[1] ವಾಸ್ತವವಾಗಿ ಹಾರೂನ್ (ಅವರ ಮೇಲೆ ಶಾಂತಿಯಿರಲಿ) ತಮ್ಮ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದ್ದರು. ಅವರು ವಿಗ್ರಹಾರಾಧನೆಯನ್ನು ಸ್ಪಷ್ಟವಾಗಿ ವಿರೋಧಿಸಿದ್ದರು. ಆದರೆ ಎಷ್ಟೇ ತಿಳಿಹೇಳಿದರೂ ಜನರು ಅವರ ಮಾತನ್ನು ಕೇಳುತ್ತಿರಲಿಲ್ಲ. ನಂತರ ಪರಿಸ್ಥಿತಿ ಎಷ್ಟು ಗಂಭೀರವಾಯಿತೆಂದರೆ ಇಸ್ರಾಯೇಲ್ ಮಕ್ಕಳಲ್ಲಿ ಎರಡು ಗುಂಪುಗಳಾದವು. ಒಂದು ಗುಂಪು ಸಮರ್ಥಿಸಿದರೆ ಇನ್ನೊಂದು ಗುಂಪು ವಿರೋಧಿಸಿತು. ಈ ಎರಡು ಗುಂಪುಗಳು ಪರಸ್ಪರ ಹೊಡೆದಾಡುವ ಸ್ಥಿತಿಗೆ ತಲುಪಿತು.