ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
125 : 2

وَاِذْ جَعَلْنَا الْبَیْتَ مَثَابَةً لِّلنَّاسِ وَاَمْنًا ؕ— وَاتَّخِذُوْا مِنْ مَّقَامِ اِبْرٰهٖمَ مُصَلًّی ؕ— وَعَهِدْنَاۤ اِلٰۤی اِبْرٰهٖمَ وَاِسْمٰعِیْلَ اَنْ طَهِّرَا بَیْتِیَ لِلطَّآىِٕفِیْنَ وَالْعٰكِفِیْنَ وَالرُّكَّعِ السُّجُوْدِ ۟

ನಾವು ಆ ಭವನವನ್ನು (ಕಅ‌ಬಾಲಯವನ್ನು) ಜನರಿಗೆ ಪುಣ್ಯಸ್ಥಳವಾಗಿ ಮತ್ತು ನಿರ್ಭಯ ಸ್ಥಳವಾಗಿ ಮಾಡಿದ ಸಂದರ್ಭ. ಇಬ್ರಾಹೀಮರು ನಿಂತ ಸ್ಥಳವನ್ನು ನಮಾಝಿನ ಸ್ಥಳವಾಗಿ ಮಾಡಿಕೊಳ್ಳಿರಿ. “ಪ್ರದಕ್ಷಿಣೆ ಮಾಡುವವರಿಗೆ, ಧ್ಯಾನ ಮಗ್ನರಾಗಿ ಕೂರುವವರಿಗೆ, ತಲೆಬಾಗುವವರಿಗೆ ಮತ್ತು ಸಾಷ್ಟಾಂಗ ಮಾಡುವವರಿಗೆ ನನ್ನ ಭವನವನ್ನು ಶುದ್ಧೀಕರಿಸಿರಿ” ಎಂದು ನಾವು ಇಬ್ರಾಹೀಮ್ ಮತ್ತು ಇಸ್ಮಾಈಲರಿಗೆ ಆದೇಶಿಸಿದೆವು. info
التفاسير: