ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
243 : 2

اَلَمْ تَرَ اِلَی الَّذِیْنَ خَرَجُوْا مِنْ دِیَارِهِمْ وَهُمْ اُلُوْفٌ حَذَرَ الْمَوْتِ ۪— فَقَالَ لَهُمُ اللّٰهُ مُوْتُوْا ۫— ثُمَّ اَحْیَاهُمْ ؕ— اِنَّ اللّٰهَ لَذُوْ فَضْلٍ عَلَی النَّاسِ وَلٰكِنَّ اَكْثَرَ النَّاسِ لَا یَشْكُرُوْنَ ۟

ಸಹಸ್ರಾರು ಸಂಖ್ಯೆಯ ಜನರು ಸಾವಿನ ಭಯದಿಂದ ತಮ್ಮ ಮನೆಗಳನ್ನು ಬಿಟ್ಟು ಓಡಿದ್ದನ್ನು ನೀವು ನೋಡಿಲ್ಲವೇ?[1] ಆಗ ಅಲ್ಲಾಹು ಅವರೊಡನೆ, "ಸಾಯಿರಿ" ಎಂದು ಹೇಳಿದನು. ನಂತರ ಅವನು ಅವರಿಗೆ ಜೀವ ನೀಡಿದನು. ನಿಶ್ಚಯವಾಗಿಯೂ ಅಲ್ಲಾಹನಿಗೆ ಜನರ ಮೇಲೆ ಬಹಳ ಔದಾರ್ಯವಿದೆ. ಆದರೆ ಜನರಲ್ಲಿ ಹೆಚ್ಚಿನವರು ಕೃತಜ್ಞರಾಗುವುದಿಲ್ಲ. info

[1] ಇವರು ಯಾರು ಎಂಬುದರ ಬಗ್ಗೆ ಅಧಿಕೃತವಾದ ಯಾವುದೇ ಉಲ್ಲೇಖಗಳಿಲ್ಲ. ಕುರ್‌ಆನ್ ವ್ಯಾಖ್ಯಾನ ಗ್ರಂಥಗಳಲ್ಲಿ ಇವರನ್ನು ಇಸ್ರಾಯೇಲರಲ್ಲಿ ಸೇರಿದವರೆಂದು ಹೇಳಲಾಗಿದೆ. ಇವರಿಗೆ ಅಲ್ಲಾಹು ಪುನಃ ಜೀವ ನೀಡಲು ಪ್ರವಾದಿ ಯೆಹೆಜ್ಕೇಲರ ಪ್ರಾರ್ಥನೆಯೇ ಕಾರಣವೆಂದು ಹೇಳಲಾಗಿದೆ. ಇವರು ಧರ್ಮಯುದ್ಧದಲ್ಲಿ ಪಾಲ್ಗೊಳ್ಳಲು ಕರೆದಾಗ ಅಥವಾ ಊರಲ್ಲಿ ಪ್ಲೇಗ್ ರೋಗ ಹರಡಿದಾಗ ಸಾವಿನ ಭಯದಿಂದ ಊರು ಬಿಟ್ಟು ಓಡಿದ್ದರು.

التفاسير: