ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
57 : 17

اُولٰٓىِٕكَ الَّذِیْنَ یَدْعُوْنَ یَبْتَغُوْنَ اِلٰی رَبِّهِمُ الْوَسِیْلَةَ اَیُّهُمْ اَقْرَبُ وَیَرْجُوْنَ رَحْمَتَهٗ وَیَخَافُوْنَ عَذَابَهٗ ؕ— اِنَّ عَذَابَ رَبِّكَ كَانَ مَحْذُوْرًا ۟

ಅವರು ಯಾರನ್ನು ಕರೆದು ಪ್ರಾರ್ಥಿಸುತ್ತಿದ್ದಾರೋ, ಅವರು ಅವರ ಪರಿಪಾಲಕನ (ಅಲ್ಲಾಹನ) ಬಳಿಗೆ ಹತ್ತಿರವಾಗುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ.[1] ಅವರಲ್ಲಿ ಅಲ್ಲಾಹನಿಗೆ ಹೆಚ್ಚು ಹತ್ತಿರವಾಗುವುದು ಯಾರು ಎಂದು. ಅವರು ಅವನ ದಯೆಯನ್ನು ಆಶಿಸುತ್ತಾರೆ ಮತ್ತು ಅವನ ಶಿಕ್ಷೆಯನ್ನು ಹೆದರುತ್ತಾರೆ. ಖಂಡಿತವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಶಿಕ್ಷೆಯು ಹೆದರಬೇಕಾದುದೇ ಆಗಿದೆ. info

[1] ಅಂದರೆ ದೇವದೂತರುಗಳು, ಪ್ರವಾದಿಗಳು ಮತ್ತು ಮಹಾಪುರುಷರು. ಬಹುದೇವಾರಾಧಕರಲ್ಲಿ ಅನೇಕರು ದೇವದೂತರುಗಳನ್ನು ಆರಾಧಿಸುತ್ತಿದ್ದರು. ಯಹೂದಿಗಳು ಪ್ರವಾದಿ ಉಝೈರ್ (ಎಜ್ರಾ) ರನ್ನು ಮತ್ತು ಕ್ರೈಸ್ತರು ಪ್ರವಾದಿ ಈಸಾ (ಯೇಸು) ರನ್ನು ಅಲ್ಲಾಹನ ಪುತ್ರರೆಂದು ಕರೆದು ಆರಾಧಿಸುತ್ತಾರೆ. ಕೆಲವರು ಸಮಾಧಿಗಳಲ್ಲಿರುವ ಮಹಾಪುರುಷರನ್ನು ಆರಾಧಿಸುತ್ತಾರೆ. ವಾಸ್ತವವಾಗಿ ಇವರೆಲ್ಲರೂ ಅಲ್ಲಾಹನ ಇಷ್ಟದಾಸರಾಗಿದ್ದಾರೆ ಮತ್ತು ಅಲ್ಲಾಹನಿಗೆ ಸಮೀಪವಾಗುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ನೀವು ಅವರನ್ನು ಆರಾಧಿಸುತ್ತಿರುವ ಬಗ್ಗೆ ಅವರಿಗೆ ಯಾವುದೇ ಜ್ಞಾನವಿಲ್ಲ.

التفاسير: