ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
29 : 13

اَلَّذِیْنَ اٰمَنُوْا وَعَمِلُوا الصّٰلِحٰتِ طُوْبٰی لَهُمْ وَحُسْنُ مَاٰبٍ ۟

ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅವರಿಗೆ ಮಂಗಳಮಯ ಸ್ಥಿತಿಯಿದೆ; ಅತ್ಯುತ್ತಮ ವಾಸ್ತವ್ಯವೂ ಇದೆ. info
التفاسير:

external-link copy
30 : 13

كَذٰلِكَ اَرْسَلْنٰكَ فِیْۤ اُمَّةٍ قَدْ خَلَتْ مِنْ قَبْلِهَاۤ اُمَمٌ لِّتَتْلُوَاۡ عَلَیْهِمُ الَّذِیْۤ اَوْحَیْنَاۤ اِلَیْكَ وَهُمْ یَكْفُرُوْنَ بِالرَّحْمٰنِ ؕ— قُلْ هُوَ رَبِّیْ لَاۤ اِلٰهَ اِلَّا هُوَ ۚ— عَلَیْهِ تَوَكَّلْتُ وَاِلَیْهِ مَتَابِ ۟

ಈ ರೀತಿಯಲ್ಲಿ ನಾವು ನಿಮ್ಮನ್ನು ಒಂದು ಸಮುದಾಯಕ್ಕೆ ಸಂದೇಶವಾಹಕರನ್ನಾಗಿ ಕಳುಹಿಸಿದ್ದೇವೆ—ಅದಕ್ಕಿಂತ ಮೊದಲು ಅನೇಕ ಸಮುದಾಯಗಳು ಕಳೆದು ಹೋಗಿವೆ—ನಾವು ನಿಮಗೆ ನೀಡಿದ ದೇವವಾಣಿಗಳನ್ನು ಅವರಿಗೆ ಓದಿಕೊಡುವುದಕ್ಕಾಗಿ. ಅವರು ಪರಮ ದಯಾಮಯನನ್ನು (ಅಲ್ಲಾಹನನ್ನು) ನಿಷೇಧಿಸುತ್ತಾರೆ. ಹೇಳಿರಿ: “ಅವನೇ ನನ್ನ ಪರಿಪಾಲಕನು. ಅವನ ಹೊರತು ಆರಾಧಿಸಲು ಅರ್ಹರಾದ ಬೇರೆ ದೇವರಿಲ್ಲ. ನಾನು ಅವನಲ್ಲಿ ಭರವಸೆಯಿಟ್ಟಿದ್ದೇನೆ. ನಾನು ಮರಳಿಹೋಗುವುದು ಅವನ ಬಳಿಗೇ ಆಗಿದೆ.” info
التفاسير:

external-link copy
31 : 13

وَلَوْ اَنَّ قُرْاٰنًا سُیِّرَتْ بِهِ الْجِبَالُ اَوْ قُطِّعَتْ بِهِ الْاَرْضُ اَوْ كُلِّمَ بِهِ الْمَوْتٰی ؕ— بَلْ لِّلّٰهِ الْاَمْرُ جَمِیْعًا ؕ— اَفَلَمْ یَایْـَٔسِ الَّذِیْنَ اٰمَنُوْۤا اَنْ لَّوْ یَشَآءُ اللّٰهُ لَهَدَی النَّاسَ جَمِیْعًا ؕ— وَلَا یَزَالُ الَّذِیْنَ كَفَرُوْا تُصِیْبُهُمْ بِمَا صَنَعُوْا قَارِعَةٌ اَوْ تَحُلُّ قَرِیْبًا مِّنْ دَارِهِمْ حَتّٰی یَاْتِیَ وَعْدُ اللّٰهِ ؕ— اِنَّ اللّٰهَ لَا یُخْلِفُ الْمِیْعَادَ ۟۠

ಯಾವುದೇ ಕುರ್‌ಆನಿನ (ದೈವಿಕ ಗ್ರಂಥದ) ಮೂಲಕ ಬೆಟ್ಟಗಳನ್ನು ಚಲಿಸುವಂತೆ, ಭೂಮಿ ನುಚ್ಚುನೂರಾಗುವಂತೆ, ಅಥವಾ ಸತ್ತವನು ಮಾತನಾಡುವಂತೆ ಮಾಡಲಾದರೂ (ಅವರು ಸತ್ಯವಿಶ್ವಾಸಿಗಳಾಗಲಾರರು). ವಾಸ್ತವವಾಗಿ, ಎಲ್ಲವೂ ಅಲ್ಲಾಹನ ನಿಯಂತ್ರಣದಲ್ಲಿವೆ. ಅಲ್ಲಾಹು ಇಚ್ಛಿಸುತ್ತಿದ್ದರೆ ಮನುಷ್ಯರೆಲ್ಲರನ್ನೂ ಅವನು ಸನ್ಮಾರ್ಗದಲ್ಲಿ ಸೇರಿಸುತ್ತಿದ್ದನೆಂದು ಸತ್ಯವಿಶ್ವಾಸಿಗಳಿಗೆ ತಿಳಿದಿಲ್ಲವೇ? ಸತ್ಯನಿಷೇಧಿಗಳಿಗೆ ಅವರು ಮಾಡಿದ ದುಷ್ಕರ್ಮಗಳ ನಿಮಿತ್ತ ಯಾವುದಾದರೂ ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ. ಅಥವಾ ಅವರ ಮನೆಗಳ ಸಮೀಪವೇ ಅದು ಎರಗಬಹುದು. ಎಲ್ಲಿಯವರೆಗೆಂದರೆ, ಅಲ್ಲಾಹನ ವಾಗ್ದಾನವು ಬರುವ ತನಕ. ನಿಶ್ಚಯವಾಗಿಯೂ ಅಲ್ಲಾಹು ವಾಗ್ದಾನಗಳನ್ನು ಉಲ್ಲಂಘಿಸುವುದಿಲ್ಲ. info
التفاسير:

external-link copy
32 : 13

وَلَقَدِ اسْتُهْزِئَ بِرُسُلٍ مِّنْ قَبْلِكَ فَاَمْلَیْتُ لِلَّذِیْنَ كَفَرُوْا ثُمَّ اَخَذْتُهُمْ ۫— فَكَیْفَ كَانَ عِقَابِ ۟

ನಿಮಗಿಂತ ಮೊದಲು ಕೂಡ ಸಂದೇಶವಾಹಕರುಗಳು ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಆಗಲೂ ನಾನು ಸತ್ಯನಿಷೇಧಿಗಳಿಗೆ ಕಾಲಾವಕಾಶ ನೀಡಿದ್ದೆ. ನಂತರ ಅವರನ್ನು ಹಿಡಿದು ಬಿಟ್ಟೆ. ಆಗ ನನ್ನ ಶಿಕ್ಷೆ ಹೇಗಿತ್ತು? info
التفاسير:

external-link copy
33 : 13

اَفَمَنْ هُوَ قَآىِٕمٌ عَلٰی كُلِّ نَفْسٍ بِمَا كَسَبَتْ ۚ— وَجَعَلُوْا لِلّٰهِ شُرَكَآءَ ؕ— قُلْ سَمُّوْهُمْ ؕ— اَمْ تُنَبِّـُٔوْنَهٗ بِمَا لَا یَعْلَمُ فِی الْاَرْضِ اَمْ بِظَاهِرٍ مِّنَ الْقَوْلِ ؕ— بَلْ زُیِّنَ لِلَّذِیْنَ كَفَرُوْا مَكْرُهُمْ وَصُدُّوْا عَنِ السَّبِیْلِ ؕ— وَمَنْ یُّضْلِلِ اللّٰهُ فَمَا لَهٗ مِنْ هَادٍ ۟

ಪ್ರತಿಯೊಬ್ಬ ಮನುಷ್ಯನು ಮಾಡಿದ ಕರ್ಮಗಳ ಮೇಲ್ನೋಟ ವಹಿಸುವ ಅಲ್ಲಾಹು (ಏನೂ ತಿಳಿಯದವನೇ?) ಅವರು (ಇತರ ದೇವರುಗಳನ್ನು) ಅಲ್ಲಾಹನಿಗೆ ಸಹಭಾಗಿಗಳಾಗಿ ಮಾಡಿದರು. ಹೇಳಿರಿ: “ಅವರ ಹೆಸರನ್ನು ಹೇಳಿರಿ. ಭೂಮಿಯಲ್ಲಿ ಅಲ್ಲಾಹನಿಗೆ ತಿಳಿಯದಿರುವ ವಿಷಯವನ್ನು ನೀವು ಅವನಿಗೆ ತಿಳಿಸುತ್ತಿದ್ದೀರಾ? ಅಥವಾ ನೀವು ಕೇವಲ ಊಹಿಸಿ ಹಾಗೆ ಹೇಳುತ್ತಿದ್ದೀರಾ?”[1] ಅಲ್ಲ, ವಾಸ್ತವವಾಗಿ ಸತ್ಯನಿಷೇಧಿಗಳಿಗೆ ಅವರ ತಂತ್ರಗಳನ್ನು ಆಕರ್ಷಕವಾಗಿ ತೋರಿಸಲಾಗಿದೆ ಮತ್ತು ಅವರನ್ನು ಸತ್ಯಮಾರ್ಗದಿಂದ ತಡೆಯಲಾಗಿದೆ. ಅಲ್ಲಾಹು ಯಾರನ್ನು ದಾರಿತಪ್ಪಿಸುತ್ತಾನೋ ಅವನಿಗೆ ದಾರಿ ತೋರಿಸುವವರು ಯಾರೂ ಇಲ್ಲ. info

[1] ಅಂದರೆ ಅಲ್ಲಾಹನ ಹೊರತು ಬೇರೆ ದೇವರುಗಳಿದ್ದಾರೆಂಬ ವಿಷಯ ಅಲ್ಲಾಹನಿಗೆ ತಿಳಿದಿಲ್ಲ. ನೀವು ಆರಾಧಿಸುತ್ತಿರುವ ವಿಗ್ರಹಗಳು ದೇವರುಗಳೆಂಬುದಕ್ಕೆ ಯಾವುದೇ ಆಧಾರವಿಲ್ಲ. ನೀವು ಹೇಳುತ್ತಿರುವ ನಿಮ್ಮ ದೇವರುಗಳ ಹೆಸರುಗಳನ್ನು ಅಲ್ಲಾಹು ಅವನ ಗ್ರಂಥಗಳಲ್ಲಿ ಅವತೀರ್ಣಗೊಳಿಸಿಲ್ಲ. ಅವು ನೀವು ಮತ್ತು ಪೂರ್ವಜರು ಇಟ್ಟ ಹೆಸರುಗಳಾಗಿವೆ.

التفاسير:

external-link copy
34 : 13

لَهُمْ عَذَابٌ فِی الْحَیٰوةِ الدُّنْیَا وَلَعَذَابُ الْاٰخِرَةِ اَشَقُّ ۚ— وَمَا لَهُمْ مِّنَ اللّٰهِ مِنْ وَّاقٍ ۟

ಅವರಿಗೆ ಇಹಲೋಕದಲ್ಲೂ ಶಿಕ್ಷೆಯಿದೆ. ಪರಲೋಕದ ಶಿಕ್ಷೆಯಂತೂ ಅತಿಕಠೋರವಾಗಿದೆ. ಅವರನ್ನು ಅಲ್ಲಾಹನ ಶಿಕ್ಷೆಯಿಂದ ಕಾಪಾಡುವವರು ಯಾರೂ ಇಲ್ಲ. info
التفاسير: