ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
60 : 17

وَاِذْ قُلْنَا لَكَ اِنَّ رَبَّكَ اَحَاطَ بِالنَّاسِ ؕ— وَمَا جَعَلْنَا الرُّءْیَا الَّتِیْۤ اَرَیْنٰكَ اِلَّا فِتْنَةً لِّلنَّاسِ وَالشَّجَرَةَ الْمَلْعُوْنَةَ فِی الْقُرْاٰنِ ؕ— وَنُخَوِّفُهُمْ ۙ— فَمَا یَزِیْدُهُمْ اِلَّا طُغْیَانًا كَبِیْرًا ۟۠

“ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಜನರನ್ನು ಆವರಿಸಿದ್ದಾನೆ” ಎಂದು ನಾವು ಹೇಳಿದ ಸಂದರ್ಭ(ವನ್ನು ಸ್ಮರಿಸಿ). ನಾವು ನಿಮಗೆ ತೋರಿಸಿದ ಆ ದೃಶ್ಯವನ್ನು ನಾವು ಜನರಿಗೆ ಒಂದು ಪರೀಕ್ಷೆಯನ್ನಾಗಿ ಮಾಡಿದ್ದೆವು. ಅದೇ ರೀತಿ ಕುರ್‌ಆನ್‍ನಲ್ಲಿ ಶಪಿಸಲಾದ ಆ ಮರವನ್ನು ಕೂಡ. ನಾವು ಅವರನ್ನು ಹೆದರಿಸುತ್ತೇವೆ. ಆದರೆ ಅದು ಅವರಿಗೆ ಮಹಾ ಅತಿರೇಕವನ್ನು ಮಾತ್ರ ಹೆಚ್ಚಿಸುತ್ತದೆ.[1] info

[1] ಪ್ರವಾದಿ ಮುಹಮ್ಮದರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಕಾಶಾರೋಹಣ ಮಾಡಿದಾಗ ಅಲ್ಲಿ ನರಕವನ್ನು ಮತ್ತು ಅದರ ಶಿಕ್ಷೆಗಳನ್ನು ನೋಡಿದರು. ಅದನ್ನು ಅವರಿಗೆ ಜನರಿಗೆ ವಿವರಿಸಿದಾಗ ಸತ್ಯನಿಷೇಧಿಗಳು ತೀವ್ರವಾಗಿ ಲೇವಡಿ ಮಾಡಿದರು. ನರಕದಲ್ಲಿರುವ ಝಕ್ಕೂಮ್ ಮರದ ಬಗ್ಗೆ ಹೇಳಿದಾಗಲೂ ವಿರೋಧಿಗಳು ತೀವ್ರವಾಗಿ ಹಾಸ್ಯ ಮಾಡಿದರು.

التفاسير: