ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
51 : 2

وَاِذْ وٰعَدْنَا مُوْسٰۤی اَرْبَعِیْنَ لَیْلَةً ثُمَّ اتَّخَذْتُمُ الْعِجْلَ مِنْ بَعْدِهٖ وَاَنْتُمْ ظٰلِمُوْنَ ۟

ನಾವು ಮೂಸಾರಿಗೆ ನಲ್ವತ್ತು ರಾತ್ರಿಗಳನ್ನು ವಾಗ್ದಾನ ಮಾಡಿದ ಸಂದರ್ಭ. ನಂತರ, ಅವರ (ನಿರ್ಗಮನದ) ಬಳಿಕ ನೀವು ಕರುವನ್ನು ದೇವರಾಗಿ ಮಾಡಿಕೊಂಡಿರಿ ಮತ್ತು ಅಕ್ರಮಿಗಳಾಗಿ ಬಿಟ್ಟಿರಿ.[1] info

[1] ಇಸ್ರಾಯೇಲ್ ಮಕ್ಕಳು ಫರೋಹನ ಸೈನ್ಯದಿಂದ ಪಾರಾಗಿ ಸೀನಾ ತಪ್ಪಲಿಗೆ ಬಂದು ನೆಲೆಸಿದರು. ಅಲ್ಲಿ ಅಲ್ಲಾಹನ ವಾಗ್ದಾನದಂತೆ ಮೂಸಾ (ಅವರ ಮೇಲೆ ಶಾಂತಿಯಿರಲಿ) ತೌರಾತ್ (ತೋರ) ಪಡೆಯಲು ನಲ್ವತ್ತು ದಿನ ತೂರ್ ಪರ್ವತಕ್ಕೆ ಹೋಗಿ ನೆಲೆಸಿದರು. ಮೂಸಾರ (ಅವರ ಮೇಲೆ ಶಾಂತಿಯಿರಲಿ) ನಿರ್ಗಮನದ ನಂತರ ಇಸ್ರಾಯೇಲ್ ಮಕ್ಕಳು ಸಾಮಿರಿ ಎಂಬಾತನ ಆದೇಶದಂತೆ ಕರುವಿನ ವಿಗ್ರಹವನ್ನು ಪೂಜಿಸತೊಡಗಿದರು.

التفاسير: