[1] ಒಬ್ಬ ವ್ಯಕ್ತಿಯ ಹೊಲಕ್ಕೆ ಇನ್ನೊಬ್ಬ ವ್ಯಕ್ತಿಯ ಮೇಕೆಗಳು ಹೊಕ್ಕು ಅಲ್ಲಿದ್ದ ಬೆಳೆಗಳನ್ನೆಲ್ಲಾ ನಾಶ ಮಾಡಿದ್ದವು. ಈ ಪ್ರಕರಣದ ಬಗ್ಗೆ ದಾವೂದರಿಗೆ (ಅವರ ಮೇಲೆ ಶಾಂತಿಯಿರಲಿ) ದೂರು ಬಂದಾಗ, ಮೇಕೆಗಳ ಯಜಮಾನ ಮೇಕೆಗಳನ್ನು ಬೆಳೆಗಳನ್ನು ನಾಶ ಮಾಡಿದ್ದಕ್ಕೆ ಪರಿಹಾರವಾಗಿ ಹೊಲದ ಯಜಮಾನನಿಗೆ ನೀಡಬೇಕೆಂದು ಅವರು ತೀರ್ಪು ನೀಡಿದರು. ಆದರೆ ಸುಲೈಮಾನರು (ಅವರ ಮೇಲೆ ಶಾಂತಿಯಿರಲಿ) ನೀಡಿದ ತೀರ್ಪು ಬೇರೆ ರೀತಿಯಲ್ಲಿತ್ತು. ಒಂದು ಅವಧಿಯವರೆಗೆ ಮೇಕೆಗಳ ಯಜಮಾನ ಮೇಕೆಗಳನ್ನು ಹೊಲದ ಯಜಮಾನನಿಗೆ ಮತ್ತು ಹೊಲದ ಯಜಮಾನ ಹೊಲವನ್ನು ಮೇಕೆಗಳ ಯಜಮಾನನಿಗೆ ಕೊಡಬೇಕು. ಆ ಅವಧಿಯ ತನಕ ಹೊಲದ ಯಜಮಾನ ಮೇಕೆಗಳಿಂದ ಉಪಯೋಗ ಪಡೆಯಬೇಕು. ಅಷ್ಟರಲ್ಲಿ ಮೇಕೆಗಳ ಯಜಮಾನ ಹೊಲವನ್ನು ದುರಸ್ತಿಗೊಳಿಸಿ ಮೊದಲು ಹೇಗಿತ್ತೋ ಅದೇ ರೀತಿಯಲ್ಲಿ ಮರಳಿಸಬೇಕು. ಇದರಿಂದ ಹೊಲದ ಯಜಮಾನನಿಗೆ ಅಥವಾ ಮೇಕೆಗಳ ಯಜಮಾನನಿಗೆ ನಷ್ಟವಿಲ್ಲ. ಹೊಲವೂ ದುರಸ್ತಿಯಾಗುತ್ತದೆ, ಮೇಕೆಗಳೂ ಮರಳಿ ಸಿಗುತ್ತವೆ.
[1] ಅಲ್ಲಾಹು ದಾವೂದರಿಗೆ (ಅವರ ಮೇಲೆ ಶಾಂತಿಯಿರಲಿ) ಕಬ್ಬಿಣವನ್ನು ಮೃದುಗೊಳಿಸಿ ಕೊಟ್ಟಿದ್ದನು.
[1] ಸುಲೈಮಾನರು (ಅವರ ಮೇಲೆ ಶಾಂತಿಯಿರಲಿ) ಹೇಳಿದ ಕಡೆಗೆ ಗಾಳಿ ಚಲಿಸುತ್ತಿತ್ತು. ಅವರು ಮತ್ತು ಅವರ ಆಸ್ಥಾನ ಮುಖಂಡರು ಆಸನಗಳಲ್ಲಿ ಕುಳಿತುಕೊಳ್ಳುತ್ತಿದ್ದರು. ಆ ಆಸನಗಳನ್ನು ಗಾಳಿಯು ಅವರು ಬಯಸುವ ಕಡೆಗೆ ಒಯ್ಯುತ್ತಿತ್ತು. ತಿಂಗಳುಗಳ ಕಾಲದ ದೂರವನ್ನು ಅವರು ಕೆಲವೇ ಕ್ಷಣಗಳಲ್ಲಿ ತಲುಪುತ್ತಿದ್ದರು.