ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
129 : 2

رَبَّنَا وَابْعَثْ فِیْهِمْ رَسُوْلًا مِّنْهُمْ یَتْلُوْا عَلَیْهِمْ اٰیٰتِكَ وَیُعَلِّمُهُمُ الْكِتٰبَ وَالْحِكْمَةَ وَیُزَكِّیْهِمْ ؕ— اِنَّكَ اَنْتَ الْعَزِیْزُ الْحَكِیْمُ ۟۠

ಓ ನಮ್ಮ ಪರಿಪಾಲಕನೇ! ನಿನ್ನ ದೃಷ್ಟಾಂತಗಳನ್ನು ಪಠಿಸುವ, ಗ್ರಂಥವನ್ನು ಹಾಗೂ ವಿವೇಕವನ್ನು ಕಲಿಸಿಕೊಡುವ ಮತ್ತು ಅವರನ್ನು ಶುದ್ಧೀಕರಿಸುವ ಒಬ್ಬ ಸಂದೇಶವಾಹಕರನ್ನು ಅವರಿಂದಲೇ ಅವರಿಗೆ ಕಳುಹಿಸು.[1] ನಿಶ್ಚಯವಾಗಿಯೂ ನೀನು ಪ್ರಬಲನು ಮತ್ತು ವಿವೇಕಪೂರ್ಣನಾಗಿರುವೆ.” info

[1] ಇಬ್ರಾಹೀಮ್ ಮತ್ತು ಇಸ್ಮಾಈಲ್ (ಅವರಿಬ್ಬರ ಮೇಲೆ ಶಾಂತಿಯಿರಲಿ) ಪ್ರಾರ್ಥಿಸಿದ ಈ ಪ್ರಾರ್ಥನೆಯನ್ನು ಸ್ವೀಕರಿಸಿ ಸರ್ವಶಕ್ತನಾದ ಅಲ್ಲಾಹು ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರನ್ನು ಪ್ರವಾದಿಯಾಗಿ ಕಳುಹಿಸಿದನು. "ನಾನು ನನ್ನ ತಂದೆ ಇಬ್ರಾಹೀಮರ ಪ್ರಾರ್ಥನೆಯ ಫಲವಾಗಿದ್ದೇನೆ" ಎಂದು ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಿದ್ದುದು ಈ ಕಾರಣದಿಂದಾಗಿದೆ.

التفاسير: