ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
21 : 25

وَقَالَ الَّذِیْنَ لَا یَرْجُوْنَ لِقَآءَنَا لَوْلَاۤ اُنْزِلَ عَلَیْنَا الْمَلٰٓىِٕكَةُ اَوْ نَرٰی رَبَّنَا ؕ— لَقَدِ اسْتَكْبَرُوْا فِیْۤ اَنْفُسِهِمْ وَعَتَوْ عُتُوًّا كَبِیْرًا ۟

ನಮ್ಮನ್ನು ಭೇಟಿಯಾಗುವ ನಿರೀಕ್ಷೆಯಿಲ್ಲದವರು ಹೇಳಿದರು: “ನಮ್ಮ ಮೇಲೆ ದೇವದೂತರುಗಳನ್ನು ಏಕೆ ಇಳಿಸಲಾಗುವುದಿಲ್ಲ? ಅಥವಾ ನಮಗೇಕೆ ನಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ನೇರವಾಗಿ ನೋಡಲಾಗುವುದಿಲ್ಲ?” ಅವರು ಸ್ವಯಂ ಅವರ ಬಗ್ಗೆಯೇ ಅಹಂಕಾರಪಡುತ್ತಿದ್ದಾರೆ ಮತ್ತು ಕಡು ಧಿಕ್ಕಾರದಿಂದ ವರ್ತಿಸುತ್ತಿದ್ದಾರೆ. info
التفاسير:

external-link copy
22 : 25

یَوْمَ یَرَوْنَ الْمَلٰٓىِٕكَةَ لَا بُشْرٰی یَوْمَىِٕذٍ لِّلْمُجْرِمِیْنَ وَیَقُوْلُوْنَ حِجْرًا مَّحْجُوْرًا ۟

ಅವರು ದೇವದೂತರುಗಳನ್ನು ನೋಡುವ ದಿನ![1] ಅಂದು ಅಪರಾಧಿಗಳಿಗೆ ಯಾವುದೇ ಸಿಹಿ ಸುದ್ದಿಯಿರುವುದಿಲ್ಲ. ಅವರು (ದೇವದೂತರುಗಳು) ಹೇಳುವರು: “ನಿಷಿದ್ಧವಾಗಿದೆ! ನಿಮಗೆ ಎಲ್ಲವನ್ನೂ ನಿಷೇಧಿಸಲಾಗಿದೆ!”[2] info

[1] ಅಂದರೆ ಅವರು ಸಾವನ್ನಪ್ಪುವ ದಿನ. ಆಗ ಅವರು ದೇವದೂತರುಗಳನ್ನು ಕಣ್ಣಾರೆ ನೋಡುತ್ತಾರೆ. ಅದು ಅವರಿಗೆ ಖುಷಿ ಅಥವಾ ಸಂತೋಷದ ದಿನವಾಗಿರುವುದಿಲ್ಲ. [2] ಅಂದರೆ ನಿಮಗೆ ಸ್ವರ್ಗವು ನಿಷಿದ್ಧವಾಗಿದೆ ಮತ್ತು ಸತ್ಯವಿಶ್ವಾಸಿಗಳಿಗೆ ಸಿಗುವ ಸುಖ-ಸಂತೋಷಗಳೆಲ್ಲವೂ ನಿಮಗೆ ನಿಷೇಧಿಸಲಾಗಿದೆ.

التفاسير:

external-link copy
23 : 25

وَقَدِمْنَاۤ اِلٰی مَا عَمِلُوْا مِنْ عَمَلٍ فَجَعَلْنٰهُ هَبَآءً مَّنْثُوْرًا ۟

ಅವರು ಮಾಡಿದ ಕರ್ಮಗಳ ಬಳಿಗೆ ತೆರಳಿ ನಾವು ಅವುಗಳನ್ನು ಚದುರಿದ ಧೂಳಿಯಂತೆ ಮಾಡುವೆವು. info
التفاسير:

external-link copy
24 : 25

اَصْحٰبُ الْجَنَّةِ یَوْمَىِٕذٍ خَیْرٌ مُّسْتَقَرًّا وَّاَحْسَنُ مَقِیْلًا ۟

ಅಂದು ಸ್ವರ್ಗವಾಸಿಗಳು ಅತ್ಯುತ್ತಮ ವಾಸಸ್ಥಳಗಳನ್ನು ಮತ್ತು ಅತ್ಯುತ್ತಮ ವಿಶ್ರಾಂತಿಧಾಮಗಳನ್ನು ಹೊಂದಿರುವರು. info
التفاسير:

external-link copy
25 : 25

وَیَوْمَ تَشَقَّقُ السَّمَآءُ بِالْغَمَامِ وَنُزِّلَ الْمَلٰٓىِٕكَةُ تَنْزِیْلًا ۟

ಆಕಾಶವು ಮೋಡಗಳ ಸಹಿತ ಒಡೆದು ಛಿದ್ರವಾಗುವ ಮತ್ತು ದೇವದೂತರುಗಳನ್ನು ನಿರಂತರವಾಗಿ ಇಳಿಸಲಾಗುವ ದಿನ! info
التفاسير:

external-link copy
26 : 25

اَلْمُلْكُ یَوْمَىِٕذِ ١لْحَقُّ لِلرَّحْمٰنِ ؕ— وَكَانَ یَوْمًا عَلَی الْكٰفِرِیْنَ عَسِیْرًا ۟

ಅಂದು ನಿಜವಾದ ಸಾರ್ವಭೌಮತ್ವವು ಪರಮ ದಯಾಳುವಾದ ಅಲ್ಲಾಹನಿಗೆ ಮಾತ್ರ. ಅದು ಸತ್ಯನಿಷೇಧಿಗಳಿಗೆ ಸಂಬಂಧಿಸಿದಂತೆ ಅತ್ಯಂತ ದುಷ್ಕರ ದಿನವಾಗಿದೆ. info
التفاسير:

external-link copy
27 : 25

وَیَوْمَ یَعَضُّ الظَّالِمُ عَلٰی یَدَیْهِ یَقُوْلُ یٰلَیْتَنِی اتَّخَذْتُ مَعَ الرَّسُوْلِ سَبِیْلًا ۟

ಅಂದು ಅಕ್ರಮವೆಸಗಿದವನು ತನ್ನ ಕೈಗಳನ್ನು ಕಚ್ಚುತ್ತಾ ಹೇಳುವನು: “ನಾನು ಸಂದೇಶವಾಹಕರ ಮಾರ್ಗವನ್ನು ಆರಿಸುತ್ತಿದ್ದರೆ ಎಷ್ಟು ಚೆನ್ನಾಗಿತ್ತು! info
التفاسير:

external-link copy
28 : 25

یٰوَیْلَتٰی لَیْتَنِیْ لَمْ اَتَّخِذْ فُلَانًا خَلِیْلًا ۟

ಅಯ್ಯೋ ನನ್ನ ದುರ್ಗತಿಯೇ! ನಾನು ಇವನನ್ನು ಮಿತ್ರನಾಗಿ ಸ್ವೀಕರಿಸದಿದ್ದರೆ ಎಷ್ಟು ಚೆನ್ನಾಗಿತ್ತು! info
التفاسير:

external-link copy
29 : 25

لَقَدْ اَضَلَّنِیْ عَنِ الذِّكْرِ بَعْدَ اِذْ جَآءَنِیْ ؕ— وَكَانَ الشَّیْطٰنُ لِلْاِنْسَانِ خَذُوْلًا ۟

ನನ್ನ ಬಳಿಗೆ ಉಪದೇಶವು ಬಂದ ಬಳಿಕವೂ ಅವನು ನನ್ನನ್ನು ಅದರಿಂದ ತಪ್ಪಿಸಿದನು.” ಶೈತಾನನು ಮಾನವನಿಗೆ ದ್ರೋಹವೆಸಗುವವನೇ ಆಗಿದ್ದಾನೆ. info
التفاسير:

external-link copy
30 : 25

وَقَالَ الرَّسُوْلُ یٰرَبِّ اِنَّ قَوْمِی اتَّخَذُوْا هٰذَا الْقُرْاٰنَ مَهْجُوْرًا ۟

ಸಂದೇಶವಾಹಕರು ಹೇಳುವರು: “ನನ್ನ ಪರಿಪಾಲಕನೇ, ನಿಶ್ಚಯವಾಗಿಯೂ ನನ್ನ ಸಮುದಾಯವು ಈ ಕುರ್‌ಆನನ್ನು ತೊರೆದು ಬಿಟ್ಟಿದೆ.” info
التفاسير:

external-link copy
31 : 25

وَكَذٰلِكَ جَعَلْنَا لِكُلِّ نَبِیٍّ عَدُوًّا مِّنَ الْمُجْرِمِیْنَ ؕ— وَكَفٰی بِرَبِّكَ هَادِیًا وَّنَصِیْرًا ۟

ಈ ರೀತಿ ನಾವುಎಲ್ಲಾ ಸಂದೇಶವಾಹಕರಿಗೂ ಕೆಲವು ಅಪರಾಧಿಗಳನ್ನು ಶತ್ರುಗಳಾಗಿ ಮಾಡಿದ್ದೇವೆ. ಸನ್ಮಾರ್ಗ ತೋರಿಸಲು ಮತ್ತು ಸಹಾಯ ಮಾಡಲು ನಿಮ್ಮ ಪರಿಪಾಲಕನೇ (ಅಲ್ಲಾಹನೇ) ಸಾಕು! info
التفاسير:

external-link copy
32 : 25

وَقَالَ الَّذِیْنَ كَفَرُوْا لَوْلَا نُزِّلَ عَلَیْهِ الْقُرْاٰنُ جُمْلَةً وَّاحِدَةً ۛۚ— كَذٰلِكَ ۛۚ— لِنُثَبِّتَ بِهٖ فُؤَادَكَ وَرَتَّلْنٰهُ تَرْتِیْلًا ۟

ಸತ್ಯನಿಷೇಧಿಗಳು ಕೇಳಿದರು: “ಕುರ್‌ಆನನ್ನು ಒಮ್ಮೆಲೇ ಸಂಪೂರ್ಣವಾಗಿ ಏಕೆ ಇಳಿಸಲಾಗಿಲ್ಲ?” ನಾವು ಈ ರೀತಿಯಲ್ಲಿ (ಹಂತ ಹಂತವಾಗಿ ಇಳಿಸಿದ್ದು ಏಕೆಂದರೆ) ಅದರ ಮೂಲಕ ನಿಮ್ಮ ಹೃದಯವನ್ನು ದೃಢವಾಗಿ ನಿಲ್ಲಿಸಲು. ನಾವು ಅದನ್ನು ಸ್ವಲ್ಪ ಸ್ವಲ್ಪವಾಗಿಯೇ ಪಠಿಸಿಕೊಡುತ್ತೇವೆ. info
التفاسير: