ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
24 : 22

وَهُدُوْۤا اِلَی الطَّیِّبِ مِنَ الْقَوْلِ ۖۗۚ— وَهُدُوْۤا اِلٰی صِرَاطِ الْحَمِیْدِ ۟

ಪರಿಶುದ್ಧ ಮಾತಿನ ಕಡೆಗೆ ಅವರಿಗೆ ಮಾರ್ಗದರ್ಶನ ಮಾಡಲಾಗಿದೆ. ಸ್ತುತ್ಯರ್ಹನಾದ ಅಲ್ಲಾಹನ ಮಾರ್ಗದ ಕಡೆಗೆ ಅವರಿಗೆ ಮಾರ್ಗದರ್ಶನ ಮಾಡಲಾಗಿದೆ. info
التفاسير:

external-link copy
25 : 22

اِنَّ الَّذِیْنَ كَفَرُوْا وَیَصُدُّوْنَ عَنْ سَبِیْلِ اللّٰهِ وَالْمَسْجِدِ الْحَرَامِ الَّذِیْ جَعَلْنٰهُ لِلنَّاسِ سَوَآءَ ١لْعَاكِفُ فِیْهِ وَالْبَادِ ؕ— وَمَنْ یُّرِدْ فِیْهِ بِاِلْحَادٍ بِظُلْمٍ نُّذِقْهُ مِنْ عَذَابٍ اَلِیْمٍ ۟۠

ನಿಶ್ಚಯವಾಗಿಯೂ ಸತ್ಯನಿಷೇಧಿಗಳು ಮತ್ತು ಅಲ್ಲಾಹನ ಮಾರ್ಗದಿಂದ ಹಾಗೂ (ಮಕ್ಕಾದ) ಪವಿತ್ರ ಮಸೀದಿಯಿಂದ ಜನರನ್ನು ತಡೆಯುವವರು ಯಾರೋ—ಆ ಮಸೀದಿಯನ್ನು ನಾವು ಅಲ್ಲಿನ ನಿವಾಸಿಗಳು ಮತ್ತು ಹೊರಗಿನವರು ಸೇರಿದಂತೆ ಎಲ್ಲಾ ಜನರಿಗೂ ಸಮಾನ ಹಕ್ಕಿರುವಂತೆ ಮಾಡಿದ್ದೇವೆ. ಯಾರು ಅಲ್ಲಿ ಅನ್ಯಾಯವಾಗಿ ಧರ್ಮಬಾಹಿರ ಕೃತ್ಯವನ್ನು ಮಾಡಲು ಬಯಸುತ್ತಾನೋ ಅವನಿಗೆ ನಾವು ಯಾತನಾಮಯ ಶಿಕ್ಷೆಯ ರುಚಿಯನ್ನು ತೋರಿಸುವೆವು. info
التفاسير:

external-link copy
26 : 22

وَاِذْ بَوَّاْنَا لِاِبْرٰهِیْمَ مَكَانَ الْبَیْتِ اَنْ لَّا تُشْرِكْ بِیْ شَیْـًٔا وَّطَهِّرْ بَیْتِیَ لِلطَّآىِٕفِیْنَ وَالْقَآىِٕمِیْنَ وَالرُّكَّعِ السُّجُوْدِ ۟

ನಾವು ಇಬ್ರಾಹೀಮ‌ರಿಗೆ ಆ ಭವನದ (ಕಅ‌ಬಾಲಯದ) ಸ್ಥಳವನ್ನು ನಿಗದಿಪಡಿಸಿದ ಸಂದರ್ಭ. (ನಾವು ಅವರಿಗೆ ಆಜ್ಞಾಪಿಸಿದೆವು): “ನನ್ನೊಂದಿಗೆ ಯಾರನ್ನೂ ಸಹಭಾಗಿಯಾಗಿ ಮಾಡಬೇಡಿ ಮತ್ತು ಪ್ರದಕ್ಷಿಣೆ ಮಾಡುವವರಿಗೆ, ನಿಂತು, ಬಾಗಿ ಮತ್ತು ಸಾಷ್ಟಾಂಗ ಮಾಡುತ್ತಾ ಪ್ರಾರ್ಥಿಸುವವರಿಗೆ ನನ್ನ ಭವನವನ್ನು ಶುದ್ಧೀಕರಿಸಿರಿ. info
التفاسير:

external-link copy
27 : 22

وَاَذِّنْ فِی النَّاسِ بِالْحَجِّ یَاْتُوْكَ رِجَالًا وَّعَلٰی كُلِّ ضَامِرٍ یَّاْتِیْنَ مِنْ كُلِّ فَجٍّ عَمِیْقٍ ۟ۙ

ಜನರಿಗೆ ಹಜ್ಜ್ ನಿರ್ವಹಿಸಲು ಕರೆ ನೀಡಿರಿ. ಜನರು ತಮ್ಮ ಬಳಿಗೆ ಕಾಲ್ನಡಿಗೆಯಲ್ಲಿ ಮತ್ತು ಸಣಕಲು ಒಂಟೆಗಳ ಮೇಲೇರಿ ಬರುವರು. ಅವರು ವಿದೂರವಾದ ಎಲ್ಲಾ ಸ್ಥಳಗಳಿಂದಲೂ ಬರುವರು. info
التفاسير:

external-link copy
28 : 22

لِّیَشْهَدُوْا مَنَافِعَ لَهُمْ وَیَذْكُرُوا اسْمَ اللّٰهِ فِیْۤ اَیَّامٍ مَّعْلُوْمٰتٍ عَلٰی مَا رَزَقَهُمْ مِّنْ بَهِیْمَةِ الْاَنْعَامِ ۚ— فَكُلُوْا مِنْهَا وَاَطْعِمُوا الْبَآىِٕسَ الْفَقِیْرَ ۟ؗ

ಅವರಿಗೆ ಪ್ರಯೋಜನವಾಗುವುದನ್ನು ಪಡೆಯಲು ಮತ್ತು ನಿಶ್ಚಿತ ದಿನಗಳಲ್ಲಿ ಅಲ್ಲಾಹನ ಹೆಸರನ್ನು ಉಚ್ಚರಿಸಿ ಅವನು ಒದಗಿಸಿದ ಜಾನುವಾರುಗಳನ್ನು ಬಲಿ ನೀಡಲು. ಅದರ ಮಾಂಸವನ್ನು ನೀವು ತಿನ್ನಿರಿ ಮತ್ತು ಹಸಿದ ಬಡವರಿಗೂ ತಿನ್ನಲು ನೀಡಿರಿ. info
التفاسير:

external-link copy
29 : 22

ثُمَّ لْیَقْضُوْا تَفَثَهُمْ وَلْیُوْفُوْا نُذُوْرَهُمْ وَلْیَطَّوَّفُوْا بِالْبَیْتِ الْعَتِیْقِ ۟

ನಂತರ ಅವರು ತಮ್ಮ ಕೊಳೆಯನ್ನು ನಿವಾರಿಸಲಿ,[1] ತಮ್ಮ ಹರಕೆಗಳನ್ನು ಸಂದಾಯ ಮಾಡಲಿ ಮತ್ತು ಆ ಪ್ರಾಚೀನ ಭವನಕ್ಕೆ ಪ್ರದಕ್ಷಿಣೆ ಮಾಡಲಿ.” info

[1] ಕೊಳೆ ನಿವಾರಿಸುವುದು ಎಂದರೆ ಕೂದಲು, ಉಗುರುಗಳನ್ನು ಕತ್ತರಿಸುವುದು.

التفاسير:

external-link copy
30 : 22

ذٰلِكَ ۗ— وَمَنْ یُّعَظِّمْ حُرُمٰتِ اللّٰهِ فَهُوَ خَیْرٌ لَّهٗ عِنْدَ رَبِّهٖ ؕ— وَاُحِلَّتْ لَكُمُ الْاَنْعَامُ اِلَّا مَا یُتْلٰی عَلَیْكُمْ فَاجْتَنِبُوا الرِّجْسَ مِنَ الْاَوْثَانِ وَاجْتَنِبُوْا قَوْلَ الزُّوْرِ ۟ۙ

ಇದು. ಅಲ್ಲಾಹು ಪವಿತ್ರಗೊಳಿಸಿದ್ದನ್ನು ಯಾರು ಗೌರವಿಸುತ್ತಾರೋ ಅದು ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಶ್ರೇಷ್ಠವಾಗಿದೆ. ನಿಮಗೆ ಜಾನುವಾರುಗಳನ್ನು ಧರ್ಮಸಮ್ಮತಗೊಳಿಸಲಾಗಿದೆ. ಆದರೆ ಈಗಾಗಲೇ (ನಿಷಿದ್ಧವೆಂದು) ವಿವರಿಸಲಾಗಿರುವವುಗಳ ಹೊರತು. ನೀವು ವಿಗ್ರಹಗಳ ಹೊಲಸಿನಿಂದ ದೂರವಿರಿ ಮತ್ತು ಸುಳ್ಳು ಮಾತುಗಳಿಂದಲೂ ದೂರವಿರಿ. info
التفاسير: