[1] ತಹಜ್ಜುದ್ ನಮಾಝ್ ಎಂದರೆ ರಾತ್ರಿಯಲ್ಲಿ ಎದ್ದು ನಿರ್ವಹಿಸುವ ನಮಾಝ್. ಈ ನಮಾಝ್ ಕಡ್ಡಾಯವಲ್ಲ. ಆದರೆ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದು ಕಡ್ಡಾಯವಾಗಿದೆ. ಸ್ತುತ್ಯರ್ಹ ಸ್ಥಾನ (ಮಕಾಮೆ ಮಹ್ಮೂದ್) ಎಂದರೆ ಪುನರುತ್ಥಾನ ದಿನದಂದು ಅಲ್ಲಾಹು ಪ್ರವಾದಿ ಮುಹಮ್ಮದರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿಶೇಷವಾಗಿ ನೀಡುವ ಸ್ಥಾನ. ಜನರೆಲ್ಲರನ್ನೂ ವಿಚಾರಣೆಗೆ ಕರೆಯಲು ಅವರು ಈ ಸ್ಥಾನದಲ್ಲಿ ನಿಂತು ಅತಿದೊಡ್ಡ ಶಿಫಾರಸು (ಶಫಾಅತ್ ಉಝ್ಮಾ) ಮಾಡುತ್ತಾರೆ.