ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
106 : 2

مَا نَنْسَخْ مِنْ اٰیَةٍ اَوْ نُنْسِهَا نَاْتِ بِخَیْرٍ مِّنْهَاۤ اَوْ مِثْلِهَا ؕ— اَلَمْ تَعْلَمْ اَنَّ اللّٰهَ عَلٰی كُلِّ شَیْءٍ قَدِیْرٌ ۟

ನಾವು ಯಾವುದಾದರೂ ವಚನವನ್ನು ರದ್ದುಗೊಳಿಸಿದರೆ, ಅಥವಾ ಮರೆಯುವಂತೆ ಮಾಡಿದರೆ, ಅದಕ್ಕಿಂತಲೂ ಉತ್ತಮವಾದುದನ್ನು ಅಥವಾ ಅದಕ್ಕೆ ಸಮಾನವಾದುದನ್ನು ತರುವೆವು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನೆಂದು ನಿಮಗೆ ತಿಳಿದಿಲ್ಲವೇ? info
التفاسير:

external-link copy
107 : 2

اَلَمْ تَعْلَمْ اَنَّ اللّٰهَ لَهٗ مُلْكُ السَّمٰوٰتِ وَالْاَرْضِ ؕ— وَمَا لَكُمْ مِّنْ دُوْنِ اللّٰهِ مِنْ وَّلِیٍّ وَّلَا نَصِیْرٍ ۟

ಭೂಮ್ಯಾಕಾಶಗಳ ಸಾರ್ವಭೌಮತ್ವವು ಅಲ್ಲಾಹನಿಗೆ ಮಾತ್ರ ಸೇರಿದ್ದೆಂದು ಮತ್ತು ಅಲ್ಲಾಹನ ಹೊರತು ನಿಮಗೆ ಯಾವುದೇ ರಕ್ಷಕನೋ, ಸಹಾಯಕನೋ ಇಲ್ಲವೆಂದು ನಿಮಗೆ ತಿಳಿದಿಲ್ಲವೇ? info
التفاسير:

external-link copy
108 : 2

اَمْ تُرِیْدُوْنَ اَنْ تَسْـَٔلُوْا رَسُوْلَكُمْ كَمَا سُىِٕلَ مُوْسٰی مِنْ قَبْلُ ؕ— وَمَنْ یَّتَبَدَّلِ الْكُفْرَ بِالْاِیْمَانِ فَقَدْ ضَلَّ سَوَآءَ السَّبِیْلِ ۟

ಹಿಂದೆ ಮೂಸಾರೊಡನೆ ಅವರ ಅನುಯಾಯಿಗಳು ಕೇಳಿದಂತೆ ನಿಮ್ಮ ಸಂದೇಶವಾಹಕರೊಡನೆ ಕೇಳಲು ನೀವು ಬಯಸುತ್ತೀರಾ? ಯಾರು ಸತ್ಯವಿಶ್ವಾಸವನ್ನು ಸತ್ಯನಿಷೇಧಕ್ಕೆ ಬದಲಾಯಿಸುತ್ತಾನೋ ಅವನು ನೇರ ಮಾರ್ಗದಿಂದ ತಪ್ಪಿ ಹೋಗುತ್ತಾನೆ. info
التفاسير:

external-link copy
109 : 2

وَدَّ كَثِیْرٌ مِّنْ اَهْلِ الْكِتٰبِ لَوْ یَرُدُّوْنَكُمْ مِّنْ بَعْدِ اِیْمَانِكُمْ كُفَّارًا ۖۚ— حَسَدًا مِّنْ عِنْدِ اَنْفُسِهِمْ مِّنْ بَعْدِ مَا تَبَیَّنَ لَهُمُ الْحَقُّ ۚ— فَاعْفُوْا وَاصْفَحُوْا حَتّٰی یَاْتِیَ اللّٰهُ بِاَمْرِهٖ ؕ— اِنَّ اللّٰهَ عَلٰی كُلِّ شَیْءٍ قَدِیْرٌ ۟

ಗ್ರಂಥದವರಲ್ಲಿ ಹೆಚ್ಚಿನವರು ಅವರಿಗೆ ಸತ್ಯವೇನೆಂದು ಸ್ಪಷ್ಟವಾದ ಬಳಿಕವೂ ಕೇವಲ ಅಸೂಯೆ ಮತ್ತು ದ್ವೇಷದಿಂದ ನಿಮ್ಮನ್ನು ಸತ್ಯವಿಶ್ವಾಸದಿಂದ ತಪ್ಪಿಸಿ ಸತ್ಯನಿಷೇಧಿಗಳಾಗಿ ಮಾಡಲು ಬಯಸುತ್ತಾರೆ. ಅಲ್ಲಾಹು ತನ್ನ ಆಜ್ಞೆಯನ್ನು ತರುವವರೆಗೆ ನೀವು ಅವರನ್ನು ಕ್ಷಮಿಸಿರಿ ಮತ್ತು ನಿರ್ಲಕ್ಷಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. info
التفاسير:

external-link copy
110 : 2

وَاَقِیْمُوا الصَّلٰوةَ وَاٰتُوا الزَّكٰوةَ ؕ— وَمَا تُقَدِّمُوْا لِاَنْفُسِكُمْ مِّنْ خَیْرٍ تَجِدُوْهُ عِنْدَ اللّٰهِ ؕ— اِنَّ اللّٰهَ بِمَا تَعْمَلُوْنَ بَصِیْرٌ ۟

ನೀವು ನಮಾಝ್ ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ. ನೀವು ನಿಮಗಾಗಿ ಯಾವೆಲ್ಲಾ ಸತ್ಕಾರ್ಯಗಳನ್ನು ಮುಂದಕ್ಕೆ ಕಳುಹಿಸುತ್ತೀರೋ ಅವೆಲ್ಲವನ್ನೂ ನೀವು ಅಲ್ಲಾಹನ ಬಳಿ ಕಾಣುವಿರಿ. ನಿಶ್ಚಯವಾಗಿಯೂ ಅಲ್ಲಾಹು ನೀವು ಮಾಡುವ ಕರ್ಮಗಳನ್ನು ನೋಡುತ್ತಿದ್ದಾನೆ. info
التفاسير:

external-link copy
111 : 2

وَقَالُوْا لَنْ یَّدْخُلَ الْجَنَّةَ اِلَّا مَنْ كَانَ هُوْدًا اَوْ نَصٰرٰی ؕ— تِلْكَ اَمَانِیُّهُمْ ؕ— قُلْ هَاتُوْا بُرْهَانَكُمْ اِنْ كُنْتُمْ صٰدِقِیْنَ ۟

ಅವರು ಹೇಳುತ್ತಾರೆ: “ಯಹೂದಿ ಅಥವಾ ಕ್ರೈಸ್ತರ ಹೊರತು ಇನ್ನಾರೂ ಸ್ವರ್ಗಕ್ಕೆ ಹೋಗುವುದಿಲ್ಲ.” ಅವೆಲ್ಲವೂ ಅವರ ಗುಮಾನಿಗಳಾಗಿವೆ. ಹೇಳಿರಿ: “ನೀವು ಸತ್ಯವಂತರಾಗಿದ್ದರೆ ನಿಮ್ಮ ಪುರಾವೆಯನ್ನು ತನ್ನಿರಿ.” info
التفاسير:

external-link copy
112 : 2

بَلٰی ۗ— مَنْ اَسْلَمَ وَجْهَهٗ لِلّٰهِ وَهُوَ مُحْسِنٌ فَلَهٗۤ اَجْرُهٗ عِنْدَ رَبِّهٖ ۪— وَلَا خَوْفٌ عَلَیْهِمْ وَلَا هُمْ یَحْزَنُوْنَ ۟۠

ಹೌದು! ಯಾರು ನಿಷ್ಕಳಂಕತೆಯಿಂದ ತನ್ನನ್ನು ತಾನೇ ಅಲ್ಲಾಹನಿಗೆ ಶರಣಾಗಿಸುತ್ತಾನೋ ಅವನಿಗೆ ಅವನ ಪ್ರತಿಫಲವು ಅವನ ಪರಿಪಾಲಕನ (ಅಲ್ಲಾಹನ) ಬಳಿಯಿದೆ. ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ. info
التفاسير: