

وَاَنْجَیْنَا الَّذِیْنَ اٰمَنُوْا وَكَانُوْا یَتَّقُوْنَ ۟

ನಾವು ಸತ್ಯವಿಶ್ವಾಸಿಗಳನ್ನು ಮತ್ತು ದೇವಭಯವುಳ್ಳವರನ್ನು ರಕ್ಷಿಸಿದೆವು. info
التفاسير:

external-link copy
54 : 27

وَلُوْطًا اِذْ قَالَ لِقَوْمِهٖۤ اَتَاْتُوْنَ الْفَاحِشَةَ وَاَنْتُمْ تُبْصِرُوْنَ ۟

ಲೂತರನ್ನು ನೆನಪಿಸಿಕೊಳ್ಳಿರಿ. ಅವರು ತಮ್ಮ ಜನರೊಡನೆ ಕೇಳಿದ ಸಂದರ್ಭ: “ಅತ್ಯಂತ ನಿಕೃಷ್ಟ ಕೆಲಸವೆಂದು ತಿಳಿದೂ ಸಹ ನೀವು ಈ ಅಶ್ಲೀಲಕ್ಕೆ ಮುಂದಾಗುತ್ತೀರಾ? info
التفاسير:

external-link copy
55 : 27

اَىِٕنَّكُمْ لَتَاْتُوْنَ الرِّجَالَ شَهْوَةً مِّنْ دُوْنِ النِّسَآءِ ؕ— بَلْ اَنْتُمْ قَوْمٌ تَجْهَلُوْنَ ۟

ನೀವು ಲೈಂಗಿಕ ತೃಷೆಯನ್ನು ತೀರಿಸಲು ಮಹಿಳೆಯರ ಬದಲು ಪುರುಷರ ಬಳಿಗೆ ಹೋಗುತ್ತೀರಾ? ಅಲ್ಲ, ವಾಸ್ತವವಾಗಿ ನೀವು ವಿವೇಕವಿಲ್ಲದ ಜನರಾಗಿದ್ದೀರಿ. info
التفاسير: