ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
100 : 12

وَرَفَعَ اَبَوَیْهِ عَلَی الْعَرْشِ وَخَرُّوْا لَهٗ سُجَّدًا ۚ— وَقَالَ یٰۤاَبَتِ هٰذَا تَاْوِیْلُ رُءْیَایَ مِنْ قَبْلُ ؗ— قَدْ جَعَلَهَا رَبِّیْ حَقًّا ؕ— وَقَدْ اَحْسَنَ بِیْۤ اِذْ اَخْرَجَنِیْ مِنَ السِّجْنِ وَجَآءَ بِكُمْ مِّنَ الْبَدْوِ مِنْ بَعْدِ اَنْ نَّزَغَ الشَّیْطٰنُ بَیْنِیْ وَبَیْنَ اِخْوَتِیْ ؕ— اِنَّ رَبِّیْ لَطِیْفٌ لِّمَا یَشَآءُ ؕ— اِنَّهٗ هُوَ الْعَلِیْمُ الْحَكِیْمُ ۟

ಅವರು ತಮ್ಮ ತಂದೆ-ತಾಯಿಯನ್ನು ಸಿಂಹಾಸನಕ್ಕೇರಿಸಿ ಕೂರಿಸಿದರು. ಅವರೆಲ್ಲರೂ ಯೂಸುಫರ ಮುಂದೆ ಸಾಷ್ಟಾಂಗ ಮಾಡುತ್ತಾ ಬಿದ್ದರು. ಯೂಸುಫ್ ಹೇಳಿದರು: “ಅಪ್ಪಾಜಿ! ಇದೇ ನಾನು ಆವತ್ತು ಕಂಡ ಕನಸಿನ ವ್ಯಾಖ್ಯಾನ. ನನ್ನ ಪರಿಪಾಲಕನು (ಅಲ್ಲಾಹು) ಅದನ್ನು ನಿಜಗೊಳಿಸಿದ್ದಾನೆ. ನನ್ನನ್ನು ಕಾರಾಗೃಹದಿಂದ ಹೊರತಂದಾಗ, ಮತ್ತು ನನ್ನ ಹಾಗೂ ನನ್ನ ಸಹೋದರರ ಮಧ್ಯೆ ಶೈತಾನನು ದ್ವೇಷ ಮೂಡಿಸಿದ ನಂತರವೂ ನಿಮ್ಮನ್ನು ಮರುಭೂಮಿಯಿಂದ ಇಲ್ಲಿಗೆ ಕರೆತಂದಾಗ ಅವನು ನನಗೆ ಬಹಳ ಉಪಕಾರ ಮಾಡಿದ್ದಾನೆ. ನಿಶ್ಚಯವಾಗಿಯೂ ನನ್ನ ಪರಿಪಾಲಕನು (ಅಲ್ಲಾಹು) ಅವನು ಬಯಸುವುದನ್ನು ಬಹಳ ನಾಜೂಕಾಗಿ ನಿರ್ವಹಿಸುತ್ತಾನೆ. ನಿಜಕ್ಕೂ ಅವನು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.” info
التفاسير: