ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
56 : 2

ثُمَّ بَعَثْنٰكُمْ مِّنْ بَعْدِ مَوْتِكُمْ لَعَلَّكُمْ تَشْكُرُوْنَ ۟

ನಂತರ, ನಿಮ್ಮ ಸಾವಿನ ಬಳಿಕ ನಾವು ನಿಮಗೆ ಜೀವ ನೀಡಿದೆವು. ನೀವು ಕೃತಜ್ಞರಾಗುವುದಕ್ಕಾಗಿ.[1] info

[1] ಮೂಸಾ (ಅವರ ಮೇಲೆ ಶಾಂತಿಯಿರಲಿ) ತೂರ್ ಪರ್ವತಕ್ಕೆ ಹೋಗುವಾಗ 70 ಮಂದಿಯನ್ನು ಕರೆದೊಯ್ದಿದ್ದರು. ಹಿಂದಿರುಗಿ ಬರುವಾಗ ಅವರು ಹೇಳಿದರು: "ಓ ಮೂಸಾ! ಅಲ್ಲಾಹನನ್ನು ನಮ್ಮ ಕಣ್ಣ ಮುಂದೆ ನೇರವಾಗಿ ನೋಡುವ ತನಕ ನಿಮ್ಮ ಮಾತಿನಲ್ಲಿ ನಾವು ನಂಬಿಕೆಯಿಡುವುದಿಲ್ಲ." ಆಗ ಇದ್ದಕ್ಕಿದ್ದಂತೆ ಆಕಾಶದಲ್ಲಿ ಮಿಂಚು ಗೋಚರವಾಗಿ ಅದು ಅವರ ಮೇಲೆ ಬಿದ್ದು ಅವರೆಲ್ಲರೂ ಸತ್ತರು. ಇದರಿಂದ ಮೂಸಾ (ಅವರ ಮೇಲೆ ಶಾಂತಿಯಿರಲಿ) ತುಂಬಾ ದುಃಖಿತರಾದರು. ನಂತರ ಅವರ ಪ್ರಾರ್ಥನೆಗೆ ಉತ್ತರವಾಗಿ ಅಲ್ಲಾಹು ಅವರನ್ನು ಜೀವಂತಗೊಳಿಸಿದನು.

التفاسير: